ಈ ಕಾಲದಲ್ಲಿ ತಿನ್ನಬೇಕಾದ ಋತುಮಾನದ ಹಣ್ಣುಗಳು:
ನೇರಳೆ ಹಣ್ಣು
ನಾರು, ಖನಿಜಗಳು ಹಾಗೂ ಜೀವಸತ್ವಗಳು ತುಂಬಿರುವ ಈ ಹಣ್ಣು ಮಧುಮೇಹಿಗಳಿಗೆ ಮತ್ತು ಇತರರಿಗೂ ಒಳ್ಳೆಯದು.
ಪೇರ್/ಮರಸೇಬು
ಫೋಲೇಟ್‌ಗಳು, ಖನಿಜಗಳು, ಮತ್ತು ಜೀವಸತ್ವಗಳನ್ನು ಹೊಂದಿರುವ ಈ ಹಣ್ಣು ನಾರಿನಿಂದ ಕೂಡಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು
ಬರ‍್ರಿಗಳು
ಹಲವು ವಿಟಮಿನ್‌ಗಳು ಹಾಗೂ ನಾರನ್ನು ಹೊಂದಿರುವ ಈ ಹಣ್ಣು ಉತ್ಕರ್ಷಣ ನಿರೋಧಗಳನ್ನು ಸಹ ಹೊಂದಿದೆ.
ಕಿತ್ತಳೆ
ವಿಟಮಿನ್ ಸಿ ಮತ್ತು ಎ ಅಂಶಗಳನ್ನು ಹೊಂದಿರುವ ಕಿತ್ತಳೆಯಲ್ಲಿ ಫೋಲೇಟ್ ಹಾಗೂ ನಾರು ಹೆಚ್ಚಾಗಿರುತ್ತದೆ.
ಸೇಬು
ವಿಟಮಿನ್ ಸಿ ಮತ್ತು ನಾರನ್ನು ಹೊಂದಿರುವ ಸೇಬಿನಲ್ಲಿ ರೋಗ ನಿರೋಧಕಗಳು ಹೇರಳವಾಗಿವೆ.
ಪೀಚ್
ವಿಟಮಿನ್ ಸಿ, ಪೋಟಾಶಿಯಂ ಹಾಗೂ ಕಬ್ಬಿಣಾಂಶ ಈ ಹಣ್ಣಿನಿಂದ ಸಿಗುತ್ತದೆ
ಪ್ಲಮ್
ಈ ಹಣ್ಣಿನಲ್ಲಿ ನಾರು, ವಿಟಮಿನ್ ಸಿ, ಮತ್ತು ಖನಿಜಗಳು ಹೇರಳವಾಗಿ.
ಬಟರ್ ಪ್ರೂಟ್ / ಬೆಣ್ಣೆ ಹಣ್ಣು
ಒಮೇಗಾ ೩ ಫ್ಯಾಟಿ ಆಮ್ಲ, ನಾರು, ವಿಟಮಿನ್ ಮತ್ತು ಖನಿಜಗಳು ಈ ಹಣ್ಣಿನಲ್ಲಿ ಹೆಚ್ಚಾಗಿವೆ.