‘Wedding Gift’ ಟ್ರೈಲರ್ ಹೇಳತ್ತೆ ಸ್ತ್ರಿ ರಕ್ಷಣೆಯ ಕಾನೂನಿನ ದುರ್ಬಳಕೆಯ ಕಥೆ | The Wedding Gift Trailer is a story about the misuse of women’s protection laws


'Wedding Gift' ಟ್ರೈಲರ್ ಹೇಳತ್ತೆ ಸ್ತ್ರಿ ರಕ್ಷಣೆಯ ಕಾನೂನಿನ ದುರ್ಬಳಕೆಯ ಕಥೆ

Wedding Gift ಟ್ರೈಲರ್

ಈಗಾಗಲೇ ಟೀಸರ್ ಮೂಲಕ ಸದ್ದು ಮಾಡ್ತಿರುವ ವೆಡ್ಡಿಂಗ್ ಗಿಫ್ಟ್ ಚಿತ್ರ ಈಗ ಟ್ರೈಲರ್ ಮೂಲಕ ಮತ್ತಷ್ಟು ಟಾಕ್ ಕ್ರಿಯೇಟ್ ಮಾಡಿದೆ. ಹೌದು ರಿಲೀಸ್ ಆಗಿರೋ ಟ್ರೈಲರ್ ಸಖತ್ ಶಾರ್ಪ್ ಅಂಡ್ ಇಂಟ್ರಸ್ಟಿಂಗ್ ಆಗಿದೆ.

ದಿನ ಬೆಳಗಾದ್ರೆ ಸಾಕು ಬಣ್ಣದ ಲೋಕಕ್ಕೀಗ ಹೊಸಬರ ಆಗಮನದೊಂದಿಗೆ ಹೊಚ್ಚ ಹೊಸಾ ಕಥೆಗಳ ಅನಾವರಣ ಸಿನಿಪ್ರಿಯರ ಮುಂದಾಗುತ್ತಾ ಹೊಸತನದ ಪ್ರಯೋಗಗಳು ಆಗುತ್ತವೇ ಇದೆ. ಹೀಗಿರುವಾಗ ನೈಜ ಘಟನೆಗಳತ್ತ ಬೆಳಕು ಚೆಲ್ಲಿ, ಸಮಾಜಕ್ಕೊಂದು ಸಂದೇಶದೊಂದಿಗೆ ಯುವ ಜನತೆಯನ್ನ ಎಚ್ಚರಿಸುವ ಸಾಹಸಕ್ಕೆ ನವ ನಿರ್ದೇಶಕ ವಿಕ್ರಂ ಪ್ರಭು ಕೈ ಹಾಕಿದ್ದಾರೆ. ಅದೇ ವೆಡ್ಡಿಂಗ್ ಗಿಫ್ಟ್ ಚಿತ್ರ. ಹೌದು ಹೆಸರೇ ಹೇಳುವಂತೆ ಇದೊಂದು ಕುಟುಂಬದ ಕಹಾನಿ ಹೇಳೋ ಪ್ರಯತ್ನ. ಈಗಾಗಲೇ ಟೀಸರ್ ಮೂಲಕ ಸದ್ದು ಮಾಡ್ತಿರುವ ವೆಡ್ಡಿಂಗ್ ಗಿಫ್ಟ್ ಚಿತ್ರ ಈಗ ಟ್ರೈಲರ್ ಮೂಲಕ ಮತ್ತಷ್ಟು ಟಾಕ್ ಕ್ರಿಯೇಟ್ ಮಾಡಿದೆ. ಹೌದು ರಿಲೀಸ್ ಆಗಿರೋ ಟ್ರೈಲರ್ ಸಖತ್ ಶಾರ್ಪ್ ಅಂಡ್ ಇಂಟ್ರಸ್ಟಿಂಗ್ ಆಗಿದೆ. ಟೀಸರ್ ನಲ್ಲಿ ಹೇಳಲಾದ ವಿಷಯಗಳ ಚಹರೆಯನ್ನ ಇನ್ನೂ ಹರಿತವಾಗಿ, ಒಟ್ಟು ಕಥೆಯ ಗೌಪ್ಯವನ್ನ ಹಾಗೇ ಕಾಯ್ದಿರಿಸಿ ಟ್ರೈಲರ್ ಸಿದ್ದಪಡಿಸುವಲ್ಲಿ ಚಿತ್ರತಂಡ ಜಾಣ್ಮೆ ತೋರಿದೆ.

ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಸೃಷ್ಟಿಯಾದ ಕಾನೂನುಗಳು ಅವರಿಂದಲೇ ಹೇಗೆಲ್ಲ ದುರುಪಯೋಗವಾಗ್ತಿದೆ ಎಂಬ ಸೂಕ್ಷ್ಮತೆಯೊಂದಿಗೆ ಸೆಳೆಯುತ್ತಿದೆ. ಹೆಂಡತಿಯ ಹಠ ಮತ್ತು ಯಾವುದೋ ಹಗೆತನದ ಸಾಧನೆಗಾಗಿ ಗಂಡನ ಮೆಲೆ ಕಾನೂನಿನ ಮೂಲಕ ಎಸೆಗುವ ದೌರ್ಜನ್ಯ, ಅದಕ್ಕೆ ಸಪೂರ್ಟ್ ಅಗಿ ನಿಲ್ಲುವ ಲಾಯರ್ ಗಿರಿ, ಪೊಲೀಸರ ಅಧಿಕಾರ ಎಲ್ಲವೂ ಹಾಗೇ ಪಾಸಾಗಿ ಒಟ್ಟಾರೆ ಮುಗ್ದ ಗಂಡಸರ ಮೇಲಾಗೋ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಿ ಎಚ್ಚರಿಸಿದಂತಿದೆ. ಸೋನುಗೌಡ, ನಂದೀಶ್ ನಾಣಯ್ಯ, ಅಚ್ಯುತ್ ಕುಮಾರ್, ಪ್ರೇಮಾ, ಪವಿತ್ರ ಲೋಕೇಶ್ ಟ್ರೈಲರ್ ನಲ್ಲಿ ತಮ್ಮ ಪಾತ್ರಗಳ ಜಲಕ್ ತೋರಿಸಿ ಕ್ಯೂರಿಯಾಸಿಟಿಯನ್ನ ಹುಟ್ಟಿಸುತ್ತಾ ಟ್ರೈಲರ್ ನೋಡಿದ್ಮೆಲಂತೂ ಉತ್ತಮ ಪ್ರತಿಕ್ರಿಯೆ ಎಲ್ಲೆಡೆಯಿಂದ ವ್ಯಕ್ತವಾಗ್ತಿದ್ದು, ಸಿನೆಮಾ ರಿಲೀಸ್ ಗಾಗಿ ಕಾಯವಂತಾಗಿದೆ.

ಈ ಸುದ್ದಿಯನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ : ವೆಡ್ಡಿಂಗ್ ಗಿಫ್ಟ್’ ಡ್ಯುಯೆಟ್ ಸಾಂಗ್​ಗೆ ಸಖತ್ ರೆಸ್ಪಾನ್ಸ್; ಮೋಡಿ ಮಾಡುತ್ತಿದೆ ಜಯಂತ ಕಾಯ್ಕಿಣಿ ಸಾಹಿತ್ಯ

ಇಂಥಾ ಸೂಕ್ಷ್ಮ ಎಳೆಯಿಟ್ಟುಕೊಂಡು, ಸಿನೆಮಾ ರೂಪಿಸೋದು ಒಂದು ಸವಾಲು. ಆದ್ರೂ ಸಹ ನೈಜ ಘಟನೆಗಳನ್ನ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಈ ಚಿತ್ರವನ್ನ ವಿಕ್ರಂ ಚಿತ್ರಿಸಿರುವ ಕಥೆಗೆ ನಂದೀಶ್ ನಾಣಯ್ಯ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಸೋನು ಗೌಡ ಸಾಥ್ ಕೊಟ್ಟಿದ್ದಾರೆ. ಸುಂದರವಾಗಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳ ಬದುಕಲ್ಲಿ ಈ ಕಾನೂನಿನ ಹೋರಾಟ, ಜಿದ್ದು, ಹಠ, ಹಗೆತನ ಯಾಕಾಗಿ ಅನ್ನೋದು ಇದೇ ಜುಲೈ 8 ರಂದು ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಿ ಹೊರಹಾಕಬೇಕಿದೆಯಷ್ಟೇ.

ಇನ್ನೊಂದು ವಿಶೇಷ ವೆಂದರೆ ನಟಿ ಪ್ರೇಮಾ ಈ ವೆಡ್ಡಿಂಗ್ ಗಿಫ್ಟ್‌ನಲ್ಲಿ ಲಾಯರ್ ಪಾತ್ರದ ಮೂಲಕ ಹಲವು ವರ್ಷಗಳ ಬಳಿಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ವಿಕ್ರಂ ಪ್ರಭು ಫಿಲಂಸ್ ಲಾಂಛನದಲ್ಲಿ ವಿಕ್ರಂ ಪ್ರಭು ಅವರೇ ನಿರ್ಮಾಣ ಮಾಡಿ, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರುವ ವೆಡ್ಡಿಂಗ್ ಗಿಫ್ಟ್ ಗೆ ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ, ವಿಜೇತ್ ಚಂದ್ರರ ಸಂಕಲನವಿರುವ ವೆಡ್ಡಿಂಗ್ ಗಿಫ್ಟ್ ಚಿತ್ರ ಸದ್ಯ ಬಿಡುಗಡೆಯಾಗಿರೋ ಟ್ರೈಲರ್ ಹಾಗು ಟೀಸರ್ ಮೂಲಕ ಸಿನಿರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿರೋದಂತು ಹೌದು.

TV9 Kannada


Leave a Reply

Your email address will not be published.