ತೂಕ ಇಳಿಕೆ
ಹೆಚ್ಚುವರಿ ತೂಕದಿಂದ ಫಿಟ್ ಆಗಿಲ್ಲ ಎಂಬುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ. ಹೀಗಿರುವಾಗ ಒಂದಲ್ಲಾ ಒಂದು ರೀತಿಯಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾರೆ. ಹೀಗಿರುವಾಗ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ನೀವು ದೇಹದ ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಜೀವಶೈಲಿಯಲ್ಲಿ ಅಳವಡಿಕೊಳ್ಳಬೇಕಾದ ಈ ಕೆಲವು ವಿಷಯಗಳ ಬಗ್ಗೆ ಗಮನವಹಿಸಬೇಕು. ತಜ್ಞರು ಸೂಚಿಸಿರುವ ಕೆಲವು ವಿಷಯಗಳು ಈ ಕೆಳಗಿನಂತಿವೆ;
ಬೆಲ್ಲ- ಸಕ್ಕರೆ
ಸಕ್ಕರೆಯು ಕೇವಲ ಖಾಲಿ ಕ್ಯಾಲೊರಿಗಳಿಂದ ತುಂಬಿದ್ದರೆ, ಬೆಲ್ಲ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತವೆ.
ಬೆಚ್ಚಗಿನ ನೀರು- ತಣ್ಣೀರು
ಬೆಚ್ಚಗಿನ ನೀರು ಕುಡಿಯುವುದು ನಿಮ್ಮ ಹೆಚ್ಚುವರಿ ಕ್ಯಾಲೊರಿ ಸುಡಲು ಸಹಾಯಕವಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಜೊತೆಗೆ ಚಯಾಪಚಯವನ್ನು ಸುಧಾರಿಸುತ್ತದೆ.
ನಡೆಯುವ ಅಭ್ಯಾಸ
ದಿನವಿಡಿ ಸಕ್ರಿಯರಾಗಿರುವುದು ನಿಮ್ಮ ದೇಹವು ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ ನಡೆಯುವ ಅಭ್ಯಾಸ ಮಾಡಿ.
ಹಣ್ಣು ಮತ್ತು ಹಣ್ಣಿನ ರಸ
ಹಣ್ಣಿನ ರಸ ಸೇವನೆಯಿಂದ ನೀವು ಫೈಬರ್ ಅಂಶವನ್ನು ಹೆಚ್ಚು ಪಡೆಯುವುದಿಲ್ಲ. ಅದು ದ್ರವವಾಗಿರುವುದರಿಂದ ನೇರವಾಗಿ ಹೊಟ್ಟೆಯನ್ನು ತಲುಪುತ್ತದೆ. ಆದರೆ ಹಣ್ಣುಗಳನ್ನು ನೀವು ಜಗಿಯುವುದರಿಂದ ಫೈಬರ್ ಅಂಶ ಸಿಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಸುಧಾರಣೆಗೆ ಸಹಾಯವಾಗುತ್ತದೆ.
ಊಟ ಮಾಡುವುದು – ಊಟ ಬಿಡುವುದು
ಮಧ್ಯಾಹ್ನ 10ರ ನಂತರ ಮತ್ತು 2 ಗಂಟೆಯ ಒಳಗೆ ಎಂದಿಗೂ ಊಟವನ್ನು ಬಿಡಬೇಡಿ. ಆ ಸಮಯದಲ್ಲಿ ಚಯಾಪಚಯವು ಉತ್ತಮವಾಗಿರುವುದರಿಂದ ನಿಮ್ಮ ಆರೋಗ್ಯ ಸುಧಾರಣೆಗೆ ಮತ್ತು ಪೌಷ್ಟಿಕಾಂಶಗಳನ್ನು ಪಡೆಯಲು ಸಹಾಯಕ.
ಬೇಗನೆ ಊಟ – ತಡವಾದ ಊಟ
ಸೂರ್ಯಾಸ್ತದ ನಂತರ ಚಯಾಪಚಯವು ಕಡಿಮೆಯಾಗುತ್ತದೆ. ಹಾಗಾಗಿ ಊಟವನ್ನು ಬೇಗ ಮಾಡಬೇಕು. (ರಾತ್ರಿ 8 ಗಂಟೆಯ ಮೊದಲು)
ಹೆಚ್ಚಿನ ನಿದ್ರೆ- ಕಡಿಮೆ ನಿದ್ರೆ
ಉತ್ತಮ ನಿದ್ರೆಯನ್ನು ನಿರ್ಲಕ್ಷಿಸುವುದರಿಂದ ತೂಕ ನಷ್ಟ ವಿಳಂಬವಾಗುತ್ತದೆ. ತೂಕ ನಷ್ಟದಲ್ಲಿ ತ್ವರಿತ ಫಲಿತಾಂಶವನ್ನು ನೋಡಬೇಕು ನೀವು ಬಯಸುವುದಾದರೆ ರಾತ್ರಿ 10 ಗಂಟೆಗೆ ಮೊದಲು ಮಲಗುವ ಅಭ್ಯಾಸ ಮಾಡಿ.
ದೈನಂದಿನ ವ್ಯಾಯಾಮ ಮಾಡುವುದು
ಸರಿಯಾದ ನಿದ್ರೆ, ಒತ್ತಡವನ್ನು ನಿರ್ವಹಿಸುವುದು ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳೊಂದಿಗೆ ತೂಕ ನಷ್ಟದಲ್ಲಿ ವ್ಯಾಯಾಮವು ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ವ್ಯಾಯಾಮದಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು; ಯೋಗ, ನಡಿಗೆ, ಸೈಕ್ಲಿಂಗ್, ಜಿಮ್, ಸ್ವಿಮ್ಮಿಂಗ್ ಇತ್ಯಾದಿ.