ತೂಕ ಹೆಚ್ಚಾಗುವುದರಿಂದ ಮಧುಮೇಹ, ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಮಾತ್ರವಲ್ಲದೆ ಮೂತ್ರಪಿಂಡ, ಯಕೃತ್ತು, ಮೆದುಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪ್ರಾತಿನಿಧಿಕ ಚಿತ್ರ
ಸಾಮಾನ್ಯವಾಗಿ ತೂಕ ವೇಗವಾಗಿ ಹೆಚ್ಚಾಗುತ್ತೆ, ಆದರೆ ವೇಗವಾಗಿ ಕಡಿಮೆಯಾಗುವುದಿಲ್ಲ. ಹೆಚ್ಚುತ್ತಿರುವ ತೂಕವನ್ನು (Weight Loss) ನಿಯಂತ್ರಿಸಲು ಜನರು ಸರ್ಕಸ್ ಮಾಡುವುದುಂಟು. ಗಂಟೆಗಟ್ಟಲೆ ಜಿಮ್‌ನಲ್ಲಿ ವ್ಯಾಯಾಮ ಮಾಡುವುದು, ಆಹಾರದಲ್ಲಿ ಬದಲಾವಣೆಗಳನ್ನು ಮಾಡುವುದು, ಮನೆಮದ್ದುಗಳನ್ನು ಸಹ ಅನುಸರಿಸಲಾಗುತ್ತದೆ. ಆದಾಗ್ಯೂ, ಅವರು ಬಯಸಿದ ದೇಹವನ್ನು ಪಡೆಯುವುದಿಲ್ಲ. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಬೊಜ್ಜು ಹೊಂದಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ರೋಗವಾಗಿ ಪರಿಣಮಿಸಲಿದೆ ಎನ್ನುತ್ತಾರೆ ತಜ್ಞರು. 1980 ರಿಂದ ಭಾರತ ಸೇರಿದಂತೆ 70 ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥೂಲಕಾಯತೆಯ ಪ್ರಮಾಣವು ದ್ವಿಗುಣಗೊಂಡಿದೆ. ತೂಕ ಹೆಚ್ಚಾಗುವುದರಿಂದ ಮಧುಮೇಹ, ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಮಾತ್ರವಲ್ಲದೆ ಮೂತ್ರಪಿಂಡ, ಯಕೃತ್ತು, ಮೆದುಳು ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸ್ಥೂಲಕಾಯವನ್ನು ನಿಯಂತ್ರಿಸಲು ನೀವು ಬಯಸಿದ್ದಾದಲ್ಲಿ ವ್ಯಾಯಾಮ, ಆಹಾರ ಸೇವಿಸುವಾಗ ಕೆಲವು ವಿಶೇಷ ಅಂಶಗಳಿಗೆ ಗಮನ ಕೊಡಿ.