WhatsApp: ಕೆಲವೇ ದಿನಗಳಲ್ಲಿ ಬರುತ್ತಿದೆ ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್: ನಿಮಗೆ ಸಿಗಲಿದೆ ಈ ಅಚ್ಚರಿಯ ಫೀಚರ್ | WhatsApp is reported to be making message reactions feature in a coming update


WhatsApp: ಕೆಲವೇ ದಿನಗಳಲ್ಲಿ ಬರುತ್ತಿದೆ ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್: ನಿಮಗೆ ಸಿಗಲಿದೆ ಈ ಅಚ್ಚರಿಯ ಫೀಚರ್

whatsapp message reactions

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗೀಗ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. ಸದ್ಯ ಇದೀಗ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. WaBetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳ ಪ್ರಕಾರ ವಾಟ್ಸ್​ಆ್ಯಪ್​ ಶೀಘ್ರದಲ್ಲೇ ಫೇಸ್​ಬುಕ್​ನಲ್ಲಿರುವಂತೆಯೆ ಮೆಸೇಜ್‌ ರಿಯಾಕ್ಷನ್‌ (Whatsapp Message Reactions) ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್​ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ.

ಈಗಾಗಲೇ ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್‌ ರಿಯಾಕ್ಷನ್‌ ಸೇರಿಸಲು ಸಿದ್ಧತೆ ನಡೆಸಿದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗೆಗಿನ ಫೋಟೋ ಒಂದು ಈಗ ವೈರಲ್ ಆಗಿದೆ.

ವಾಟ್ಸ್​ಆ್ಯಪ್​ನ ಮೆಸೇಜ್‌ ರಿಯಾಕ್ಷನ್‌ ಫಿಚರ್ಸ್‌ ಎಮೋಜಿ ಐಕಾನ್‌ಗಳೊಂದಿಗೆ ಪ್ರತಿಕ್ರಿಯಿಸಲು ನಿಮಗೆ ಅನುಮತಿಸುತ್ತದೆ. ಇದು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿರೋ ಅದೇ ಮಾದರಿಯಲ್ಲಿ ಇರಲಿದೆ. ಅಂದರೆ ಎಮೋಜಿಗಳ ರಿಯಾಕ್ಷನ್​ಗಾಗಿ ನೀವು ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡಬೇಕಾಗುತ್ತದೆ. ಪಾಪ್ ಅಪ್ ಆಗುವ ಯಾವುದೇ ಎಮೋಜಿಗಳಿಂದ ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೆಚ್ಚಿನದನ್ನು ನೀವು ಆಯ್ಕೆ ಮಾಡಿದ ನಂತರ, ನೀವು ಯಾರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದೀರೋ ಅವರು ಅದೇ ಪ್ರತಿಕ್ರಿಯೆಗೆ ಅಧಿಸೂಚನೆಯನ್ನು ಪಡೆಯುತ್ತೀರಿ.

ಇದರಲ್ಲಿ ಲವ್ ಸಿಂಬಲ್ ಸೇರಿದಂತೆ ಒಟ್ಟು ಆರು ರಿಯಾಕ್ಷನ್ ಇರಲಿದೆ ಎಂದು ಹೇಳಲಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಆಯ್ಕೆಗೆ ನೀವು ಹೊಸ ಆವೃತ್ತಿಯ ವಾಟ್ಸ್​ಆ್ಯಪ್​ಗೆ ಅಪ್ಡೇಟ್‌ ಆಗ ಬೇಕಾಗುತ್ತದೆ. ವಾಟ್ಸ್​ಆ್ಯಪ್​ ನೀವು ಪ್ರತಿಕ್ರಿಯೆಯನ್ನು ಬೆಂಬಲಿಸದ ಹಳೆಯ ಆವೃತ್ತಿಯನ್ನು ಬಳಸುತ್ತಿರುವ ಎಚ್ಚರಿಕೆಯ ಸಂದೇಶವನ್ನು ಪ್ರದರ್ಶಿಸಲಿದೆ. ಈ ಫೀಚರ್ಸ್‌ ಮೊದಲು ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಆವೃತ್ತಿಯಲ್ಲಿ ಮತ್ತು ನಂತರ ಐಒಎಸ್ ಬಳಕೆದಾರರಿಗೆ ಲಭ್ಯವಿರುತ್ತದೆ.

ಪ್ರಸ್ತುತ ಈ ಫೀಚರ್ಸ್​ನ ಪರೀಕ್ಷಾ ಹಂತ ಮುಗಿದಿದ್ದು ಕೆಲವೇ ದಿನಗಳಲ್ಲಿ  ಅಪ್‌ಡೇಟ್‌ನಲ್ಲಿ ಲಭ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ನಿಂದಾಗಿ ನಿಮಗೆ ಬಂದ ಸಂದೇಶಗಳಿಗೆ ತ್ವರಿತವಾಗಿ ಎಮೊಜಿಗಳ ಮೂಲಕ ಉತ್ತರಿಸಲು ಸಾಧ್ಯವಾಗಲಿದೆ. ಇದರಿಂದ ನಿಮ್ಮ ಚಾಟ್‌ ಸಂಭಾಷಣೆ ಇನ್ನಷ್ಟು ಉಲ್ಲಾಸದಾಯಕವಾಗಿರಲಿದೆ ಎಂದು ಹೇಳಲಾಗುತ್ತಿದೆ.

Black Friday Sale 2021: ಭಾರತದಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್: ಸ್ಮಾರ್ಟ್​ಫೋನ್, ಲ್ಯಾಪ್​​ಟಾಪ್ ಮೇಲೆ ಭರ್ಜರಿ ಡಿಸ್ಕೌಂಟ್

(WhatsApp is reported to be making message reactions feature in a coming update)

TV9 Kannada


Leave a Reply

Your email address will not be published. Required fields are marked *