WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಿದೆಯಾ? | How to remove or change WhatsApp message reaction

WhatsApp Update: ಕ್ಲಿಕ್ ಮಾಡಿ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ನಿಮಗೆ ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

Jun 08, 2022 | 12:55 PM

TV9kannada Web Team

| Edited By: Zahir PY

Jun 08, 2022 | 12:55 PM

ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್​ ಹೊಸ ಹೊಸ ಅಪ್​ಡೇಟ್​ಗಳನ್ನು ನೀಡುತ್ತಾ ಬರುತ್ತಿದೆ. ಹೀಗೆ ಇತ್ತೀಚೆಗೆ ನೀಡಿದ ಹೊಸ ಅಪ್​ಡೇಟ್​ ಎಂದರೆ ರಿಪ್ಲೈ ರಿಯಾಕ್ಷನ್. ಅಂದರೆ ಯಾರಾದರೂ ನಿಮಗೆ ಮೆಸೇಜ್ ಮಾಡಿದ್ರೆ ಅವರಿಗೆ ಕೇವಲ ಎಮೋಜಿ ಮೂಲಕವೇ ಉತ್ತರಿಸುವ ಆಯ್ಕೆಯನ್ನು ವಾಟ್ಸ್​ಆ್ಯಪ್ ಪರಿಚಯಿಸಿದೆ.

ಇದರಿಂದ ಎಲ್ಲಾ ಮೆಸೇಜ್​ಗಳಿಗೂ ಟೈಪ್ ಮಾಡಿ ಪ್ರತಿಕ್ರಿಯಿಸುವ ಅಗತ್ಯವಿರುವುದಿಲ್ಲ. ಅಲ್ಲದೆ ನೀವು ಕಳುಹಿಸಿದ ವಿಡಿಯೋ ಅಥವಾ ಇನ್ಯಾವುದೊ ಫೈಲ್ ಅಥವಾ ಮೆಸೇಜ್ ಅವರಿಗೆ ಇಷ್ಟವಾಗಿದೆಯಾ, ಇಲ್ಲವಾ ಎಂಬುದು ಕೂಡ ಈ ರಿಯಾಕ್ಷನ್ ಮೂಲಕವೇ ತಿಳಿಯಬಹುದು. ಇದೇ ಕಾರಣಕ್ಕಾಗಿಯೇ ಫೇಸ್​ಬುಕ್​ನಲ್ಲಿರುವ ರಿಯಾಕ್ಷನ್ ಆಯ್ಕೆಯನ್ನು ವಾಟ್ಸ್​ಆ್ಯಪ್ ಕೂಡ ಪರಿಚಯಿಸಿದೆ.

 ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್​, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ...

ಈ ರಿಯಾಕ್ಷನ್ ಆಯ್ಕೆಯಲ್ಲಿ ಲೈಕ್, ಹಾರ್ಟ್​, ಫೇಸ್ ಇಮೋಜಿಗಳನ್ನು ನೀಡಲಾಗಿದೆ. ಆದರೆ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದ ಇಮೋಜಿಗಳು ಬದಲಾಗಬಹುದು. ಇದರಿಂದ ನೀವು ತೋರ್ಪಡಿಸಿದ ಭಾವನೆಗಳ ಅರ್ಥಗಳು ಕೂಡ ಬದಲಾಗುತ್ತೆ. ಹೀಗಾಗಿ ಇಂತಹ ತಪ್ಪುಗಳನ್ನು ಸರಿಪಡಿಸಲು ವಾಟ್ಸ್​ಆ್ಯಪ್ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ…

ನೀವು ಮೆಸೇಜ್​ನ ಪ್ರತಿಕ್ರಿಯೆಯನ್ನು ತೆಗೆದುಹಾಕಲು ಅಥವಾ ಬದಲಾಯಿಸಲು ಮೊದಲು ವಾಟ್ಸ್​ಆ್ಯಪ್​ ಚಾಟ್‌ಗೆ ಹೋಗಿ.

ಅಲ್ಲಿ ನೀವು ಪ್ರತಿಕ್ರಿಯಿಸಿದ ಸಂದೇಶದ ಇಮೋಜಿಯ ಮೇಲೆ ಟ್ಯಾಪ್ ಮಾಡಿ.

ಈ ವೇಳೆ ನಿಮಗೆ ಟ್ಯಾಪ್ ಟು ರಿಮೂವ್ ಅಥವಾ ಡಿಲೀಟ್ ಎಂಬ ಆಯ್ಕೆ ಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ಪ್ರತಿಕ್ರಿಯಿಸಿದ ಇಮೋಜಿಯನ್ನು ಡಿಲೀಟ್ ಮಾಡಬಹುದು. ಅಲ್ಲದೆ ಈ ಮೂಲಕ ನಿಮಗೆ  ಬೇಕಾದ ಇಮೋಜಿಯನ್ನು ಬಳಸಿ ಮತ್ತೊಮ್ಮೆ ಪ್ರತಿಕ್ರಿಯಿಸಬಹುದು.

Most Read Stories

TV9 Kannada

Leave a Reply

Your email address will not be published.