WhatsApp: ವಾಟ್ಸ್​ಆ್ಯಪ್​ನಲ್ಲಿ ಅಚ್ಚರಿಯ ಫೀಚರ್: ಒಮ್ಮೆಲೆ 32 ಜನರಿಗೆ ಕರೆ ಮಾಡುವ ಅವಕಾಶ | WhatsApp said it will add more features including the facility to connect with 32 people in a group voice call


WhatsApp: ವಾಟ್ಸ್​ಆ್ಯಪ್​ನಲ್ಲಿ ಅಚ್ಚರಿಯ ಫೀಚರ್: ಒಮ್ಮೆಲೆ 32 ಜನರಿಗೆ ಕರೆ ಮಾಡುವ ಅವಕಾಶ

WhatsApp Update

ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​​ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್​​ಗಳನ್ನು ಪರಿಚಯಿಸುತ್ತಲೇ ಬಂದಿದೆ. ದಿನದಿಂದ ದಿನಕ್ಕೆ ವಾಟ್ಸ್​ಆ್ಯಪ್​​ (WhatsApp) ತನ್ನ ಫೀಚರ್ ಅಪ್ಡೇಟ್ ಮಾಡುತ್ತಲೇ ಇದ್ದು ಮತ್ತಷ್ಟು ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ವಾಟ್ಸ್​ಆ್ಯಪ್​​ ಕೆಲವೊಂದು ಹೊಸ ಫೀಚರ್​ಗಳನ್ನು (Feature) ಬಿಡುಗಡೆ ಮಾಡುವುದರ ಬಗ್ಗೆ ಘೋಷಣೆ ಮಾಡಿದೆ. ಇದರ ಪ್ರಕಾರ ವಾಟ್ಸ್​ಆ್ಯಪ್​​ ಏಕಕಾಲಕ್ಕೆ 32 ಜನರು ಗ್ರೂಪ್‌ ವಾಯ್ಸ್ ಕಾಲ್‌ ಮಾಡುವುದು, 2 ಜಿಬಿ (ಗೀಗಾ ಬೈಟ್‌) ಗಾತ್ರದ ಫೈಲ್‌ಗಳನ್ನು ರವಾನಿಸುವುದು ಸೇರಿದಂತೆ ಹಲವಾರು ಹೊಸ ಫೀಚರ್‌ಗಳನ್ನು ಸೇರಿಸಲಾಗುವುದು ಎಂದು ಕಂಪನಿ ಘೋಷಿಸಿದೆ. ಪ್ರಸ್ತುತ ವಾಟ್ಸಾಪ್‌ನಲ್ಲಿ ಕೇವಲ 8 ಜನರಿಗೆ ಮಾತ್ರ ಏಕಕಾಲಕ್ಕೆ ಗ್ರೂಪ್‌ ವಾಯ್ಸ್​ ಕರೆಯನ್ನು ಮಾಡಬಹುದಾಗಿದೆ.

ಇದರ ಜೊತೆಗೆ ಹೊಸ ಕಮ್ಯೂನಿಟಿ ಫೀಚರ್ಸ್‌ ಅನ್ನು ವಾಟ್ಸ್​ಆ್ಯಪ್​​ ಪರಿಚಯಿಸಿದೆ. ಈ ಪೀಚರ್ಸ್‌ ವಾಟ್ಸ್​ಆ್ಯಪ್​​ ಗ್ರೂಪ್‌ಗಳ ಗ್ರೂಪ್‌ ಮಾದರಿಯಲ್ಲಿದ್ದು, ತುಂಬಾ ವಿಸ್ತರವಾದ ವ್ಯಾಪ್ತಿಯನ್ನು ಹೊಂದಿದೆ. ಅಂದರೆ ಕಮ್ಯೂನಿಟಿ ಫೀಚರ್ಸ್‌ ಮೂಲಕ ಪರಸ್ಪರ ತಿಳಿದಿರುವ ಮತ್ತು ತಮ್ಮ ಆಸಕ್ತಿಗೆ ಅನುಗುಣವಾಗಿ ಸುತ್ತಲೂ ಸಂಘಟಿತವಾಗಿರುವ ಸಂಪರ್ಕಗಳನ್ನು ಹೊಂದಿರುವ ಗುಂಪುಗಳ ಪ್ರಕಾರವಾಗಿದೆ. ಇದಲ್ಲದೇ ವಾಟ್ಸ್​ಆ್ಯಪ್​​ ಗ್ರೂಪ್‌ನ ಅಡ್ಮಿನ್‌, ಯಾವುದೇ ಸಮಯದಲ್ಲೂ ಸಂದೇಶವನ್ನು ಅಳಸಿಹಾಕಬಹುದು. ಅಳಿಸಿ ಹಾಕಿದ ಸಂಭಾಷಣೆಗಳು ಗ್ರೂಪ್‌ನಲ್ಲಿರುವ ಸದಸ್ಯರಿಗೆ ಕಾಣಿಸದಂತೆ ಮಾಡುವ ಹೊಸ ಫೀಚರ್‌ ಅನ್ನು ಅಳವಡಿಸಲಾಗುವುದು ಎಂದು ಕಂಪನಿ ವಕ್ತಾರ ತಿಳಿಸಿದ್ದಾರೆ.

ವಾಟ್ಸ್​​ಆ್ಯಪ್​ ಈ ವರ್ಷ ತನ್ನ ಬಳಕೆದಾರರಿಗೆ ಫೈಲ್ ಹಂಚಿಕೆ ಮಿತಿಯನ್ನು 100MB ನಿಂದ 2GBಗೆ ಹೆಚ್ಚಿಸಲಿದೆ. ಅರ್ಜೆಂಟೀನಾದಲ್ಲಿ ಆಯ್ದ ಬಳಕೆದಾರರೊಂದಿಗೆ ಬೀಟಾ ಆವೃತ್ತಿಯಲ್ಲಿ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಪ್ಲಾಟ್‌ಫಾರ್ಮ್ ತನ್ನ ಜಾಗತಿಕ ಬಿಡುಗಡೆಯನ್ನು ಖಚಿತಪಡಿಸಿದೆ. ಪ್ರಸ್ತುತ, ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಸ್ನೇಹಿತರಿಗೆ 100MB ಫೈಲ್‌ಗಳನ್ನು ಕಳುಹಿಸಲು ಮಾತ್ರ ಅನುಮತಿಸುತ್ತದೆ. ಇದಿಷ್ಟೆ ಅಲ್ಲದೆ ಕಂಪನಿಯು iOSಗಾಗಿ  ವಾಟ್ಸ್​ಆ್ಯಪ್​​ ಬೀಟಾದಲ್ಲಿ ಕೆಲವು ಜನರಿಗೆ ಹೊಸ ಡ್ರಾಯಿಂಗ್ ಪರಿಕರಗಳನ್ನು ಬಿಡುಗಡೆ ಮಾಡುತ್ತಿದೆ.

ಇನ್ನು iOS ಗಾಗಿ ವಾಟ್ಸ್​ಆ್ಯಪ್​​ನಲ್ಲಿ ಬ್ಲರ್ ಟೂಲ್ ಈಗಾಗಲೇ ಲಭ್ಯವಿದ್ದು, ಈ ಹೊಸ ಡ್ರಾಯಿಂಗ್ ಟೂಲ್‌ಗಳನ್ನು ಬಳಸುವಾಗ ಡ್ರಾಯಿಂಗ್ ಎಡಿಟರ್‌ನ ಇಂಟರ್ಫೇಸ್ ಹೊಸದಾಗಿ ರಚಿಸಲಾಗಿದೆ. ಡ್ರಾಯಿಂಗ್ ಎಡಿಟರ್‌ಗಾಗಿ ಈ ಹೊಸ ಇಂಟರ್‌ಫೇಸ್ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಹೆಚ್ಚಿನ ಸಕ್ರಿಯಗೊಳಿಸುವಿಕೆಗಳನ್ನು ನಂತರದ ದಿನಾಂಕದಲ್ಲಿ ಯೋಜಿಸಲಾಗಿದೆ. ಇದು ಕೆಲವು ಜನರಿಗೆ ಆಂಡ್ರಾಯ್ಡ್‌ ವಾಟ್ಸಾಪ್ ಬೀಟಾದಲ್ಲಿ ಬರುತ್ತಿದೆ ಮತ್ತು ಹೆಚ್ಚಿನ ಬಳಕೆದಾರರು ವೈಶಿಷ್ಟ್ಯವನ್ನು ಸ್ವೀಕರಿಸಿದಾಗ ಹೊಸ ಚೇಂಜ್ಲಾಗ್ ಲಭ್ಯವಿರುತ್ತದೆ. ಇನ್ನು ವ್ಯಾಪಕ ಬಳಕೆದಾರರ ಪ್ರತಿಕ್ರಿಯೆಯ ಭಾಗವಾಗಿ ವಿನಂತಿಯನ್ನು ಪಡೆದ ನಂತರ ವಾಟ್ಸ್​ಆ್ಯಪ್​ ವೇದಿಕೆಯಲ್ಲಿ ಎಮೋಜಿಗಳನ್ನು ಅನುಮತಿಸಲಿದೆ. ಆದರೆ, ಇವುಗಳೆಲ್ಲ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಕಂಪನಿ ಮಾಹಿತಿ ಹೊರಹಾಕಿಲ್ಲ.

Vivo Y15s: ಎರಡು ತಿಂಗಳ ಹಿಂದೆ ಬಿಡುಗಡೆ ಆದ ಈ ಆಕರ್ಷಕ ಸ್ಮಾರ್ಟ್​​ಫೋನ್ ಬೆಲೆಯಲ್ಲಿ ದಿಢೀರ್ ಇಳಿಕೆ

iQoo Neo 6: ಇದಪ್ಪ ಫೋನ್ ಅಂದ್ರೆ: ಸ್ಟೈಲಿಶ್​ಗೆ ತಕ್ಕಂತೆ ಭರ್ಜರಿ ಫೀಚರ್ಸ್​ನ ಐಕ್ಯೂ ನಿಯೋ 6 5G ಬಿಡುಗಡೆ

TV9 Kannada


Leave a Reply

Your email address will not be published. Required fields are marked *