WhatsApp: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್:​ ಗ್ರೂಪ್ ಅಡ್ಮಿನ್​ಗಳು ಇದನ್ನ ನೋಡಲೇಬೇಕು | WhatsApp Update WhatsApp will now allow group admins to delete the messages for everyone in the group


WhatsApp New Feature: ಇದೀಗ ವಾಟ್ಸ್​ಆ್ಯಪ್​ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಂದರೆ ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್​ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ.

ವಾಟ್ಸ್​ಆ್ಯಪ್ (WhatsApp) ಒಂದರ ಹಿಂದೆ ಒಂದರಂತೆ ಹೊಸ ಹೊಸ ಫೀಚರ್​ಗಳನ್ನು ಘೋಷಣೆ ಮಾಡುತ್ತಲೇ ಇದೆ. ಈಗಾಗಲೇ ಅನೇಕ ನೂತನ ಆಯ್ಕೆಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ಇದೀಗ ವಾಟ್ಸ್​ಆ್ಯಪ್​ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಂದರೆ ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್​ಗಳಿಗೆ (Group Admin) ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿದೆ ಎಂದು ವರದಿಯಾಗಿದೆ. ಈ ನೂತನ ಆಯ್ಕೆಯ (New Feature) ಮೂಲಕ ಗ್ರೂಪ್‌ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಬಹುದು.

ವಾಟ್ಸ್​ಆ್ಯಪ್ ಪರಿಚಯಿಸಲಿರುವ ಹೊಸ ಅಪ್ಡೇಟ್​ನ ಪ್ರಕಾರ ಗ್ರೂಪ್ ಅಡ್ಮಿನ್​ಗಳು ಗ್ರೂಪ್​ನಲ್ಲಿ ಬಂದ ಯಾವುದೇ ಮೆಸೇಜ್​ಗಳನ್ನು ಡಿಲೀಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದು ಸ್ಪಾಮ್ ಮೆಸೇಜ್ ಅಥವಾ ಯಾವುದಾದರು ಅಶ್ಲೀಲ ಸಂಭಾಷಣೆ, ವಿಡಿಯೋ, ಫೋಟೋಗಳನ್ನು ತೆರವು ಮಾಡಲು ಸಹಕಾರಿ ಆಗುತ್ತಾದೆ. ಅಂದರೆ, ಗ್ರೂಪ್​ನಲ್ಲಿ ಬೇರೆ ಯಾರಾದರು ಅನಗತ್ಯ ಮೆಸೇಜ್​​ಗಳನ್ನು ಕಳುಹಿಸಿದರೆ ಅದನ್ನು ಅಡ್ಮಿನ್ ನೇರವಾಗಿ ಡಿಲೀಟ್ ಮಾಡಬಹುದಾಗಿದೆ.

ಗ್ರೂಪ್ ಅಡ್ಮಿನ್ ಡಿಲೀಟ್ ಮೆಸೇಜ್ ಆಯ್ಕೆ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದೆ. ಕೆಲ ಬೇಟಾ ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಮೆಸೇಜ್ ಡಿಲೀಟ್ ಆದ ಸಂದರ್ಭ This was removed by an admin ಎಂದು ಕಾಣಿಸುತ್ತದೆ. ಇದನ್ನು ಆಯ್ಕೆ ಮಾಡುವ ಮೂಲಕ ಅಡ್ಮಿನ್ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು.

ಇನ್ನು ಬಳಕೆದಾರರಿಗೆ ವಾಟ್ಸ್​ಆ್ಯಪ್​ನಲ್ಲಿ ನೂತನ ಅಪ್ಡೇಟ್ ಬಂದಿದೆ ಎಂದು ತಿಳಿಸಲು ಹೊಸ ಚಾಟ್‌ಬಾಟ್ ಎಂಬ ಆಯ್ಕೆಯನ್ನು ನೀಡುತ್ತಿದೆ. ಈ ಚಾಟ್‌ಬಾಟ್‌ ಮೂಲಕ ಯಾವುದೇ ಹೊಸ ಫೀಚರ್ಸ್‌ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಬಿಡುಗಡೆ ಆಗಿರುವ ಹೊಸ ಫೀಚರ್ಸ್‌ ಹಾಗೂ ಅದರ ವಿಶೇಷತೆ ಏನು? ಅದರ ಕಾರ್ಯವೈಖರಿ ಹೇಗಿರಲಿದೆ? ಎಂಬೆಲ್ಲಾ ಮಾಹಿತಿಯನ್ನು ಈ ಚಾಟ್​ಬಾಟ್ ನೀಡುತ್ತದೆ.

TV9 Kannada


Leave a Reply

Your email address will not be published. Required fields are marked *