WhatsApp: ವಾಟ್ಸ್​ಆ್ಯಪ್​ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡಲು ಈ ಟ್ರಿಕ್ ಉಪಯೋಗಿಸಿ | WhatsApp Tips and Tricks Here is the simple way to share location on WhatsApp Android smartphone


WhatsApp Live Location: ಈಗ ಸಾಮಾನ್ಯವಾಗಿ ಎಲ್ಲರೂ ಲೊಕೇಶನ್ ಶೇರ್ ಮಾಡಲು ವಾಟ್ಸ್​ಆ್ಯಪ್​ ಬಳಸುತ್ತಿದ್ದಾರೆ. ಹೆಚ್ಚಾಗಿ ಲೊಕೇಶನ್‌ ಶೇರ್‌ ಮತ್ತು ಲೈವ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ.

ಇಂದಿನ ದಿನಗಳಲ್ಲಿ ಒಬ್ಬರಿಗೆ ಒಂದು ವಿಳಾಸವನ್ನು ತಿಳಿಸುವುದು ಬಹಳಷ್ಟು ಸುಲಭ. ಅವರು ತಲುಪಬೇಕಿರುವ ವಿಳಾಸವನ್ನು ಗೂಗಲ್ ಲೊಕೇಶನ್ (Google Lacation) ಕಳುಹಿಸುವ ಮೂಲಕ ಕಳುಹಿಸಲಾಗುತ್ತಿತ್ತು. ಈಗ ಸಾಮಾನ್ಯವಾಗಿ ಎಲ್ಲರೂ ಲೊಕೇಶನ್ ಶೇರ್ ಮಾಡಲು ವಾಟ್ಸ್​ಆ್ಯಪ್​ (WhatsApp) ಬಳಸುತ್ತಿದ್ದಾರೆ. ಹೆಚ್ಚಾಗಿ ಲೊಕೇಶನ್‌ ಶೇರ್‌ ಮತ್ತು ಲೈವ್‌ ಲೊಕೇಶನ್‌ ಶೇರ್‌ ಫೀಚರ್ಸ್‌ ಸಾಕಷ್ಟು ಉಪಯುಕ್ತವಾಗಿದೆ. ಇದರಿಂದ ನಿಮ್ಮ ಸ್ನೇಹಿತರು, ಇಲ್ಲವೇ ಅನವಶ್ಯಕತೆ ಇರುವವರಿಗೆ ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿಸುವುದಕ್ಕೆ ಸಾಧ್ಯವಾಗಲಿದೆ. ಆದರೂ ಕೆಲವರಿಗೆ ವಾಟ್ಸ್​ಆ್ಯಪ್​ನಲ್ಲಿ ಲೊಕೇಶನ್‌ ಶೇರ್‌ ಮಾಡುವುದಕ್ಕೆ ಗೊಂದಲವಿದೆ.

ಸಾಮಾನ್ಯವಾಗಿ ವಾಟ್ಸ್​ಆ್ಯಪ್​ನಲ್ಲಿ ಲೊಕೇಶನ್‌ ಶೇರ್‌ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಮೊದಲನೇಯದು ಕರೆಂಟ್‌ ಲೊಕೇಶನ್‌ ಶೇರ್‌ ಆಯ್ಕೆ. ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದೊಂದಿಗೆ ಅಥವಾ ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು. ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ವಾಟ್ಸ್​ಆ್ಯಪ್​ನಲ್ಲಿ ಲೊಕೇಶನ್‌ ಶೇರ್‌ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.

  • ಪರ್ಸನಲ್‌ ಚಾಟ್ ತೆರೆಯಿರಿ ಮತ್ತು ಫೈಲ್​ಗಳನ್ನು ಆ್ಯಡ್ ಮಾಡಲಿರುವ ಐಕಾನ್ ಟ್ಯಾಪ್ ಮಾಡಿ.
  • ಟ್ಯಾಪ್ ಮಾಡಿದ ನಂತರ ಕೆಲವು ಆಯ್ಕೆಗಳನ್ನು ಕಾಣಿಸುತ್ತದೆ ಮತ್ತು ಅಲ್ಲಿ ಲೊಕೇಶನ್‌ ಟ್ಯಾಪ್ ಮಾಡಿ.
  • ಈಗ, ನಿಮ್ಮ ಕರೆಂಟ್‌ ಲೊಕೇಶನ್‌ ಸೆಂಡ್‌ ಆಯ್ಕೆಯನ್ನು ಟ್ಯಾಪ್ ಮಾಡಿ.

ಲೈವ್ ಲೊಕೇಶನ್‌ ಶೇರ್‌ ಮಾಡುವುದು ಹೇಗೆ?:

  • ಪರ್ಸನಲ್‌ ಚಾಟ್ ತೆರೆಯಿರಿ ಮತ್ತು ಫೈಲ್​ಗಳನ್ನು ಆ್ಯಡ್ ಮಾಡಲಿರುವ ಐಕಾನ್ ಟ್ಯಾಪ್ ಮಾಡಿ.
  • ಟ್ಯಾಪ್ ಮಾಡಿದ ನಂತರ ಕೆಲವು ಆಯ್ಕೆಗಳನ್ನು ಕಾಣಿಸುತ್ತದೆ ಮತ್ತು ಅಲ್ಲಿ ಲೊಕೇಶನ್‌ ಟ್ಯಾಪ್ ಮಾಡಿ.
  • ಈಗ, ಶೇರ್‌ ಲೈವ್ ಲೊಕೇಶನ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಸಮಯದ ಚೌಕಟ್ಟನ್ನು ಆರಿಸಿ: 15 ನಿಮಿಷಗಳು, 1 ಗಂಟೆ ಅಥವಾ 8 ಗಂಟೆಗಳು.
  • ಶೀರ್ಷಿಕೆ ಸೇರಿಸಿ ಮತ್ತು ಸೆಂಡ್‌ ಬಟನ್ ಟ್ಯಾಪ್ ಮಾಡಿ.
  • ನಂತರ ಶೇರ್‌ ಸ್ಟಾಪ್‌ ಬಟನ್‌ನಲ್ಲಿ ಲೈವ್‌ ಲೊಕೇಶನ್‌ ಶೇರ್‌ ಅನ್ನು ಹಂಚಿಕೆಯನ್ನು ನಿಲ್ಲಿಸಬಹುದು.

ವಾಟ್ಸ್​ಆ್ಯಪ್​ನಲ್ಲಿ ಡಿಜಿಲಾಕರ್‌ ಸೇವೆ:

ಭಾರತದಲ್ಲಿ ವಾಟ್ಸ್​ಆ್ಯಪ್  ಮೂಲಕ​ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ಪಾಲಿಸಿಯಂತಹ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡಲು ಸರ್ಕಾರ ಮುಂದಾಗಿದೆ. MyGov ಹೆಲ್ಫ ಡೆಸ್ಕ್‌ ವಾಟ್ಸ್​ಆ್ಯಪ್​ ಜೊತೆಗೆ ಪಾಲುದಾರಿಕೆಯನ್ನು ಮಾಡಿಕೊಂಡಿದ್ದು, ಇನ್ಮುಂದೆ ಡಿಜಿಲಾಕರ್ ಸೇವೆಗಳು ವಾಟ್ಸ್​ಆ್ಯಪ್​ನಲ್ಲಿ ಕೂಡ ಲಭ್ಯವಾಗಲಿದೆ. ಅದರಂತೆ ವಾಟ್ಸ್​ಆ್ಯಪ್​ ಬಳಕೆದಾರರು ಡಿಜಿಲಾಕರ್ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.

TV9 Kannada


Leave a Reply

Your email address will not be published. Required fields are marked *