WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ | WhatsApp is working on tweaking the calling user interface now Group Calls Will Have New Look


WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬರುತ್ತಿದೆ ಅಚ್ಚರಿ ಫೀಚರ್: ಹೊಸ ಲುಕ್ ಹೇಗಿದೆ ನೋಡಿ

WhatsApp New Update

ಈ ವರ್ಷ ಸಾಲು ಸಾಲು ಹೊಸ ಫೀಚರ್​ಗಳನ್ನು ಬಿಡುಗಡೆ ಮಾಡಲು ಮೆಟಾ (Meta) ಒಡೆತನದ ವಾಟ್ಸ್​ಆ್ಯಪ್​ ಮುಂದಾಗಿದೆ. ಈಗಾಗಲೇ ಅನೇಕ ಅಪ್ಡೇಟ್​ಗಳು ಪರೀಕ್ಷಾ ಹಂತದಲ್ಲಿದ್ದು ವಾಟ್ಸ್​ಆ್ಯಪ್ (WhatsApp)​ ಬೇಟಾ ಇನ್​ಫೋ ಒಂದೊಂದೆ ವರದಿ ಮಾಡುತ್ತಿದೆ. ಇದೀಗ ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ (WhatsApp Group Call) ಬರಲಿರುವ ಹೊಸ ಫೀಚರ್ ತುಂಬಾ ಕುತೂಹಲಕಾರಿಯಾಗಿದ್ದು ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆಯಂತೆ. ಟ್ರಸ್ಟಿ ವಾಟ್ಸ್​ಆ್ಯಪ್ ಮಾಡಿರುವ ವರದಿಯ ಪ್ರಕಾರ, ವಾಟ್ಸ್​ಆ್ಯಪ್ ಗ್ರೂಪ್ ಕಾಲ್​​ನಲ್ಲಿ ವಿಶೇಷ ಫೀಚರ್ ಒಂದು ಸೇರ್ಪಡೆಯಾಗಲಿದೆಯಂತೆ. ಅಂದರೆ ಗ್ರೂಪ್ ಕಾಲ್​ನಲ್ಲಿ ಮಾತನಾಡುತ್ತಿರುವಾಗ ಕರೆಯಲ್ಲಿರುವ ಸದಸ್ಯರು ಯಾರು ಯಾರು ಎಂಬುದು ಚೌಕಾಕಾರದ ಬಾಕ್ಸ್​​ನಲ್ಲಿ ಕಾಣಿಸಲಿದೆ. ಇದರ ಕೆಳಬಾಗದಲ್ಲಿ ಮ್ಯೂಟ್, ವಾಲ್ಯೂಮ್, ಕರೆ ಕಟ್ ಮಾಡುವ ಆಯ್ಕೆ ನೀಡಲಾಗಿದೆ. ಆರಂಭದಲ್ಲಿ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು, ತದನಂತರ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಇದರ ಜೊತೆಗೆ ವಾಟ್ಸ್​ಆ್ಯಪ್ ಪರಿಚಯಿಸಲು ಹೊರಟಿರುವ ಮತ್ತೊಂದು ಹೊಸ ಅಪ್ಡೇಟ್ ಕವರ್ ಫೋಟೋ. ಹೌದು, ನೀವು ಫೇಸ್​ಬುಕ್​ನಲ್ಲಿ ಕವರ್ ಫೋಟೋ ಆಯ್ಕೆಯನ್ನು ನೋಡಿರುತ್ತೀರಿ. ಸದ್ಯದಲ್ಲೇ ಇದೇರೀತಿಯ ಆಯ್ಕೆ ವಾಟ್ಸ್​ಆ್ಯಪ್​​ನಲ್ಲೂ ಸಿಗಲಿದೆ. ವಾಟ್ಸ್​ಆ್ಯಪ್ ಬೇಟಾಇನ್​ಫೋ ವರದಿ ಪ್ರಕಾರ, ಈ ಆಯ್ಕೆ ವಾಟ್ಸ್​ಆ್ಯಪ್ ಪ್ರೊಫೈಲ್​ನಲ್ಲಿ ಕಾಣಲಿದೆಯಂತೆ. ಇದಕ್ಕಾಗಿ ನೀವು ಬಿಸ್ನೆಸ್ ಸೆಟ್ಟಿಂಗ್​ನಲ್ಲಿ ಕೆಲವು ಬದಲಾವಣೆ ಮಾಡಬೇಕಷ್ಟೆ. ಕವರ್ ಫೋಟೋ ಹಾಕಬೇಕೆಂದರೆ ನಿಮ್ಮ ಪ್ರೊಫೈಲ್​ನಲ್ಲಿ ಕ್ಯಾಮೆರಾ ಬಟನ್ ಕಾಣಿಸುತ್ತದಂತೆ. ಅದಕ್ಕೆ ಕ್ಲಿಕ್ ಮಾಡಿ ಹೊಸ ಫೋಟೋ ಅಥವಾ ಕ್ಯಾಮೆರಾ ಮೂಲಕ ಫೋಟೋ ತೆಗೆಯಲು ಅನುಮತಿ ಕೇಳುತ್ತದೆ. ನಿಮಗಿಷ್ಟದ ಫೋಟೋ ಆಯ್ಕೆ ಮಾಡಿ ಕವರ್ ಫೋಟೋ ಸೆಟ್ ಮಾಡಬಹುದಂತೆ.

ಬ್ಯಾಕ್‌ಗ್ರೌಂಡ್‌ ವಾಲ್‌ ಪೇಪರ್‌ ಫೀಚರ್:

ವಾಟ್ಸ್​ಆ್ಯಪ್ ಪರಿಚಯಿಸಲು ಮುಂದಾಗಿರುವ ಮತ್ತೊಂದು ಹೊಸ ಫೀಚರ್ ಮೂಲಕ ಪ್ರತಿ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್‌ ಸೆಟ್‌ ಮಾಡಬಹುದು. ಸದ್ಯದಲ್ಲೇ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಇದಲ್ಲದೆ ವಾಟ್ಸ್​ಆ್ಯಪ್​ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ನೊಟಿಫಿಕೇಶನ್‌ ಜೊತೆಗೆ ಗ್ರೂಪ್‌ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ವಾಯ್ಸ್‌ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ. ವಾಯ್ಸ್‌ ನೋಟ್‌ ತೆಗೆದುಕೊಳ್ಳುವಾಗ ಯಾರಾದರೂ ಅಡ್ಡಿಪಡಿಸಿದಾಗ ವಿರಾಮ ತೆಗೆದುಕೊಳ್ಳಬೇಕಾದಾಗ ಈ ಫೀಚರ್ಸ್‌ ಉಪಯುಕ್ತವಾಗಿರುತ್ತದೆ.

ಕಾಲ್‌ ಇಂಟರ್ಫೇಸ್ ಫೀಚರ್:

ವಾಟ್ಸ್​ಆ್ಯಪ್​​ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಇನ್‌ ಕಾಲ್‌ ಯುಐ ಪರಿಚಯಿಸಲು ಪ್ಲಾನ್‌ ನಡೆಸಿದೆ. ಇದರಿಂದ ವಾಟ್ಸ್​ಆ್ಯಪ್​​ ಕಾಲ್‌ ಸಮಯದಲ್ಲಿ ಸ್ಕ್ರೀನ್‌ ನಡುವೆ ಗ್ರೇ ಸ್ಕ್ವೇರ್‌ ಅಳವಡಿಸುವುದಾಗಿ ಕಂಪನಿ ಹೇಳಿದೆ. ಇದರಿಂದ ನೀವು ಸ್ಪೀಕರ್ ಮೋಡ್‌ಗೆ ಬದಲಾಯಿಸಲು, ವಿಡಿಯೋ ಕರೆಗೆ ಬದಲಾಯಿಸುವ ಬಟನ್‌ಗಳು ಕೆಳಹಂತದಲ್ಲಿ ಲಭ್ಯವಾಗಲಿದೆ.

Laptops under 30000: 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ

Flipkart – Amazon: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೊಸ ಮೇಳ: ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಆಫರ್

TV9 Kannada


Leave a Reply

Your email address will not be published. Required fields are marked *