WhatsApp: ಸ್ಮಾರ್ಟ್​​ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಬಹುದು: ಹೇಗೆ ಗೊತ್ತೇ? | WhatsApp allows users to stay connected with their friends even without a phone Here is the Tricks


WhatsApp Tips and Tricks: ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್​ಆ್ಯಪ್ ಅನ್ನು ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ.

ಫೋನ್ ಇಲ್ಲದೆಯೇ ಸ್ನೇಹಿತರು, ಕುಟುಂಬದವರು ಅಥವಾ ಯಾರ ಜೊತೆ ಬೇಕಾದರು ಚಾಟ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​​ಆ್ಯಪ್ ನೀಡಿದೆ. ಅರೇ ಫೋನ್ ಇಲ್ಲದೆ ಇದು ಹೇಗೆ ಅಂತೀರಾ?. ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚೆಗಷ್ಟೆ ನಿರೀಕ್ಷೆಗೂ ಮೀರಿದ ವಿಶೇಷ ಫೀಚರ್ (New WhatsApp Feature) ಒಂದನ್ನು ಪರಿಚಯಿಸಿತ್ತು. ಅದುವೆ ನಿಮ್ಮ ವಾಟ್ಸ್​ಆ್ಯಪ್ ಖಾತೆಯನ್ನು ಒಂದೇ ಸಮಯದ ವೇಳೆ ಬೇರೆ ಬೇರೆ ಡಿವೈಸ್​ಗೆ ಲಿಂಕ್ ಮಾಡುವುದು. ಈ ಮೂಲಕ ವಾಟ್ಸ್​ಆ್ಯಪ್ ಅನ್ನು ಹಲವು ಡಿವೈಸ್​ಗಳಲ್ಲಿ (WhatsApp Multiple Device) ಬಳಕೆ ಮಾಡಬಹುದಾಗಿದೆ. ಒಂದು ಬಾರಿ ನಿಮ್ಮ ಮೊಬೈಲ್ ಮೂಲಕ ಲಿಂಕ್ ಮಾಡಿದರೆ ನಂತರ ಆ ಮೊಬೈಲ್ ಲಿಂಕ್ ಮಾಡಿದ ಡಿವೈಸ್ ಹತ್ತಿರ ಇರಬೇಕೆಂದಿಲ್ಲ.

ಅಂದರೆ ಈ ಮಲ್ಟಿಡಿವೈಸ್ ಫೀಚರ್‌ ಬಳಸಿಕೊಂಡು ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳು ಮತ್ತು ಒಂದು ಫೋನ್ ಅನ್ನು ಸಂಪರ್ಕಿಸಬಹುದು. ಒಂದೇ ವಾಟ್ಸ್​​​ಆ್ಯಪ್ ಅನ್ನು ಇತರೆ ಮೂರು ಲ್ಯಾಪ್ಟರ್ ಅಥವಾ ಡೆಸ್ಕ್​ಟಾಪ್​ನಲ್ಲಿ ವಾಟ್ಸ್​ಆ್ಯಪ್ ಬಳಸಬಹುದು. ಆದರೆ, ಫೋನ್ 14 ದಿನಗಳವರೆಗೆ ನಿಷ್ಕ್ರಿಯವಾಗಿದ್ದರೆ ಸಂಪರ್ಕಿತ ಸಾಧನಗಳು ಸಂಪರ್ಕ ಕಡಿತಗೊಳ್ಳುತ್ತವೆ.

TV9 Kannada


Leave a Reply

Your email address will not be published. Required fields are marked *