ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮೋದಿ ಏನು ಮಾಡಿದ್ದಾರೆ, ಯಾವ ಮುಖ ಇಟ್ಕೊಂಟು ಇಲ್ಲಿಗೆ ಮತ ಕೇಳಲು ಬರ್ತಾರೆ ಎಂದು ರಾಯಚೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಮೇಲೆ ಹರಿಹಾಯ್ದಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ
ರಾಯಚೂರು: ಕಲ್ಯಾಣ ಕರ್ನಾಟಕದ ಭಾಗದ ಕೆಲವೊಂದು ಹಳ್ಳಿಗಳನ್ನ ನೋಡಿದರೇ ಇನ್ನೂ ಶಿಲಾಯುಗದಲ್ಲಿದ್ದೇವೆ ಎಂದು ಅನ್ನಿಸುತ್ತದೆ. ಅದರ ಅಭಿವೃದ್ಧಿಗೆ ನನ್ನ ಅಭಿಮತ ಇದೆ. ಕಲ್ಯಾಣ ಕರ್ನಾಟಕ ಅತ್ಯಂತ ಹಿಂದುಳಿದಿದ್ದು, ಹೈದ್ರಾಬಾದ್ ಕರ್ನಾಟಕ ಬೋರ್ಡ್ ಮಾಡಿದರೂ ಅಲ್ಲಿನ ಚೇರ್ಮನ್ ಸಂಪತ್ತನ್ನ ಲೂಟಿ ಹೊಡೆಯೋಕೆ ಸರ್ಕಾರ ಬಿಟ್ಟುಕೊಂಡಿದೆ. ಹಳ್ಳಿ ಜನರ ಬದುಕನ್ನ ಸರಿಪಡಿಸಿಲ್ಲ. ಮೋದಿ ಯಾದಗಿರಿ, ಕಲಬುರ್ಗಿಗೆ ಬಂದ್ರಲ್ಲ ಈ ಭಾಗದ ಜನತೆಗೆ ಏನು ಕೊಟ್ಟಿದ್ದಾರೆ. 25 ಜನ ರೈತರು ತೊಗರಿ ಬೆಳೆದವರು ಸತ್ತು ಹೋಗಿದ್ದಾರೆ. ಆ ಬಗ್ಗೆ ಮೋದಿ ಚಕಾರ ಎತ್ತಿದ್ದಾರಾ.? ಏನೂ ನೋಡಿ ಮೋದಿಗೆ ಮತ ಹಾಕುತ್ತಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಫಾರ್ಮೆಟಿಕಲ್ ಹಬ್ ತರಲು ಮುಂದಾಗಿತ್ತು, ಅದನ್ನ ಉತ್ತರ ಭಾರತಕ್ಕೆ ತೆಗೆದುಕೊಂಡು ಹೋದ್ರು, ಆ ಮಂತ್ರಿ ಹೇಳ್ತಾರೆ ಯಾವ ಇನ್ಫ್ರಾಸ್ಟ್ರಕ್ಚರ್ ಬೇಕು.? ಇಲ್ಲಿ ಹುಡುಗರನ್ನು ಬೀದಿ ಪಾಲು ಮಾಡಿ, ಉದ್ಯೋಗ ಕಡಿತ ಮಾಡಿ, ಯಾವ ಮುಖ ಇಟ್ಕೊಂಟು ಮತ ಕೇಳಲು ಬರ್ತಾರೆ ಎಂದು ರಾಯಚೂರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.
ತಾಜಾ ಸುದ್ದಿ
ಗಾಣಗಾಪುರದಲ್ಲಿ ಕಾಶಿ ಮಾದರಿಯಲ್ಲಿ ಕಾರಿಡಾರ್ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ ಮೂರು ತಿಂಗಳಲ್ಲಿ ಸರ್ಕಾರ ಹೋದ ಮೇಲೆ ಈ ಸಿಎಂ ಮಾತನ್ನ ಯಾವನು ಕೇಳ್ತಾನೆ. ಮೂರು ವರ್ಷದಲ್ಲಿ ಮಾಡದೇ ಇದ್ದದ್ದನ್ನ ಈಗ ಮಾಡಲು ಸಾಧ್ಯವಾ.? ಮುಂಬರುವ ಸರ್ಕಾರ ಮಾಡಬೇಕು ಅಷ್ಟೇ. ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ಚುನಾವಣೆ ವೇಳೆ ಜಾಗಟೆ ಹೊಡೆದುಕೊಂಡು ಹೋದ್ರು ಏನಾದ್ರೂ ಮಾಡೋದಕ್ಕೆ ಆಯ್ತಾ.? ನಾಳೆ ಬೆಳಗ್ಗೆ ಚುನಾವಣೆ ಇಟ್ಕೊಂಡು ಈಗ ಘೋಷಣೆ ಮಾಡೋದು ಜನರನ್ನ ದಾರಿ ತಪ್ಪಿಸೋಕಷ್ಟೇ ಎಂದರು.
ಇನ್ನು ಮಂಡ್ಯವನ್ನ ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿರುವ ವಿಚಾರವಾಗಿ ಎಲ್ಲಾ ಪಕ್ಷಗಳು ತಮ್ಮದೇ ರೀತಿಯಲ್ಲಿ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಮಂಡ್ಯ ಜನತಾದಳದ ಭದ್ರ ಕೋಟೆ ಅದನ್ನ ಮುಗಿಸಲು ಹೊರಟಿದ್ದಾರೆ. ಅದನ್ನ ಮುಗಿಸೋದು ಅವರ ಕೈಯಲ್ಲಿದೆಯಾ.? ಜನ ತೀರ್ಮಾನ ಮಾಡ್ತಾರೆ. ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್ ಜೊತೆಗಿನ ವಿವಾದ ವಿಚಾರ ಕುರಿತು ಸುಮಲತಾ ದೊಡ್ಡವರಿದ್ದಾರೆ. ನಿಖಿಲ್ಗೂ ಅದಕ್ಕೂ ಸಂಬಂಧವಿಲ್ಲ. ಅವರು ದೊಡ್ಡವರು ಬೆಳೆದು ಬಿಟ್ಟಿದ್ದಾರೆ. ಅವರ ಬಗ್ಗೆ ಚರ್ಚೆ ಮಾಡೋದು ಬೇಡ ಎಂದರು.