
ವೆಸ್ಟ್ ಇಂಡೀಸ್ ತಂಡ
WI vs NED: ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ನೆದರ್ಲೆಂಡ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಇಡೀ ತಂಡವು 50 ಓವರ್ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಕೇವಲ 48.3 ಓವರ್ಗಳಲ್ಲಿ 214 ರನ್ ಗಳಿಸಿ ಆಲೌಟ್ ಆಯಿತು. ಉತ್ತರವಾಗಿ 215 ರನ್ಗಳ ಗುರಿಯನ್ನು ಕೆರಿಬಿಯನ್ ತಂಡ 45.3 ಓವರ್ಗಳಲ್ಲಿ ಸಾಧಿಸಿತು.
ನೆದರ್ಲೆಂಡ್ಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನೂ ವೆಸ್ಟ್ ಇಂಡೀಸ್ ಗೆದ್ದಿದೆ. ಎರಡನೇ ಏಕದಿನ ಪಂದ್ಯದಲ್ಲಿ ಕೆರಿಬಿಯನ್ ತಂಡ 5 ವಿಕೆಟ್ ಗಳ ಜಯ ಸಾಧಿಸಿತ್ತು. ವಿಂಡೀಸ್ ಈ ಪಂದ್ಯವನ್ನು ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಗೆದ್ದುಕೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡ 3 ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ. ನೂತನ ನಾಯಕ ನಿಕೋಲಸ್ ಪೂರನ್ (Nicholas Pooran) ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಇದು ಮೊದಲ ಏಕದಿನ ಸರಣಿ ಜಯವಾಗಿದೆ. ನೆದರ್ಲೆಂಡ್ಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 7 ವಿಕೆಟ್ ಗಳ ಜಯ ಸಾಧಿಸಿತ್ತು. ಸರಣಿಯ ಮೊದಲೆರಡು ಏಕದಿನ ಪಂದ್ಯಗಳನ್ನು ಗೆದ್ದುಕೊಂಡಿರುವ ಕೆರಿಬಿಯನ್ ತಂಡದ ಕಣ್ಣು ಈಗ ಕ್ಲೀನ್ ಸ್ವೀಪ್ ಮೇಲಿದೆ.
ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ನೆದರ್ಲೆಂಡ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಇಡೀ ತಂಡವು 50 ಓವರ್ಗಳನ್ನು ಸಹ ಆಡಲು ಸಾಧ್ಯವಾಗಲಿಲ್ಲ. ಕೇವಲ 48.3 ಓವರ್ಗಳಲ್ಲಿ 214 ರನ್ ಗಳಿಸಿ ಆಲೌಟ್ ಆಯಿತು. ಉತ್ತರವಾಗಿ 215 ರನ್ಗಳ ಗುರಿಯನ್ನು ಕೆರಿಬಿಯನ್ ತಂಡ 45.3 ಓವರ್ಗಳಲ್ಲಿ ಸಾಧಿಸಿತು.