Woman: ಸ್ತ್ರೀ ಅಂದರೆ ಬರೀ ಅವಶ್ಯಕತೆ ಅಲ್ಲ, ಅದರಾಚೆಗೆ ಇದೆ ಬದುಕಿನ ಸೌಂದರ್ಯ! ಏನದು ತಿಳಿಯೋಣ | Spiritually speaking in kannada respecting woman and finding woman in all walks of our life


Woman: ಸ್ತ್ರೀ ಅಂದರೆ ಬರೀ ಅವಶ್ಯಕತೆ ಅಲ್ಲ, ಅದರಾಚೆಗೆ ಇದೆ ಬದುಕಿನ ಸೌಂದರ್ಯ! ಏನದು ತಿಳಿಯೋಣ

ಸ್ತ್ರೀ ಅಂದರೆ ಬರೀ ಅವಶ್ಯಕತೆ ಅಲ್ಲ, ಅದರಾಚೆಗೆ ಇದೆ ಬದುಕಿನ ಸೌಂದರ್ಯ! ಏನದು ತಿಳಿಯೋಣ

ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ! ಅದರಾಚೆಗೆ ಇರುವುದೇ ಬದುಕಿನ ಸೌಂದರ್ಯ. ಉದಾಹರಣೆಗೆ ತೇಜಸ್ಸಿಗೆ ತೇಜಸ್ವಿನಿ, ಚುಕ್ಕಿಗೆ ಬಿಂದು, ನಕ್ಷತ್ರ. ಗೆರೆಗೆ- ರೇಖಾ, ಶಶಿರೇಖಾ. ಮುತ್ತಿಗೆ- ಸ್ವಾತಿ, ಹರಳಿಗೆ-ರತ್ನ, ಮಾದರಿಗೆ- ಸ್ಪೂರ್ತಿ, ಪ್ರೇರಣಾ. ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು. ಆಕೆಗೆ ಒಂದು ನಮನ. ಸ್ತ್ರೀಯನ್ನು ಹೇಗೆಲ್ಲಾ, ಯಾವ ಗುಣ, ರೂಪದಲ್ಲಿ ಕಾಣಬಹುದು ಎಂಬ ಸೂಕ್ಷ್ಮವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಒಮ್ಮೆ ಇದನ್ನು ಗಮನಿಸಿದರೆ ಹೆಣ್ಣಿನ ಬಗೆಗಿನ ಗೌರವ ಆದರಗಳು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.

ರಾಮನಿಗೆ – ಸೀತೆ
ಕೃಷ್ಣನಿಗೆ – ರಾಧೆ
ಶಿವನಿಗೆ – ಪಾರ್ವತಿ
ನಾರಾಯಣನಿಗೆ – ಲಕ್ಷ್ಮೀ
ಮಂತ್ರ ಪಠಣದಲ್ಲಿ – ಗಾಯತ್ರಿ
ಗ್ರಂಥ ಪಠಣದಲ್ಲಿ – ಗೀತಾ
ದೇವರೆ ಎದುರಿಗೆ – ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ.. ಜೊತೆಗೆ ಶ್ರದ್ಧಾ

ನಮ್ಮ ದಿನಚರಿಯಲ್ಲಿ
ಉದಯಕ್ಕೆ – ಉಷಾ, ಅರುಣಾ
ಸಂಜೆಗೆ – ಸಂಧ್ಯಾ
ರಾತ್ರಿಗೆ – ನಿಶಾ
ಬೆಳಕಿಗೆ – ಜ್ಯೋತಿ, ದೀಪ, ದೀಪಿಕಾ, ಪ್ರಭಾ
ಬೆಳದಿಂಗಳಿಗೆ – ರಜನಿ
ಸೂರ್ಯಕಿರಣಕ್ಕೆ – ರಶ್ಮಿ, ಕಿರಣ
ಚಂದಿರನಿಗೆ – ಶಶಿ, ಶಶಿಕಲಾ, ಚಂದ್ರಕಲಾ
ಹೆಸರಾಗುವುದಕ್ಕೆ – ಕೀರ್ತಿ
ಕನಸಿಗೆ – ಸ್ವಪ್ನ

ನೋಟಕ್ಕೆ – ನಯನಾ, ನೇತ್ರ
ಕೇಳುವುದಕ್ಕೆ – ಶ್ರಾವ್ಯ, ಶ್ರಾವಣಿ,
ಮಾತನಾಡುವುದಕ್ಕೆ – ವಾಣಿ, ವಾಣಿಶ್ರೀ, ಸುಭಾಷಿಣಿ
ಭೂಮಿಗೆ – ಅವನಿ, ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ
ಹಸು, ಆಕಳಿಗೆ – ನಂದಿನಿ
ಜಗತ್ತಿಗೆ – ಜಗದೀಶ್ವರಿ, ಜಗದಾಂಬೆ
ದೇಶಕ್ಕೆ – ಭಾರತಿ, ಭಾರತಾಂಬೆ
ಕನ್ನಡ ನಾಡಿಗೆ – ಭುವನೇಶ್ವರಿ
ಋತುಗಳಿಗೆ – ಚೈತ್ರ, ವಸಂತ, ಗ್ರೀಷ್ಮ

ಸಮರ್ಪಣೆಗೆ – ಅರ್ಪಣಾ
ಆಹಾರಕ್ಕೆ – ಅನ್ನಪೂರ್ಣ
ನಡೆಯುವುದಕ್ಕೆ – ಹಂಸಾ
ನಗುವಿಗೆ – ಸುಹಾಸಿನಿ
ಚೆಲುವಿಕೆಗೆ – ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
ಸುವಾಸನೆಗೆ – ಚಂದನ, ಪರಿಮಳ
ಒಳ್ಳೆಯ ನುಡಿಗೆ – ಸುಭಾಷಿಣಿ
ತೇಜಸ್ಸಿಗೆ – ತೇಜಸ್ವಿನಿ

ಚುಕ್ಕಿಗೆ – ಬಿಂದು, ನಕ್ಷತ್ರ
ಗೆರೆಗೆ – ರೇಖಾ, ಶಶಿರೇಖಾ
ಮುತ್ತಿಗೆ – ಸ್ವಾತಿ
ಹರಳಿಗೆ – ರತ್ನ
ಮಾದರಿಗೆ – ಸ್ಪೂರ್ತಿ, ಪ್ರೇರಣಾ
ಪ್ರತಿಕ್ರಿಯಿಸುವುದಕ್ಕೆ – ಸ್ಪದಂನಾ
ಕೆಲಸಕ್ಕೆ – ಕೃತಿ, ಕೃತಿಕ
ಇಷ್ಟಕ್ಕೆ – ಪ್ರೀತಿ

ನೀರಿಗೆ – ಗಂಗಾ
ಬಂಗಾರಕ್ಕೆ- ಸುವರ್ಣ, ಕನಕ, ಹೇಮಾ
ಬೆಳ್ಳಿಗೆ – ರಜತ, ರಂಜಿತ
ಚಿತ್ತಾರಕ್ಕೆ – ಚಿತ್ರ
ಊಹೆಗೆ – ಕಲ್ಪನಾ
ನಿಜ ಸಂಗತಿಗೆ – ಸತ್ಯವತಿ
ಶುದ್ಧತೆಗೆ – ನಿರ್ಮಲ, ಪವಿತ್ರ
ಆಲೋಚನೆಗೆ – ಭಾವನಾ

ಕಣ್ಣುಗಳಿಗೆ – ನೇತ್ರಾ, ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣ, ವಿದ್ಯಾಭ್ಯಾಸಕ್ಕೆ – ವಿದ್ಯಾ, ಸರಸ್ವತಿ, ಶಾರದಾ
ಬುದ್ಧಿಗೆ, ಚತುರತೆಗೆ – ಪ್ರತಿಭಾ
ಸಂತೋಷಕ್ಕೆ – ಖುಷಿ, ಆನಂದಿನಿ, ಹರ್ಷಲಾ
ಕೋಪಕ್ಕೆ – ಭೈರವಿ, ಕಾಳಿ
ಧೈರ್ಯಕ್ಕೆ – ದುರ್ಗೆ
ಗೆಲುವಿಗೆ – ಜಯಲಕ್ಷ್ಮಿ, ವಿಜಯಲಕ್ಷ್ಮಿ

ಹೆಸರಾಗುವುದಕ್ಕೆ – ಕೀರ್ತಿ
ಹಾಡಿಗೆ – ಸಂಗೀತ
ಗಾಯನಕ್ಕೆ – ಶೃತಿ, ಪಲ್ಲವಿ, ಕೋಕಿಲ
ನಾಟ್ಯ – ಮಯೂರಿ
ಸಾಹಿತ್ಯ – ಕವಿತಾ, ಕಾವ್ಯ
ನಿಸರ್ಗಕ್ಕೆ – ಪ್ರಕೃತಿ
ರಕ್ಷಣೆಗೆ – ಸುರಕ್ಷಾ

ಸಂಪಾದನೆಗೆ – ಲಕ್ಷ್ಮೀ
ಸ್ಪೂರ್ತಿಗೆ – ಪ್ರೇರಣಾ
ಮೌನಕ್ಕೆ – ಶಾಂತಿ
ಮಧುರತೆಗೆ – ಮಾಧುರಿ, ಮಂಜುಳ
ಕನಿಕರಕ್ಕೆ – ಕರುಣಾ
ಆಕ್ರೋಶಕ್ಕೆ – ಕಾಳಿ
ವಾತ್ಸಲ್ಯಕ್ಕೆ – ಮಮತಾ
ಆಯುಷ್ಯಕ್ಕೆ – ಜೀವಿತಾ
ಮೋಡಗಳಿಗೆ – ಮೇಘ, ಮೇಘನಾ

ಚಿಮುಕಿಸುವಿಕೆಗೆ – ಸಿಂಚನಾ
ಬಿಳುಪಿಗೆ – ಶ್ವೇತಾ, ಗೌರಿ
ಕಪ್ಪಿಗೆ – ಕೃಷ್ಣೆ
ವಾಸನೆಗೆ – ಪರಿಮಳ
ಹೂವಿಗೆ – ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ
ಬಳ್ಳಿಗೆ – ಲತಾ,
ಶುಭಕರ – ಮಂಗಳ,  ಸುಮಂಗಳ, ಶುಭಾಂಗಿನಿ

ಒಳ್ಳೆಯ ಮನಸ್ಸಿಗೆ – ಸುಮನ
ಶ್ರೀಮಂತಿಕೆಗೆ – ಐಶ್ವರ್ಯ, ಸಿರಿ
ವಿಸ್ತಾರಕ್ಕೆ – ವಿಶಾಲ, ವೈಶಾಲಿ
ಜೇನಿಗೆ – ಮಧು
ಬಯಕೆಗೆ – ಆಶಾ, ಅಪೇಕ್ಷಾ

ತೀರ್ಮಾನಕ್ಕೆ- ನಿಶ್ಚಿತ
ಬರಹಕ್ಕೆ – ಲಿಖಿತ
ನೆರಳಿಗೆ – ಛಾಯಾ
ನಿಧಾನಕ್ಕೆ – ಮಂದಾಕಿನಿ
ಹೂ ಗೊಂಚಲಿಗೆ – ಮಂಜರಿ
ಗೌರವಕ್ಕೆ -ಮಾನ್ಯ, ಮಾನ್ಯತಾ

ನದಿಗಳಿಗೆ – ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

TV9 Kannada


Leave a Reply

Your email address will not be published. Required fields are marked *