Women’s T20 Challenge: ಮಹಿಳೆಯರ ಟಿ20 ಚಾಲೆಂಜ್: ಪಂದ್ಯ ಸೋತರೂ ಫೈನಲ್​ಗೆ ಲಗ್ಗೆಯಿಟ್ಟ ವೆಲಾಸಿಟಿ | Velocity suffered a 16 run defeat in the Womens T20 Challenge but still qualified for the final


Women's T20 Challenge: ಮಹಿಳೆಯರ ಟಿ20 ಚಾಲೆಂಜ್: ಪಂದ್ಯ ಸೋತರೂ ಫೈನಲ್​ಗೆ ಲಗ್ಗೆಯಿಟ್ಟ ವೆಲಾಸಿಟಿ

Velocity Team Women’s T20 Challenge

Trailblazers Beat Velocity: ಟ್ರೈಲ್‌ಬ್ಲೇಜರ್ಸ್‌ ತಂಡದ ಸಂಘಟಿತ ಹೋರಾಟದ ಎದುರು ಸೋಲು ಕಂಡರೂ ವೆಲಾಸಿಟಿ ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಮುನ್ನಡೆ ಸಾಧಿಸುವ ಮೂಲಕ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾದರಿಯಲ್ಲಿ ಆಯೋಜಿಸುತ್ತಿರುವ ಮಹಿಳಾ ಟಿ20 ಚಾಲೆಂಜ್​ (Women’s T20 Challenge) ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಹಾಲಿ ಚಾಂಪಿಯನ್ ಟ್ರೈಲ್‌ಬ್ಲೇಜರ್ಸ್‌ ತಂಡದ ಸಂಘಟಿತ ಹೋರಾಟದ ಎದುರು ಸೋಲು ಕಂಡರೂ ವೆಲಾಸಿಟಿ (Trailblazers vs Velocity) ತಂಡ ರನ್‌ರೇಟ್ ಲೆಕ್ಕಾಚಾರದಲ್ಲಿ ಮುನ್ನಡೆ ಸಾಧಿಸುವ ಮೂಲಕ ಮಹಿಳೆಯರ ಮಿನಿ ಐಪಿಎಲ್ ಖ್ಯಾತಿಯ ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯಲ್ಲಿ ಫೈನಲ್​ಗೆ ಲಗ್ಗೆಯಿಟ್ಟಿದೆ. ಗುರವಾರ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬಾಟಿಂಗ್ ಮಾಡಿದ ಟ್ರೈಯಲ್ ಬ್ಲೇಜರ್ಸ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದರೆ, ವೆಲಾಸಿಟಿ ತಂಡ 9 ವಿಕೆಟ್ ಕಳೆದುಕೊಂಡು 174 ರನ್ ಮಾತ್ರ ಗಳಿಸಲು ಶಕ್ತವಾಯಿತು.

ಫೈನಲ್ ತಲುಪಬೇಕಾದರೆ ಟ್ರೈಯಲ್ ಬ್ಲೇಜರ್ಸ್ ತಂಡವು ವೆಲಾಸಿಟಿ ತಂಡವನ್ನು 158 ರನ್ ಗೆ ನಿಯಂತ್ರಿಸಬೇಕಿತ್ತು. ಆದರೆ ದೀಪ್ತಿ ಶರ್ಮಾ ನಾಯಕತ್ವದ ವೆಲಾಸಿಟಿ 174 ರನ್ ಗಳಿಸಿ ರನ್ ರೇಟ್ ಉತ್ತಮ ಪಡಿಸಿಕೊಂಡಿತು. ಹೀಗಾಗಿ ಪಂದ್ಯ ಗೆದ್ದರೂ ಮಂಧನಾ ಪಡೆಗೆ ಫೈನಲ್ ಟಿಕೆಟ್ ದೊರಕಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರೈಲ್‌ಬ್ಲೇಜರ್ಸ್‌, ಆರಂಭಿಕ ಬ್ಯಾಟುಗಾರ್ತಿ ಸಭಿನೆನಿ ಮೇಘನಾ (73 ರನ್, 47 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಜೆಮೀಮಾ ರೋಡ್ರಿಗಸ್ (66 ರನ್, 44 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗೆ 190 ರನ್ ಕಲೆಹಾಕಿತು. ಪ್ರತಿಯಾಗಿ ನಾಗಾಲ್ಯಾಂಡ್‌ನ ಯುವ ಬ್ಯಾಟುಗಾರ್ತಿ ಕಿರಣ್ ಪ್ರಭು ನವ್ಗಿರೆ (69 ರನ್, 34ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ ವೆಲಾಸಿಟಿ ತಂಡ 9 ವಿಕೆಟ್‌ಗೆ 174 ಮೊತ್ತ ಪೇರಿಸಲಷ್ಟೇ ಶಕ್ತವಾಯಿತು.

Jos Buttler: ಶಾಕಿಂಗ್: ಜೋಸ್ ಬಟ್ಲರ್ ನನ್ನ ಎರಡನೇ ಗಂಡ ಎಂದ ಸ್ಟಾರ್ ಆಟಗಾರನ ಪತ್ನಿ

ಸೂಪರ್‌ನೋವಾಸ್ ಮತ್ತು ವೆಲಾಸಿಟಿ ತಂಡಗಳು ಮಹಿಳಾ ಚಾಲೆಂಜ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಶನಿವಾರ ಆಯೋಜಿಸಲಾಗಿದೆ.

ಸಂಕ್ಷಿಪ್ತ ಸ್ಕೋರ್:

ಟ್ರೇಲ್‌ಬ್ಲೇಜರ್ಸ್: 20 ಓವರ್‌ಗಳಲ್ಲಿ 5ಕ್ಕೆ190 (ಸಬ್ಬಿನೇನಿ ಮೇಘನಾ 73, ಜೆಮಿಮಾ ರಾಡ್ರಿಗಸ್ 66, ಹೆಯಲಿ ಮ್ಯಾಥ್ಯೂಸ್ 27; ಸಿಮ್ರನ್ ಬಹಾದೂರ್ 31ಕ್ಕೆ2, ಸ್ನೇಹ ರಾಣಾ 37ಕ್ಕೆ1, ಅಯಬೋಂಗಾ ಕಾಕಾ 27ಕ್ಕೆ1)

ವೆಲಾಸಿಟಿ: 20 ಓವರ್‌ಗಳಲ್ಲಿ 9ಕ್ಕೆ 174 (ಶಫಾಲಿ ವರ್ಮಾ 29, ಕಿರಣ್ ಪ್ರಭು 69; ರೇಣುಕಾ ಸಿಂಗ್ 32ಕ್ಕೆ1, ಹಯೆಲಿ ಮ್ಯಾಥ್ಯೂಸ್ 20ಕ್ಕೆ1, ಸಲ್ಮಾ ಖಾತೂನ್ 22ಕ್ಕೆ1, ರಾಜೇಶ್ವರಿ ಗಾಯಕವಾಡ್ 44ಕ್ಕೆ2, ಪೂನಂ ಯಾದವ್ 33ಕ್ಕೆ2, ಸೋಫಿಯಾ ಡಂಕ್ಲಿ 8ಕ್ಕೆ1).

TV9 Kannada


Leave a Reply

Your email address will not be published. Required fields are marked *