Women’s T20 Challenge: ರಣ ರೋಚಕ ಕದನದಲ್ಲಿ ಕೌರ್ ಪಡೆಗೆ ಗೆಲುವು: 3ನೇ ಬಾರಿ ಪ್ರಶಸ್ತಿ ಗೆದ್ದ ಸೂಪರ್‌ ನೋವಾಸ್ | Harmanpreet Kaur led Supernovas beat Velocity by four runs at the MCA Stadium in Pune to win their third title


Supernovas vs Velocity: ಮಹಿಳಾ ಟಿ20 ಚಾಲೆಂಜ್​ ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಸೂಪರ್‌ ನೋವಾಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದೆ.

ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾದರಿಯಲ್ಲಿ ಆಯೋಜಿಸುತ್ತಿರುವ ಮಹಿಳಾ ಟಿ20 ಚಾಲೆಂಜ್​ (Women’s T20 Challenge) ಟೂರ್ನಿಯಲ್ಲಿ ಸೂಪರ್‌ ನೋವಾಸ್ (Supernovas) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ಸೂಪರ್‌ ನೋವಾಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದೆ. ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಹರ್ಮಾನ್‌ಪ್ರೀತ್ ಕೌರ್ ಪಡೆ 4 ರನ್‌ಗಳಿಂದ ವೆಲಾಸಿಟಿ ತಂಡದ ಎದುರು ರೋಚಕ ಜಯ ದಾಖಲಿಸಿತು.

ಟಾಸ್‌ ಗೆದ್ದ ವೆಲೋಸಿಟಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದ ಸೂಪರ್‌ನೋವಾಸ್‌ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 165 ರನ್‌ ಗಳಿಸಿತು. ಅಗ್ರ ಕ್ರಮಾಂಕದ ಪ್ರಿಯಾ ಪೂನಿಯಾ, ಡಿಯಾಂಡ್ರ ದೊತಿನ್ ಮತ್ತು ಹರ್ಮನ್‌ ಪ್ರೀತ್‌ ಕೌರ್‌ ಸೂಪರ್‌ನೋವಾ ಪರ ಅಮೋಘ ಬ್ಯಾಟಿಂಗ್‌ ಮಾಡಿದರು. ಪ್ರಿಯಾ ಮತ್ತು ಡಿಯಾಂಡ್ರ ಮೊದಲ ವಿಕೆಟ್‌ಗೆ ಇಬ್ಬರೂ 73 ರನ್ ಸೇರಿಸಿದರು. ಡಿಯಾಂಡ್ರ 4 ಸಿಕ್ಸರ್‌ ಮತ್ತು 1 ಬೌಂಡರಿಯೊಂದಿಗೆ 44 ಎಸೆತಗಳಲ್ಲಿ 62 ರನ್‌ ಗಳಿಸಿದರೆ, ಹರ್ಮನ್‌ಪ್ರೀತ್‌ ಕೌರ್ 3 ಸಿಕ್ಸರ್ ಸಿಡಿಸಿದರು. 29 ಎಸೆತಗಳಲ್ಲಿ 43 ರನ್‌ ಗಳಿಸಿದರು. 13 ರನ್‌ ಗಳಿಸಿದ ವೇಳೆ ಜೀವದಾನ ಪಡೆದ 30ರ ಹರೆಯದ ಡಾಟಿನ್‌ ಅವರು ಆಬಳಿಕ ಉತ್ತಮವಾಗಿ ಆಡಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು.

Sanju Samson: ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಲವ್ ಸ್ಟೋರಿ, ವೈವಾಹಿಕ ಬದುಕು ಹೇಗಿದೆ ಗೊತ್ತಾ? ಫೋಟೋ ನೋಡಿ

ನಂತರ ಟಾರ್ಗೆಟ್ ಬೆನ್ನಟ್ಟಿದ ವೆಲಾಸಿಟಿ ಲೌರಾ ವೊಲ್ವಾರ್ಡ್ (65*ರನ್, 40 ಎಸೆತ, 5 ಬೌಂಡರಿ) ಹಾಗೂ ಸಿಮ್ರಾನ್ (20*ರನ್) ಪ್ರತಿಹೋರಾಟದ ನಡುವೆಯೂ ವೆಲಾಸಿಟಿ 8 ವಿಕೆಟ್‌ಗೆ 161 ರನ್‌ಗಳಿಸಲಷ್ಟೇ ಶಕ್ತವಾಯಿತು. ಲೋಸಿಟಿ ತಂಡದ ವೊಲ್ವಾರ್ಟ್‌ 40 ಎಸೆತಗಳಲ್ಲಿ 5 ಬೌಂಡರಿ, ಮೂರು ಸಿಕ್ಸರ್ ಸಿಡಿಸಿದರು. ಅಲಾನ ಕಿಂಗ್‌ (32ಕ್ಕೆ 3), ಸೋಫಿ ಎಕ್ಲೆಸ್ಟೋನ್‌ (28ಕ್ಕೆ 2) ಮತ್ತು ಡಿಯಾಂಡ್ರ ದೊತಿನ್‌ (28ಕ್ಕೆ 2) ಸೂಪರ್‌ನೋವಾಸ್‌ ಪರ ಬೌಲಿಂಗ್‌ನಲ್ಲಿ ಮಿಂಚಿದರು. ಕೊನೆ ಹಂತದಲ್ಲಿ ಲಾರಾ ವೊಲ್ವಾಡ್‌ಮತ್ತು ಸಿಮ್ರಾನ್‌ ಬಹದ್ದೂರ್‌ ಅವರು ಗೆಲುವು ದಾಖಲಿಸಲು ಶಕ್ತಿಮೀರಿ ಪ್ರಯತ್ನಿಸಿದರು.

ಸಂಕ್ಷಿಪ್ತ ಸ್ಕೋರ್:

ಸೂಪರ್‌ನೋವಾಸ್: 7 ವಿಕೆಟ್‌ಗೆ 165 (ಪ್ರಿಯಾ ಪೂನಿಯಾ 28, ಡೀನ್‌ದ್ರಾ ಡಾಟಿನ್ 62, ಹರ್ಮಾನ್‌ಪ್ರೀತ್ ಕೌರ್ 43, ಕೇಟ್ ಕ್ರಾಸ್ 29ಕ್ಕೆ 2, ದೀಪ್ತಿ ಶರ್ಮ 20ಕ್ಕೆ 2, ಸಿಮ್ರಾನ್ ಬಹದೂರ್ 30ಕ್ಕೆ 2).

ವೆಲಾಸಿಟಿ: 8 ವಿಕೆಟ್‌ಗೆ 161 (ವೊಲ್ವಾರ್ಡ್ 64*, ಸಿಮ್ರಾನ್ 20*, ಅಲಾನ್ ಕಿಂಗ್ 32ಕ್ಕೆ 3, ಸೋಫಿ ಎಲಕ್ಸ್‌ಸ್ಟೋನ್ 28ಕ್ಕೆ 2).

TV9 Kannada


Leave a Reply

Your email address will not be published. Required fields are marked *