World Cup 2023: 2023ರ ಏಕದಿನ ವಿಶ್ವಕಪ್​ಗೆ 7 ತಂಡಗಳು ನೇರ ಆಯ್ಕೆ – World Cup 2023: 7 teams qualify for WC Kannada News

World Cup 2023: ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗಲಿದೆ.

Nov 28, 2022 | 4:09 PM

TV9kannada Web Team

| Edited By: Zahir PY

Nov 28, 2022 | 4:09 PM

2023 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಆತಿಥೇಯ ಭಾರತ ಸೇರಿದಂತೆ 7 ತಂಡಗಳು ನೇರ ಅರ್ಹತೆ ಪಡೆದುಕೊಂಡಿದೆ. ಐಸಿಸಿ ಸೂಪರ್​ ಲೀಗ್ ಶ್ರೇಯಾಂಕ ಪಟ್ಟಿಯಲ್ಲಿರುವ 13 ತಂಡಗಳಲ್ಲಿ ಮೊದಲ 7 ಸ್ಥಾನ ಪಡೆದಿರುವ ತಂಡಗಳು ನೇರವಾಗಿ ವಿಶ್ವಕಪ್​ಗೆ ಆಯ್ಕೆಯಾಗಿದೆ.

ಒಟ್ಟು 8 ತಂಡಗಳಿಗೆ ನೇರ ಅರ್ಹತೆ ಪಡೆಯುವ ಅವಕಾಶವಿದ್ದು, ಇನ್ನೊಂದು ತಂಡದ ಭವಿಷ್ಯವು ಮುಂದಿನ ಸರಣಿಗಳ ಫಲಿತಾಂಶಗಳ ಮೂಲಕ ನಿರ್ಧಾರವಾಗಲಿದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್, ಐರ್ಲೆಂಡ್, ಸೌತ್ ಆಫ್ರಿಕಾ ಹಾಗೂ ಶ್ರೀಲಂಕಾ ನಡುವೆ ಪೈಪೋಟಿಯಿದ್ದು, ಹೀಗಾಗಿ ಇದರಲ್ಲಿ ಒಂದು ತಂಡವು ಟಾಪ್-8 ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

2023 ರ ಏಕದಿನ ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆದುಕೊಂಡ 7 ತಂಡಗಳು ಈ ಕೆಳಗಿನಂತಿವೆ...

2023 ರ ಏಕದಿನ ವಿಶ್ವಕಪ್​ಗೆ ನೇರವಾಗಿ ಅರ್ಹತೆ ಪಡೆದುಕೊಂಡ 7 ತಂಡಗಳು ಈ ಕೆಳಗಿನಂತಿವೆ…

1- ಭಾರತ

2- ಇಂಗ್ಲೆಂಡ್

2- ಇಂಗ್ಲೆಂಡ್

3- ನ್ಯೂಜಿಲೆಂಡ್

3- ನ್ಯೂಜಿಲೆಂಡ್

4- ಆಸ್ಟ್ರೇಲಿಯಾ

4- ಆಸ್ಟ್ರೇಲಿಯಾ

5- ಬಾಂಗ್ಲಾದೇಶ್

5- ಬಾಂಗ್ಲಾದೇಶ್

6- ಪಾಕಿಸ್ತಾನ್

6- ಪಾಕಿಸ್ತಾನ್

7- ಅಫ್ಘಾನಿಸ್ತಾನ್

7- ಅಫ್ಘಾನಿಸ್ತಾನ್

ಇನ್ನುಳಿದಂತೆ ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ನೆದರ್​ಲ್ಯಾಂಡ್ಸ್​ ತಂಡಗಳಲ್ಲಿ ಒಂದು ತಂಡವು ನೇರ ಅರ್ಹತೆ ಪಡೆಯಲಿದೆ.

ಉಳಿದ 5 ತಂಡಗಳು ಅರ್ಹತಾ ಸುತ್ತಿನ ಪಂದ್ಯಗಳನ್ನಾಡಬೇಕಾಗುತ್ತದೆ. ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗಲಿದೆ. ಅದರಂತೆ 2023 ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ.

Most Read Stories

TV9 Kannada

Leave a Reply

Your email address will not be published. Required fields are marked *