
Image Credit source: India.com
ಋತುಚಕ್ರದ ವೇಳೆ ನೈರ್ಮಲ್ಯ ಕಾಪಾಡಿಕೊಳ್ಳುವ ಸಲವಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಮಾಡುವ 9 ತಪ್ಪುಗಳು ಇಲ್ಲಿವೆ.
ಮಹಿಳೆಯರ ಜೀವನದಲ್ಲಿ ಋತುಚಕ್ರ (Menstrual) ಬಹಳ ಪ್ರಮುಖ ಘಟ್ಟ. ಋತುಚಕ್ರದಿಂದ ಹುಡುಗಿ ಯುವತಿಯಾಗಿ ಬಡ್ತಿ ಪಡೆಯುತ್ತಾಳೆ. ನಂತರ ಆ ಯುವತಿ ಮದುವೆಯಾದ ಮೇಲೆ ಮಹಿಳೆಯಾಗಿ ಬದಲಾಗುತ್ತಾಳೆ. ಈ ಋತುಚಕ್ರ ಮಹಿಳೆ ಗರ್ಭ ಧರಿಸಲು ಅತ್ಯಗತ್ಯವಾದ ಕ್ರಿಯೆಯಾಗಿದೆ. ಹೆಣ್ಣಾಗಿ ಹುಟ್ಟಿದ ಮೇಲೆ ಪಿರಿಯಡ್ಸ್ ಅಥವಾ ಋತುಚಕ್ರ ನೈಸರ್ಗಿಕ ಕ್ರಿಯೆಯಾಗಿದೆ. ಹೀಗಾಗಿ, ಋತುಚಕ್ರವಾದ ಮಹಿಳೆಯನ್ನು ದೂರ ಇಡುವುದು, ಆಕೆಯನ್ನು ಅಶುಭ ಎಂದು ಭಾವಿಸುವುದು ಬಹಳ ದೊಡ್ಡ ತಪ್ಪು. ಅಲ್ಲದೆ, ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರು ಶುಚಿತ್ವ (Menstrual Hygiene) ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ಕಂಡುಬರುವ ಸಾಮಾನ್ಯ ಮತ್ತು ನೈಸರ್ಗಿಕ ಬದಲಾವಣೆಯಾಗಿದೆ. ಗರ್ಭ ಧರಿಸಲು ಪಿರಿಯಡ್ಸ್ ಅತ್ಯಗತ್ಯ. ಆದರೆ, ಮಹಿಳೆಯರ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇರುವುದರಿಂದ ಮುಟ್ಟಿನ ಬಗ್ಗೆ ಕಳಂಕ ಮತ್ತು ನಿಷೇಧವಿದೆ. ಆದ್ದರಿಂದ, ಹೆಚ್ಚಿನ ಮಹಿಳೆಯರು ತಿಂಗಳ ಈ ಸಮಯದಲ್ಲಿ ತಮ್ಮ ದೇಹವನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದರ ಕುರಿತು ಗಮನ ಹರಿಸುವುದಿಲ್ಲ. ಋತುಚಕ್ರವಾದರೆ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು, ಬೇರೆಯವರನ್ನು ಮುಟ್ಟಬಾರದು, ಮನೆಯೊಳಗೆ ಓಡಾಡಬಾರದು ಹೀಗೆ ನಾನಾ ನಿರ್ಬಂಧಗಳನ್ನು ಮಹಿಳೆಯರ ಮೇಲೆ ಹೇರಲಾಗುತ್ತದೆ. (Source)
ಆದರೆ, ದೆಹಲಿಯ ಅಪೋಲೊ ಸ್ಪೆಕ್ಟ್ರಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ಶೀತಲ್ ಅಗರ್ವಾಲ್, ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಮಾಡುವ 9 ಸಾಮಾನ್ಯ ತಪ್ಪುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಋತುಚಕ್ರದ ವೇಳೆ ನೈರ್ಮಲ್ಯ ಕಾಪಾಡಿಕೊಳ್ಳುವ ಸಲವಾಗಿ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಸಾಮಾನ್ಯವಾಗಿ ಮಾಡುವ 9 ತಪ್ಪುಗಳು ಇಲ್ಲಿವೆ.
1. ಋತುಚಕ್ರವನ್ನು ಟ್ರ್ಯಾಕ್ ಮಾಡದಿರುವುದು:
ಎಷ್ಟೋ ಯುವತಿಯರು ತಮ್ಮ ಋತುಚಕ್ರದ ಬಗ್ಗೆ ಗಮನ ಹರಿಸುವುದಿಲ್ಲ. ಅವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ತಪ್ಪಾಗಿ ಮಾಡುತ್ತಿದ್ದೀರಿ. ಇದು ಋತುಚಕ್ರವನ್ನು ಗಮನದಲ್ಲಿಟ್ಟುಕೊಳ್ಳುವುದು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ನಿಮಗೆ ಎಷ್ಟು ದಿನಕ್ಕೊಮ್ಮೆ ಪಿರಿಯಡ್ಸ್ ಆಗುತ್ತಿದೆ, ಪ್ರತಿ ತಿಂಗಳೂ ಒಂದೇ ಅಂತರದಲ್ಲಿ ಋತುಚಕ್ರವಾಗುತ್ತಿದೆಯಾ? ರಕ್ತದ ಹರಿವು ಎಷ್ಟಿದೆ? ಮುಟ್ಟಿನ ನೋವಿನ ಬಗ್ಗೆ ನೀವು ತಿಳಿದುಕೊಳ್ಳಬೇಕು. ನಿಮ್ಮ ದೇಹವನ್ನು ನೀವು ಅರ್ಥ ಮಾಡಿಕೊಳ್ಳಬೇಕು.
2. ಸ್ಯಾನಿಟರಿ ಪ್ಯಾಡ್ ಬದಲಾಯಿಸದಿರುವುದು:
ಪ್ರತಿ 4 ಗಂಟೆಗಳಿಗೆ ಒಮ್ಮೆ ನೀವು ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೂನ್ ಅನ್ನು ಬದಲಾಯಿಸದಿದ್ದರೆ ನೀವು ಅಲರ್ಜಿಗಳು ಮತ್ತು ಸೋಂಕುಗಳಿಗೆ ಗುರಿಯಾಗುತ್ತೀರಿ. ಸಮಯಕ್ಕೆ ಸರಿಯಾಗಿ ಪ್ಯಾಡ್ ಬದಲಾಯಿಸದಿರುವುದು ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಆದ್ದರಿಂದ, ಹಾಗೆ ಮಾಡುವುದನ್ನು ತಪ್ಪಿಸಿ.
3. ಪಿರಿಯಡ್ಸ್ ಸಮಯದಲ್ಲಿ ವ್ಯಾಕ್ಸಿಂಗ್:
ಪಿರಿಯಡ್ಸ್ ಸಮಯದಲ್ಲಿ ಹಾರ್ಮೋನ್ ಏರಿಳಿತದಿಂದ ಚರ್ಮವು ಸೂಕ್ಷ್ಮವಾಗಿರುತ್ತದೆ. ಈ ಅವಧಿಯಲ್ಲಿ ವ್ಯಾಕ್ಸಿಂಗ್ ಮಾಡುವುದರಿಂದ ನೋವು ಉಂಟಾಗುತ್ತದೆ. ಹಾಗೇ, ಇದರಿಂದ ಚರ್ಮದ ಕೆಂಪು ಮತ್ತು ಕಿರಿಕಿರಿ ಉಂಟಾಗುತ್ತದೆ.