World Most Liveable City: ಮತ್ತೆ ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಬಿರುದು ಪಡೆದ ವಿಯೆನ್ನಾ | World Most Liveable City: Vienna makes comeback as the world’s most liveable city


ಈ ಹಿಂದೆ 2018 ಮತ್ತು 2019ರಲ್ಲಿ ವಿಯೆನ್ನಾ ಜಗತ್ತಿನ ವಾಸಯೋಗ್ಯ ನಗರಗಳ ಪೈಕಿ ಮೊದಲ ಸ್ಥಾನವನ್ನು ಹೊಂದಿತ್ತು. ಬಳಿಕ ಶ್ರೇಯಾಂಕದಲ್ಲಿ ಕೆಳಗೆ ಕುಸಿದಿದ್ದ ವಿಯೆನ್ನಾ ಈ ವರ್ಷ ಮತ್ತೆ ಮೊದಲ ಸ್ಥಾನಕ್ಕೇರಿದೆ.

ಬೆಂಗಳೂರು ಸೇರಿದಂತೆ ಜಗತ್ತಿನ ಅನೇಕ ನಗರಗಳಲ್ಲಿ ವಾಸವಾಗಲು ಜನರು ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಆದರೆ, ಜನರಿಗೆ ವಾಸಿಸಲು ಅತ್ಯಂತ ಯೋಗ್ಯವಾದ ವಾತಾವರಣ, ಮೂಲಭೂತ ಸೌಕರ್ಯಗಳು ಇತ್ಯಾದಿ ಸೌಲಭ್ಯವನ್ನು ಒದಗಿಸುವ ನಗರಗಳು ಯಾವುವು ಎಂದು ಪಟ್ಟಿ ಮಾಡಲಾಗಿದೆ. ಇಂದು ಪ್ರಕಟವಾದ ಎಕನಾಮಿಸ್ಟ್‌ನ ವಾರ್ಷಿಕ ವರದಿಯ ಪ್ರಕಾರ, ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಈ ಮೊದಲು ವಿಶ್ವದ ಅತಿ ವಾಸಯೋಗ್ಯ ನಗರಗಳಲ್ಲಿ ಕೈವ್ ನಗರ ಕೂಡ ಸ್ಥಾನ ಪಡೆದಿತ್ತು. ಆದರೆ, ಫೆಬ್ರವರಿ ಅಂತ್ಯದಲ್ಲಿ ರಷ್ಯಾ ಉಕ್ರೇನ್ ದೇಶವನ್ನು ಆಕ್ರಮಿಸಿದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಎದುರಾಗಿದ್ದು, ಉಕ್ರೇನಿಯನ್ ರಾಜಧಾನಿ ಕೈವ್ ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಆದರೆ ರಷ್ಯಾದ ನಗರಗಳಾದ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ವರದಿಯ ಪ್ರಕಾರ, ಕೊರೋನಾವೈರಸ್ ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ 34ನೇ ಸ್ಥಾನಕ್ಕೆ ಕುಸಿದ ಆಕ್ಲೆಂಡ್‌ನಿಂದ ವಿಯೆನ್ನಾ ಮೊದಲ ಸ್ಥಾನವನ್ನು ಕಸಿದುಕೊಂಡು ತಾನು ವಿಶ್ವದ ಅತ್ಯಂತ ವಾಸಯೋಗ್ಯ ನಗರವೆಂಬ ಬಿರುದು ಪಡೆದುಕೊಂಡಿದೆ.

TV9 Kannada


Leave a Reply

Your email address will not be published.