
Image Credit source: Hindustan Times
WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ವಿಶ್ವಾದ್ಯಂತ ತಂಬಾಕು ಸೇವನೆಯು ಪರಿಸರದ ಮೇಲೂ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ.
ಇಂದು (ಮೇ 31) ವಿಶ್ವ ತಂಬಾಕು ರಹಿತ ದಿನ. ವಿಶ್ವಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 80 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 600,000,000 ಮರಗಳನ್ನು ಕತ್ತರಿಸಲಾಗುತ್ತದೆ, 84,000,000 ಟನ್ಗಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಗಾಳಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಮತ್ತು 22,000,000,000 ಟನ್ಗಳಷ್ಟು ನೀರನ್ನು ಬಳಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ನೀಡಿದೆ.
WHO (ವಿಶ್ವ ಆರೋಗ್ಯ ಸಂಸ್ಥೆ) ಪ್ರಕಾರ, ವಿಶ್ವಾದ್ಯಂತ ತಂಬಾಕು ಸೇವನೆಯು ಪರಿಸರದ ಮೇಲೂ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕಿನಿಂದಾಗಿ ದೊಡ್ಡ ಪ್ರಮಾಣದ ಅರಣ್ಯನಾಶ ಮತ್ತು ವನ್ಯಜೀವಿ ಸೇರಿದಂತೆ ಜೀವವೈವಿಧ್ಯದ ನಷ್ಟ ಉಂಟಾಗಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. “ಗ್ರೀನ್ ಹೌಸ್ನ ಗ್ಯಾಸ್ನ ಅತಿಯಾದ ಹೊರಸೂಸುವಿಕೆ, ಕುಡಿಯುವ ನೀರಿನ ಮಾಲಿನ್ಯ ಮತ್ತು ಹೊಗೆಯ ಮೂಲಕ ಗಾಳಿಯಲ್ಲಿ ವಿಷಕಾರಿಗಳ ಹೊರಸೂಸುವಿಕೆಯಂತಹ ಸವಾಲುಗಳನ್ನು ಎದುರಿಸಲಾಗುತ್ತಿದೆ” ಎಂದು ಡಬ್ಲುಹೆಚ್ಓ ಹೇಳಿದೆ.