ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಅಂಗಾಂಗ ದಾನಕ್ಕೆ ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಸರ್ಕಾರಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ.

World Organ Donation Day 2022
ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು (World Organ Donation Day) ಅಂಗಾಂಗ ದಾನಕ್ಕೆ ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಸರ್ಕಾರಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಸಾಕಷ್ಟು ಜೀವಗಳನ್ನು ಉಳಿಸುವ ಸಲುವಾಗಿ ಸಾವಿನ ನಂತರ ತಮ್ಮ ಆರೋಗ್ಯಕರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸಲು ಈ ದಿನವು ಮೀಸಲಾಗಿರುವುದು. ಅಂಗಾಂಗ ದಾನಿ ಯಾರೇ ಆಗಿರಬಹುದು ಅವರ ಅಂಗವನ್ನು ತುಂಬಾ ಅಗತ್ಯವಿರುವ ರೋಗಿಗೆ ದಾನ ಮಾಡಬಹುದು. ರೋಗಿಗೆ ಕಸಿ ಮಾಡಲು, ಸಾಮಾನ್ಯ ವ್ಯಕ್ತಿ ನೀಡಿದ ಅಂಗವನ್ನು ಸರಿಯಾಗಿ ಸಂರಕ್ಷಿಸಲಾಗುವುದರಿಂದ ಅದನ್ನು ಸಮಯಕ್ಕೆ ಸರಿಯಾಗಿ ಬಳಸಬಹುದು. ಯಾರೋ ಒಬ್ಬ ವ್ಯಕ್ತಿ ನೀಡಿದ ದೇಹದ ಭಾಗದಿಂದ ಬೇರೆಯೊಬ್ಬರು ಹೊಸ ಜೀವನವನ್ನು ಪಡೆಯಬಹುದು.