World Refugee Day 2022: ವಿಶ್ವ ನಿರಾಶ್ರಿತರ ದಿನದ ಮಹತ್ವ | Importance of World Refugee Day 2022


World Refugee Day 2022: ವಿಶ್ವ ನಿರಾಶ್ರಿತರ ದಿನದ ಮಹತ್ವ

ಸೌಜನ್ಯ : ಅಂತರ್ಜಾಲ

Theme : ದಿ ಯುನೈಟೆಡ್ ನೇಶನ್ಸ್ ರೆಫ್ಯೂಜಿ ಏಜನ್ಸಿ 2021ರಲ್ಲಿ ಘೋಷಿಸಿದ ಥೀಮ್ ‘ನಾವು ಒಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು.’ ಪ್ರಸ್ತುತ 2022ರ ಥೀಮ್, ‘ಸುರಕ್ಷತಾ ಹಕ್ಕು’ ಅದು ಯಾರಿಗೋಸ್ಕರವೂ ಆಗಿರಲಿ, ಯಾವಾಗ ಎಲ್ಲಿ ಬೇಕಾದರೂ ಆಗಿರಲಿ. ಎಲ್ಲರನ್ನೂ ರಕ್ಷಿಸುವುದು ನಮ್ಮೆಲ್ಲರ ಆದ್ಯತೆ.   

World Refugee Day 2022: ಜಗತ್ತಿನಲ್ಲಿ ಅನೇಕ ಕಾರಣಗಳಿಂದ ಮೂಲಸೌಕರ್ಯಗಳಿಂದ ವಂಚಿತರಾಗಿ ನಿರಾಶ್ರಿತರಾದವರು ನಮ್ಮ ಸುತ್ತಲೂ ವಾಸಿಸುತ್ತಿದ್ದಾರೆ. ಅಂಥವರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪರಸ್ಪರ ಅರ್ಥ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ‘ವಿಶ್ವ ನಿರಾಶ್ರಿತರ ದಿನ’ವನ್ನು ಪ್ರತೀ ವರ್ಷ ಜೂನ್ 20ರಂದು  ಆಚರಿಸಲಾಗುತ್ತಿದೆ. ಯುನೈಟೆಡ್ ನೇಷನ್ಸ್​ ಜನರಲ್ ಅಸೆಂಬ್ಲಿಯು ಈ ದಿನವನ್ನು ಆಚರಿಸುವ ಬಗ್ಗೆ ನಿರ್ಣಯ ತೆಗೆದುಕೊಂಡಿತು. ಪ್ರಕೃತಿ ವಿಕೋಪಗಳಿಂದಾಗಿ ಜನರು ನಿರುಪಾಯವಾಗಿ ವಲಸೆಗೆ ಮುಖಮಾಡುವುದು ಒಂದೆಡೆಯಾದರೆ, ರಾಜಕೀಯ ಭಿನ್ನಾಭಿಪ್ರಾಯಗಳ ಪರಿಣಾಮ ಸಂಭವಿಸುವ ಯುದ್ಧ, ಹಿಂಸಾಚಾರ, ಜನಾಂಗೀಯ ಸಂಘರ್ಷ, ಧಾರ್ಮಿಕ ಭಿನ್ನಾಭಿಪ್ರಾಯದಿಂದ ಜನಸಾಮಾನ್ಯರು ಆ ಜಾಗದಿಂದ ಬಲವಂತವಾಗಿ ಕದಲಲೇಕಾಗುವುದು ಇನ್ನೊಂದೆಡೆ. ಹೀಗೆ ಶೋಷಣೆಗೆ ಒಳಗಾಗುವ ಜನರ ಆತಂಕವನ್ನು, ಅನಿಶ್ಚಿತತೆಯನ್ನು, ಭಯವನ್ನು ಹೋಗಲಾಡಿಸಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಉಳಿದವರದು. ಇಂಥ ಮಾನವೀಯ ಮನೋಭಾವವನ್ನು ಬೆಂಬಲಿಸಲೆಂದೇ ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.

ದಿ ಯುನೈಟೆಡ್ ನೇಶನ್ಸ್ ರೆಫ್ಯೂಜಿ ಏಜನ್ಸಿ 2021ರಲ್ಲಿ ಘೋಷಿಸಿದ ಥೀಮ್ ‘ನಾವು ಒಟ್ಟಾಗಿದ್ದರೆ ಏನನ್ನೂ ಸಾಧಿಸಬಹುದು.’ ಪ್ರಸ್ತುತ 2022ರ ಥೀಮ್, ‘ಸುರಕ್ಷತಾ ಹಕ್ಕು’ ಅದು ಯಾರನ್ನೂ, ಎಲ್ಲಿಯೂ, ಯಾವಾಗ ಬೇಕಾದರೂ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.

TV9 Kannada


Leave a Reply

Your email address will not be published.