ಱರ್ಕರ್​​ ಬೌಲಿಂಗ್​​ಗೆ ಈತ ಎಕ್ಸ್​​ಪರ್ಟ್​​.. ಈ ಹಿಂದೆ ಟೀಮ್​ ಇಂಡಿಯಾದ ಮ್ಯಾಚ್​ವಿನ್ನರ್​ ಕೂಡ ಆಗಿದ್ದ. ಆದರೆ ಬ್ಯಾಟ್ಸ್​ಮನ್​​​ಗಳ ಪಾಲಿಗೆ ವಿಲನ್​ ಆಗಿದ್ದ ಬೌಲರ್​, ಇದೀಗ ಸತತ ವೈಫಲ್ಯದ ಸುಳಿಗೆ ಸಿಲುಕಿದ್ದಾರೆ. ಒಂದಲ್ಲ ಎರಡಲ್ಲ, ಹಲವು ಸರಣಿಗಳಿಂದ ಫಾರ್ಮ್​​ಗೆ ಮರಳೋಕೆ ಹರಸಾಹಸ ಪಡ್ತಿದ್ದಾರೆ. ಈ ಅಂಕಿ-ಅಂಶಗಳು ಅದನ್ನೇ ಹೇಳ್ತಿವೆ.

ಜಸ್​ಪ್ರಿತ್​ ಬುಮ್ರಾ… ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಪವರ್​ ಹೌಸ್​. ಯಾರ್ಕರ್​​ ಜೊತೆಗೆ ಪೇಸ್​​​​ ಬೌಲಿಂಗ್​ ಆತನ ಅಸ್ತ್ರ. ಎದುರಾಳಿ ಎಂತಹ ವರ್ಲ್ಡ್​​ ಕ್ಲಾಸ್​ ಬ್ಯಾಟ್ಸ್​ಮನ್​ ಆಗಲಿ, ಬುಮ್ರಾ ಅಖಾಡಕ್ಕಿಳಿದರೆ, ಬ್ಯಾಟ್ಸ್​​ಮನ್​ ಕತೆ ಮುಗೀತು ಅಂತಾನೇ ಅರ್ಥ. ಕ್ರಿಕೆಟ್​ನ ಮೂರು ಫಾರ್ಮೆಟ್​ಗಳಲ್ಲಿ ಮಿಂಚಿದ ಬುಮ್ರಾ, ಮೋಸ್ಟ್ ಡೇಂಜರಸ್ ಬೌಲರ್​ ಕೂಡ ಆಗಿದ್ದ​. ಆದರೆ ಬ್ಯಾಟ್ಸ್​ಮನ್​​ಗಳ ಪಾಲಿಗೆ ವಿಲನ್​ ಆಗಿದ್ದ ಈ ಯಾರ್ಕರ್​ ಸ್ಪೆಷಲಿಸ್ಟ್​​​, ಅದ್ಯಾಕೋ ಕಳೆದೆರಡು ವರ್ಷಗಳಿಂದ ಟೆಸ್ಟ್​​​​​​​ ಕ್ರಿಕೆಟ್​ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.

ತಂಡಕ್ಕೆ ಕಾಲಿಟ್ಟಾಗಿನಿಂದ ಬ್ಯಾಟ್ಸ್​​ಮನ್​​ಗಳ ನಿದ್ದೆಗೆಡಿಸುತ್ತಿದ್ದ ಬುಮ್ರಾ, ಇದೀಗ ಬ್ಯಾಟ್ಸ್​​ಮನ್​​ಗಳನ್ನ ಕಟ್ಟಿಹಾಕೋದ್ರಲ್ಲಿ ಎಡವುತ್ತಿದ್ದಾರೆ. ಹೌದು, ಬುಮ್ರಾ ಕಳೆದೆರಡು ವರ್ಷಗಳಿಂದ ಟೆಸ್ಟ್​​ ಕ್ರಿಕೆಟ್​ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನವನ್ನ ನೀಡುವಲ್ಲಿ ವಿಫಲರಾಗ್ತಿದ್ದಾರೆ. ಅದಕ್ಕೆ ಬೆಸ್ಟ್​ ಎಕ್ಸಾಂಪಲ್​ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ ಟೂರ್ನಿಯಲ್ಲಿ ನೀಡಿರುವ ಅಸ್ಥಿರ ಪ್ರದರ್ಶನ. ಹಾಗಾಗಿ ಬೌಲಿಂಗ್​​​​ ಮೇಲಿನ ಹಿಡಿತವನ್ನ ಕಳೆದುಕೊಂಡಿದ್ದಾರಾ ಅನ್ನೋ ಪ್ರಶ್ನೆ ಕೂಡ ಕಾಡ್ತಿದೆ.

ಕಿವೀಸ್​​ ವೇಗಿಗಳಿಂದ ಜಸ್​ಪ್ರಿತ್​​ ಬುಮ್ರಾ ಕಲಿಯೋದು ಬಹಳಷ್ಟಿದೆ

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ನಲ್ಲಿ ನ್ಯೂಜಿಲೆಂಡ್​ ವೇಗಿಗಳು ಪೇಸ್​ ಆ್ಯಂಡ್​​ ಸ್ವಿಂಗ್​, ಲೈನ್​ ಆ್ಯಂಡ್​​ ಲೆಂಥ್​​, ಡೆಡ್ಲಿ ಅಟ್ಯಾಕಿಂಗ್​ ಬೌಲಿಂಗ್​​​ ಮಾಡ್ತಿದ್ದಾರೆ. ಆ ಮೂಲಕ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ಕಂಟಕವಾಗಿದ್ದಾರೆ. ಆದರೆ ಬುಮ್ರಾ ಮಾತ್ರ ಅದಕ್ಕೆ ವಿರುದ್ಧವಾಗಿ ಬೌಲಿಂಗ್​ ಮಾಡ್ತಿದ್ದು, ಕಿವೀಸ್​ ಪಡೆಗೆ ರನ್​ ಗಳಿಕೆಯ ಬೌಲರ್​ ಆಗಿದ್ದಾರೆ. ಸದ್ಯ ವಿಕೆಟ್​​​ಗೆ ಪರದಾಡ್ತಿರುವ ಬುಮ್ರಾ, ಕಿವೀಸ್​ ಸ್ಪೀಡ್​​ ಸ್ಟಾರ್​ಗಳಿಂದ ಸಾಕಷ್ಟು ಕಲಿಯಬೇಕಿದೆ ಅನ್ನೋದು ಈ ಮೂಲಕ ತಿಳಿಯುತ್ತೆ.

ವಿಕೆಟ್​ ಬೇಟೆಯಾಡ್ತಿದ್ದ ಯಾರ್ಕರ್​ ಕಿಂಗ್​​ ವಿಕೆಟ್​​ಗಾಗಿ ಪರದಾಟ

ಟಿ20, ಒನ್​ಡೇ, ಟೆಸ್ಟ್​ ಹೀಗೆ ಯಾವುದೇ ಫಾರ್ಮೆಟ್​ ಇರಲಿ, ವಿಕೆಟ್​ ಬೇಟೆಯಾಡೋದೆ ಬುಮ್ರಾ ಕೆಲಸವಾಗಿತ್ತು. ಆದರೆ ಎರಡು ವರ್ಷಗಳಿಂದ ಒಂದೊಂದು ವಿಕೆಟ್​​ಗೂ ಪರದಾಡ್ತಿದ್ದಾರೆ. ಅದರಲ್ಲೂ 2020ರ ಆಸ್ಟ್ರೇಲಿಯಾ ಟೆಸ್ಟ್​ ಸರಣಿಯಿಂದ ವಿಕೆಟ್​​ಗಾಗಿ ಪರದಾಟ ಆರಂಭವಾಗಿದೆ. ಫೆಬ್ರವರಿ-ಮಾರ್ಚ್​ನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ನಲ್ಲೂ ಬುಮ್ರಾ, ವಿಕೆಟ್​ಗಾಗಿ ಅವಸ್ಥೆ ಪಟ್ಟಿದ್ದರು. ಇದೀಗ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ನಲ್ಲೂ​ ಇದೇ ಫಜೀತಿ ಆಗಿದೆ.

WTC ಫೈನಲ್​​ನಲ್ಲಿ ಬುಮ್ರಾ ಪ್ರದರ್ಶನ

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ನಲ್ಲಿ ಬುಮ್ರಾ ಪ್ರದರ್ಶನ ನೋಡೋದಾದ್ರೆ, ಪ್ರಥಮ ಇನ್ನಿಂಗ್ಸ್​ನಲ್ಲಿ 26 ಓವರ್​​ ಎಸೆದಿದ್ದಾರೆ. 57 ರನ್​ ನೀಡಿರುವ ಬುಮ್ರಾ, ಒಂದೂ ವಿಕೆಟ್​ ಪಡೆದಿಲ್ಲ.

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ನಲ್ಲಿ ನೀಡಿದ ಕಳಪೆ ಪ್ರದರ್ಶನವನ್ನ ಉದ್ದೇಶಿಸಿ ನಾವು ಹೇಳ್ತಿಲ್ಲ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಟೂರ್ನಿಯ ಅಂಕಿ – ಅಂಶಗಳನ್ನ ನೋಡಿ ಹೇಳಲಾಗ್ತಿದೆ. ಅದು ಹೇಗಿದೆ ಅನ್ನೋದನ್ನ ನೀವೇ ನೋಡಿ.

WTC ಟೂರ್ನಿಯಲ್ಲಿ ಬುಮ್ರಾ ಪ್ರದರ್ಶನ

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನ 18 ಇನ್ನಿಂಗ್ಸ್​ಗಳಲ್ಲಿ​​​ ಬುಮ್ರಾ ಬೌಲಿಂಗ್​ ಮಾಡಿದ್ದು, 34 ವಿಕೆಟ್​​ ಅಷ್ಟೇ ಕಬಳಿಸಿದ್ದಾರೆ. ಟೂರ್ನಿಯಲ್ಲಿ 302 ಓವರ್​​ಗಳನ್ನು ಎಸೆದಿರುವ ಬುಮ್ರಾ, 27 ರನ್​ ನೀಡಿ 6 ವಿಕೆಟ್​ ಪಡೆದಿರೋದು ಇನ್ನಿಂಗ್ಸ್​ವೊಂದರ ಬೆಸ್ಟ್​​ ಪರ್ಫಾಮೆನ್ಸ್​ ಆಗಿದೆ.
ದೇಶ-ವಿದೇಶದ ಯಾವುದೇ ಪಿಚ್​ನಲ್ಲಿ ವಿಕೆಟ್​ ಪಡೆಯುತ್ತಿದ್ದ ಯಾರ್ಕರ್​ ಕಿಂಗ್​​, ಸದ್ಯ ಬೌಲಿಂಗ್​ ಮರೆತಂತೆ ಕಾಣ್ತಿದೆ. ತವರಿನಲ್ಲಿ ಅಬ್ಬರಿಸಬೇಕಿದ್ದ ಬುಮ್ರಾ, ಅದ್ಯಾಕೋ ಫುಲ್​ ಸೈಲಾಂಟಾಗಿದ್ದಾರೆ.

ತವರಿನಲ್ಲಿ ಈ ವರ್ಷ ಬುಮ್ರಾ ಪ್ರದರ್ಶನ

ತವರಿನಲ್ಲಿ ಈ ವರ್ಷ 2 ಪಂದ್ಯಗಳನ್ನಾಡಿರುವ ಬುಮ್ರಾ, 48 ಓವರ್​​​ಗಳಲ್ಲಿ ಬೌಲಿಂಗ್​ ಮಾಡಿದ್ದಾರೆ. ಆದರೆ ನಾಲ್ಕು ವಿಕೆಟ್​​ಗಳನ್ನಷ್ಟೇ ಕಬಳಿಸಿದ್ದಾರೆ. 84 ರನ್ ನೀಡಿ 3 ಪಡೆದಿರೋದು ಇನ್ನಿಂಗ್ಸ್​ವೊಂದರ ಬೆಸ್ಟ್​.

ಕಳೆದ ಎರಡು ವರ್ಷಗಳಿಂದ ಬುಮ್ರಾ ವೈಫಲ್ಯ ಅನುಭವಿಸ್ತಿದ್ದಾರೆ ನಿಜ. ಅದರಲ್ಲೂ 2021ರ ವರ್ಷದಲ್ಲಿ ಡೆತ್​ ಓವರ್​ ಸ್ಪೆಷಲಿಸ್ಟ್​ ತೀರಾ ಕಳಪೆ ಪ್ರದರ್ಶನ ತೋರಿದ್ದಾರೆ. ಬುಮ್ರಾರ ಈ ಪ್ರದರ್ಶನ ತಂಡದ ಹಿನ್ನಡೆಗೂ ಕಾರಣವಾಗಿದೆ. 2021ರಲ್ಲಿ ಬುಮ್ರಾರ ಒಟ್ಟಾರೆ ಪ್ರದರ್ಶನ ನೋಡೋದಾದ್ರೆ, ಅಷ್ಟೇನು ಪರಿಣಾಮಕಾರಿಯಾಗಿಲ್ಲ ಅನ್ನೋದನ್ನ ಈ ಅಂಕಿ-ಅಂಶಗಳೇ ಹೇಳ್ತಿವೆ.

2021ರಲ್ಲಿ ಬುಮ್ರಾ ಪ್ರದರ್ಶನ

2021ರಲ್ಲಿ ಒಟ್ಟು 4 ಪಂದ್ಯಗಳನ್ನಾಡಿದ್ದು, 120 ಓವರ್​​ಗಳನ್ನು ಎಸೆದಿದ್ದಾರೆ. ಆದರೆ ಬರೀ 7 ವಿಕೆಟ್​​​ಗಳನ್ನಷ್ಟೆ ಪಡೆದಿದ್ದಾರೆ. 84 ರನ್ ನೀಡಿ 3 ಪಡೆದಿರೋದು ಇನ್ನಿಂಗ್ಸ್​ವೊಂದರ ಬೆಸ್ಟ್​.

ಇನ್​​ ಆ್ಯಂಡ್​ ಔಟ್​ ಸ್ವಿಂಗ್​ ಮೂಲಕ ಬ್ಯಾಟ್ಸ್​ಮನ್​ಗೆ ಕಂಟಕವಾಗ್ತಿದ್ದ ಬುಮ್ರಾ, ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​​ನಲ್ಲಿ ಮಾಡ್ತಿರುವ ಕಳಪೆ ಬೌಲಿಂಗ್ ನೋಡಿದ್ರೆ, ಯಾಕೋ ಬೌಲಿಂಗ್​​ ಮರೆತಂತೆ ಕಾಣ್ತಿದೆ. ಈ ಹಿಂದೆ ಟೀಮ್​ ಇಂಡಿಯಾದ ಮ್ಯಾಚ್​ ವಿನ್ನರ್ ಆಗಿದ್ದ ಜಸ್​ಪ್ರಿತ್​ ಬುಮ್ರಾ, ಆದರೀಗ ತಂಡದ ಹಿನ್ನಡೆಗೆ ಕಾರಣವಾಗ್ತಿದ್ದಾರೆ. ಹೀಗಾಗಿ ಬುಮ್ರಾ ಬದಲಿಗೆ ಭುವನೇಶ್ವರ್​ ಕುಮಾರ್​​, ಮೊಹಮ್ಮದ್​ ಸಿರಾಜ್​ಗೆ ಚಾನ್ಸ್​ ನೀಡಬೇಕಿತ್ತು ಅಂತಿದ್ದಾರೆ ಕ್ರಿಕೆಟ್ ಪಂಡಿತರು.

ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಮುಗಿದಿದೆ. ಮುಂದಿನ ಇಂಗ್ಲೆಂಡ್​ ಟೆಸ್ಟ್​​ ಸರಣಿಗೆ ಸಜ್ಜಾಗಬೇಕಿದೆ. ಜೊತೆಗೆ ಸರಣಿಯಲ್ಲಾದರೂ ಲಯಕ್ಕೆ ಮರಳಬೇಕಿದೆ. ಒಂದು ವೇಳೆ ಈ ಸರಣಿಯಲ್ಲೂ ಬುಮ್ರಾರ ಕಳಪೆ ಫಾರ್ಮ್​​ ಹೀಗೆ ಮುಂದುವರೆದ್ರೆ, ಇಂಗ್ಲೆಂಡ್​​ ಸರಣಿಯೇ ಕೊನೆಯಾಗುವುದರಲ್ಲಿ ಅನುಮಾನವೇ ಇಲ್ಲ.

The post WTCನಲ್ಲಿ​ ವಿಕೆಟ್​​ ಪಡೆಯದ ಯಾರ್ಕರ್ ಕಿಂಗ್​ -ಬುಮ್ರಾ ಭವಿಷ್ಯಕ್ಕೆ ರೆಡ್​ ​​ಕಾರ್ಡ್​? appeared first on News First Kannada.

Source: newsfirstlive.com

Source link