ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. 4 ತಿಂಗಳ ಸುದೀರ್ಘ ಇಂಗ್ಲೆಂಡ್ ಪ್ರವಾಸಕ್ಕಾಗಿ ಜೂನ್.2ರಂದು ಪ್ರಯಾಣ ಬೆಳಸಲಿರುವ ಟೀಮ್ ಇಂಡಿಯಾ, ಈಗಾಗಲೇ ಮುಂಬೈನಲ್ಲಿ ಬೀಡುಬಿಟ್ಟಿದೆ. ಆದ್ರೆ ಇಂಗ್ಲೆಂಡ್​ಗೆ ತೆರಳುವ ಮುನ್ನವೇ ಕನ್ನಡಿಗರಿಬ್ಬರ ಕಾದಾಟಕ್ಕೆ, ಇಂಗ್ಲೆಂಡ್ ಪ್ರವಾಸ ವೇದಿಕೆಯಾಗ್ತಿದೆ. ಅದು ಕೂಡ ಸ್ನೇಹಿತರಿಬ್ಬರ ನಡುವೆ.

ಹೌದು..! ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುತ್ತಿರುವ 20 ಸದಸ್ಯರ ತಂಡದಲ್ಲಿ, ಹಿಟ್​​ಮ್ಯಾನ್ ರೋಹಿತ್ ಸೇರಿದಂತೆ ನಾಲ್ವರು ಆರಂಭಿಕರು ತಂಡದಲ್ಲಿದ್ದಾರೆ. ಈ ಪೈಕಿ ಓರ್ವರಿಗೆ ಮಾತ್ರವೇ ಹಿಟ್​ಮ್ಯಾನ್​​ ಜೊತೆ ಬ್ಯಾಟ್​ ಬೀಸುವ ಅವಕಾಶವಿದೆ. ಈ ಒಂದು ಸ್ಥಾನಕ್ಕಾಗಿಯೇ ಮೂವರು ಪೈಪೋಟಿ ನಡೆಸ್ತಿದ್ದಾರೆ. ಈ ವಿಚಾರವಾಗಿಯೇ ಈಗ ಕನ್ನಡಿಗರಿಬ್ಬರ ಕಾದಾಟ ಕಾರಣವಾಗ್ತಿರೋದು…

ಮಯಾಂಕ್​​ಗೆ ಅಶುಭ ತಂದಿದ್ದ ಶುಭ್​ಮನ್​..!
ಆಸ್ಟ್ರೇಲಿಯಾ ಸರಣಿ ವೇಳೆ ಸಿಕ್ಕ ಅವಕಾಶ ಬಳಸಿಕೊಂಡಿದ್ದ ಶುಭ್​ಮನ್​ ಗಿಲ್​, ಸಂಕಷ್ಟದ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆ ಮೂಲಕ ಬಾರ್ಡರ್​-ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇದರೊಂದಿಗೆ ಕನ್ನಡಿಗ ಮಯಾಂಕ್ ಸ್ಥಾನವನ್ನೇ ಕಸಿದುಕೊಂಡ ಶುಭ್​ಮನ್​​, ಇಂಗ್ಲೆಂಡ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದರು.. ಇದಾದ ಬಳಿಕ ಐಪಿಎಲ್​​ ಟೂರ್ನಿಯಲ್ಲೂ ಶುಭ್​​ಮನ್​​ ಗಿಲ್​​, ಕಮಾಲ್ ನಡೆಯಲೇ ಇಲ್ಲ..!

ಹೀಗಾಗಿಯೇ ಇಂಗ್ಲೆಂಡ್ ಪ್ರವಾಸದಲ್ಲಿ ಹಿಟ್​ಮ್ಯಾನ್ ಜೊತೆ ಮಯಾಂಕ್, ಇನ್ನಿಂಗ್ಸ್​ ಆರಂಭಿಸ್ತಾರಾ..? ಇಲ್ಲಾ ಕನ್ನಡಿಗ ಕೆ.ಎಲ್.ರಾಹುಲ್ ರೋಹಿತ್​​ ಜೊತೆ ಇನ್ನಿಂಗ್ಸ್​ ಆರಂಭಿಸುವರಾ ಎಂಬ ಚರ್ಚೆ ನಡೆಯುತ್ತಿದೆ.

ಐಪಿಎಲ್​​ನಲ್ಲಿ ಮಿಂಚಿದ ಮಯಾಂಕ್​ಗೆ ಸಿಗುತ್ತಾ ಚಾನ್ಸ್..?
2019ರ ಬಾಂಗ್ಲಾ ಹಾಗೂ ಸೌತ್​ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಮಯಾಂಕ್, 2020ರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಪರಿಣಾಮ ಪ್ಲೇಯಿಂಗ್ ಇಲೆವೆನ್​​​ನಿಂದ ಸ್ಥಾನ ಕಳೆದುಕೊಂಡಿದ್ದ ಮಯಾಂಕ್, ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ಟೆಸ್ಟ್​ ಸರಣಿ ಪೂರ್ತಿ ಬೆಂಚ್​ ಬಿಸಿಯನ್ನೇ ಮಾಡಬೇಕಾಯ್ತು…

ಆದ್ರೆ ಐಪಿಎಲ್​ ಟೂರ್ನಿಯಲ್ಲಿ ಸಾಲಿಡ್ ಪರ್ಫಾಮೆನ್ಸ್​ ನೀಡಿದ ಮಯಾಂಕ್, 7 ಇನ್ನಿಂಗ್ಸ್​ಗಳಿಂದ 43.33ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಎರಡು ಅರ್ಧಶತಕ ಒಳಗೊಂಡ 260 ರನ್ ಕಲೆಹಾಕಿದ್ದಾರೆ. ಇದೇ ಪ್ರದರ್ಶನವೇ ಈಗ ಮಯಾಂಕ್ ಅಗರ್ವಾಲ್ ಕೈಹಿಡಿಯುವ ಸಾಧ್ಯತೆ ಇದೆ. ಆದ್ರೆ ಇದಕ್ಕೆ ಮತ್ತೊರ್ವ ಕನ್ನಡಿಗ ಕೆ.ಎಲ್​.ರಾಹುಲ್​​ ವಿಲನ್ ಆಗುವ ಸಾಧ್ಯತೆಯೂ ಇದೆ.

ಫ್ಲಾಪ್​ ಬಳಿಕ ಐಪಿಎಲ್​​ನಲ್ಲಿ ಕೆ.ಎಲ್. ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್..!
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಕೆ.ಎಲ್.ರಾಹುಲ್, ನಂತರ ಏಕದಿನ ಸರಣಿಯಲ್ಲಿ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದ್ರು. ಏಕದಿನ ಸರಣಿಯಲ್ಲಿ ಒಂದು ಅರ್ಧಶತಕ, ಶತಕ ಸಿಡಿಸಿ ಸರಣಿಯಲ್ಲಿ 2ನೇ ಲೀಡಿಂಗ್ ರನ್​ ಸ್ಕೋರರ್​​ ಎನಿಸಿಕೊಂಡ ರಾಹುಲ್, ನಂತರದ ಐಪಿಎಲ್​​ ಟೂರ್ನಿಯಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದರು.

14ನೇ ಆವೃತ್ತಿಯಲ್ಲಿ ರಾಹುಲ್ ಪ್ರದರ್ಶನ
ಪಂದ್ಯ 07
ರನ್ 331
ಸರಾಸರಿ 66.20
ಸ್ಟ್ರೈಕ್​​ರೇಟ್ 136.21

ಟೂರ್ನಿಯ ಲೀಡಿಂಗ್ ರನ್​ ಸ್ಕೋರ್ ಲಿಸ್ಟ್​ನಲ್ಲಿ 2ನೇ ಸ್ಥಾನದಲ್ಲಿರುವ ರಾಹುಲ್, ಇಂಗ್ಲೆಂಡ್ ವಿರುದ್ಧದ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಸ್ವದೇಶ ಮಾತ್ರವಲ್ಲದೆ, ಇಂಗ್ಲೆಂಡ್​ ನೆಲದಲ್ಲೂ ಆಡಿರುವ ಅನುಭವ ಹೊಂದಿರುವ ಕೆ.ಎಲ್.ರಾಹುಲ್, ಬೌನ್ಸಿ ಟ್ರ್ಯಾಕ್​ನಲ್ಲೂ ಕಮಾಲ್ ಮಾಡಿದ್ದಾರೆ. ಹೀಗಾಗಿಯೇ ಕೆ.ಎಲ್.ರಾಹುಲ್, ಮಯಾಂಕ್​ ಅಗರ್ವಾಲ್​​ಗಿಂತ ಒಂದೆಜ್ಜೆ ಮುಂದಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ರಾಹುಲ್
ಪಂದ್ಯ 05
ರನ್ 299
ಸರಾಸರಿ 29.90
ಶತಕ 01

ಇಂಗ್ಲೆಂಡ್ ನೆಲದಲ್ಲಿ ಆಡಿದ ಅನುಭವದ ಜೊತೆ, ಸದ್ಯ ಕನ್ಸಿಸ್ಟೆನ್ಸಿ ಪ್ರದರ್ಶನ ನೀಡುತ್ತಿರುವ ಕೆ.ಎಲ್.ರಾಹುಲ್, ಅಂದುಕೊಂಡತೆ ಫಿಟ್ ಆಗಿದ್ದೇ ಅದಲ್ಲಿ, ಮಯಾಂಕ್ ಅಗರ್ವಾಲ್​​ಗೆ ಮಾತ್ರವಲ್ಲದೇ, ಶುಭ್​​ಮನ್​​ಗೂ ಬೆಂಚ್ ಕಾಯಿಸೋದ್ರಲ್ಲಿ, ಎರಡು ಮಾತಿಲ್ಲ.. ಇನ್ನೂ ಸದ್ಯದ ಇಂಗ್ಲೆಂಡ್ ಪ್ರವಾಸ ಕನ್ನಡಿಗರಿಬ್ಬರ ದಂಗಲ್​ ಕಾರಣವಾಗಿದ್ದು, ಒಂದೆಡೆ ಟೆಸ್ಟ್ ಕರಿಯರ್​​ನ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸುವ ನಿರೀಕ್ಷೆಯಲ್ಲಿ ರಾಹುಲ್ ಇದ್ರೆ, ಇತ್ತ ಕಳೆದೆರೆಡು ಸರಣಿಗಳಿಂದ ಬೆಂಚ್​​ಗೆ ಸಿಮೀತವಾಗಿರೋ ಮಯಾಂಕ್, ಮತ್ತೆ ಅಂಗಳಕ್ಕಿಳಿಯೋ ಲೆಕ್ಕಚಾರದಲ್ಲಿದ್ದಾರೆ.

ಒಟ್ನಲ್ಲಿ ಶುಭ್​​​ಮನ್​ಗೆ ಹಿಂದಿಕ್ಕಿ ಹಿಟ್​ಮ್ಯಾನ್ ಜೊತೆ ಯಾರು ಓಪನರ್​ ಆಗಿ ಕಣಕ್ಕಿಳಿತಾರೆ ಅನ್ನೋದನ್ನ ಕಾದುನೋಡಬೇಕಿದೆ.

The post WTCನಲ್ಲಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸೋರು ಯಾರು..? appeared first on News First Kannada.

Source: newsfirstlive.com

Source link