ಹಿಟ್‌ಮ್ಯಾನ್​​​ ರೋಹಿತ್​​ ಶರ್ಮಾ, ಶಾರ್ಟ್​ ಫಾರ್ಮೆಟ್​ನ ಗ್ರೆಟೆಸ್ಟ್​​ ಕ್ರಿಕೆಟರ್..! ಕ್ರೀಸ್​​​ನಲ್ಲಿ ಕಚ್ಚಿ ನಿಂತರೆ ಬೌಲರ್​ಗಳ ಬೆವರಿಳಿಸೋದು ಗ್ಯಾರಂಟಿ. ಕ್ಲಾಸ್​​​​​​ ಆ್ಯಂಡ್ ಮಾಸ್​​ ಬ್ಯಾಟಿಂಗ್​ನಿಂದಲೇ ಗಮನ ಸೆಳೆದಿರೋ ಮುಂಬೈಕರ್​, ಒಮ್ಮೆ ಅಬ್ಬರಿಸಲು ಸ್ಟಾರ್ಟ್​​ ಮಾಡಿದ್ರೆ, ಸಿಕ್ಸರ್-ಬೌಂಡರಿ​​ಗಳ ಸುರಿಮಳೆ ಪಕ್ಕಾ. ಆದರೆ ಟೆಸ್ಟ್​​​​ ಫಾರ್ಮೆಟ್​​ನಲ್ಲಿ, ಅದರಲ್ಲೂ ವಿದೇಶಗಳಲ್ಲಿ ರೋಹಿತ್​ ಶರ್ಮಾ ಸ್ಥಿರತೆ ಅಷ್ಟಕಷ್ಟೆ.!!! ಹೀಗಾಗಿ ರೋಹಿತ್​ ಪಾಲಿಗೆ ಈಗ, ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​​ ಮತ್ತು ಇಂಗ್ಲೆಂಡ್​​ ಟೆಸ್ಟ್​ ಸರಣಿ​ ರಿಯಲ್​​ ಟೆಸ್ಟಿಂಗ್​ ಟೈಮ್​..!!

ಟೀಮ್ ಇಂಡಿಯಾದ ಸ್ಟೈಲಿಷ್ ಬ್ಯಾಟ್ಸ್​ಮನ್​ ರೋಹಿತ್ ಶರ್ಮಾ, ಟೆಸ್ಟ್​​ ವೃತ್ತಿ ಜೀವನವನ್ನು ಆರಂಭಿಸಿದ್ದು, ಮಿಡಲ್​ ಆರ್ಡರ್​ನಲ್ಲಿ. ಟೆಸ್ಟ್​ಗೆ ಕಾಲಿಟ್ಟ ಪ್ರಾರಂಭದಲ್ಲೇ ರೋಹಿತ್​​​​ ಈಸ್​ ಗ್ರೇಟ್​ ಎನ್ನುವಷ್ಟರ ಮಟ್ಟಿಗೆ ಪರ್ಫಾಮೆನ್ಸ್​ ನೀಡಿದ್ದ ಹಿಟ್​ಮ್ಯಾನ್​, ಬಳಿಕ ಇನ್​​ಕನ್ಸಿಸ್ಟೆನ್ಸಿಯಿಂದಾಗಿ ತಂಡದಲ್ಲಿ ಸ್ಥಾನ ಕಳ್ಕೊಂಡ್ರು. ಮತ್ತೆ ಚಾನ್ಸ್​​ ಗಿಟ್ಟಿಸಿಕೊಂಡರಾದ್ರೂ ಪ್ಲೇಯಿಂಗ್​​ ಇಲೆವೆನ್​ ಆಗಾಗ ಕಾಣಿಸಿಕೊಂಡರಷ್ಟೆ..! 2019ರಲ್ಲಿ ಲಿಮಿಟೆಡ್​​ ಓವರ್‌ಗಳಲ್ಲಿ ಹಿಟ್​ಮ್ಯಾನ್​​ ವಂಡರ್​​ಫುಲ್​​​ ​ಶೋಗೆ​, ಮತ್ತೆ ಟೆಸ್ಟ್​​ನಲ್ಲಿ ಫುಲ್​ ಟೈಮ್​ಗೆ ಮಣೆ ಹಾಕಿದ್ರು ಥಿಂಕ್-ಟ್ಯಾಂಕರ್ಸ್..!

2019ರ ನಂತರ ಹಿಟ್​​ಮ್ಯಾನ್​ ಒಂಬತ್ತು ಟೆಸ್ಟ್​​ಗಳಲ್ಲಿ 4 ಶತಕ ಸಿಡಿಸಿ ಕಮ್​​ಬ್ಯಾಕ್​ ಮಾಡಿದ್ರು. ಈ ಬೊಂಬಾಟ್​ ಆಟ ಮೂಡಿ ಬಂದಿದ್ದು, ತವರು ಪಿಚ್​​​ಗಳಲ್ಲಿ. ಆದರೆ ವಿದೇಶಿ ಪಿಚ್​​ಗಳಲ್ಲಿ ಮಾತ್ರ ಹೇಳಿಕೊಳ್ಳುವಂಥ ಸ್ಥಿರತೆ ತೋರಿಲ್ಲ.! ಅದಕ್ಕೆ ಬೆಸ್ಟ್​ ಎಕ್ಸಾಂಪಲ್​ ಅಂದರೆ, ಕಳೆದ ವರ್ಷದ ಆಸಿಸ್​ ಸರಣಿ. ಕೇವಲ ಈ ಸರಣಿಯಷ್ಟೇ ಅಲ್ಲ, ಈ ಹಿಂದೆ ಫಾರಿನ್​​ ಕಂಟ್ರಿಗಳಲ್ಲಿ ನಡೆದ ಎಲ್ಲಾ ಟೆಸ್ಟ್​​ ಸರಣಿಗಳಲ್ಲೂ ರೋಹಿತ್​ದು ಇದೇ ಫಜೀತಿ..! ಹೀಗಾಗಿ ರೋಹಿತ್​ ಇನ್ನಷ್ಟು ಇಂಪ್ರೂವ್​ ಆಗಬೇಕಿದೆ ಅನ್ನೋದು ಮಾಜಿ ಕ್ರಿಕೆಟಿಗರ ಅಭಿಪ್ರಾಯ.

‘ಇನ್ನಷ್ಟು ಸುಧಾರಿಸಬೇಕಿದೆ ರೋಹಿತ್​’..!
‘ಸೀಮಿತ ಓವರ್​​ಗಳಲ್ಲಿ ರೋಹಿತ್​ ಅತ್ಯದ್ಭುತ ಆಟಗಾರ ಅನ್ನೋದರಲ್ಲಿ ಅನುಮಾನ ಇಲ್ಲ. ಆದರೆ ಟೆಸ್ಟ್​​ನಲ್ಲಿ ಅಂದರೆ ವಿದೇಶಿ ಪಿಚ್​​ಗಳಲ್ಲಿ ರೋಹಿತ್​ ರಕ್ಷಣಾತ್ಮಕ ಆಟಕ್ಕೆ, ಗಮನ ನೀಡಬೇಕಿದೆ. ಸದ್ಯ ಟೆಸ್ಟ್​​​ಗೆ ತಕ್ಕಮಟ್ಟಿಗೆ ಹೊಂದಿಕೊಂಡಿರುವ ಮುಂಬೈಕರ್​, ಇನ್ನಷ್ಟು ಸುಧಾರಿಸಬೇಕಿದೆ. ತಾಳ್ಮೆಯುತ ಆಟವಾಡ್ತಿರೋ ಹಿಟ್​ಮ್ಯಾನ್​ಗೆ, ಇಂಗ್ಲೆಂಡ್​ ಪಿಚ್​​ ಕಠಿಣ ಪರೀಕ್ಷೆಯಾಗಿದೆ. ಆದರೆ ತನ್ನ ಪ್ರವೃತ್ತಿ ಮತ್ತು ಪಾತ್ರವನ್ನು ಬದಲಿಸಿಕೊಂಡರೆ ಮಾತ್ರ ಬೆಸ್ಟ್​ ಓಪನರ್​​ ಆಗಲಿದ್ದಾರೆ’
-ಸಂಜಯ್​ ಮಂಜ್ರೇಕರ್​, ಮಾಜಿ ಕ್ರಿಕೆಟಿಗ

ಟೆಸ್ಟ್​ ಫಾರ್ಮೆಟ್​ನಲ್ಲಿ ರೋಹಿತ್​ ಉತ್ತಮ ಪ್ರದರ್ಶನ..!
ಟೆಸ್ಟ್​​ ಫಾರ್ಮೆಟ್​ನಲ್ಲಿ ರೋಹಿತ್ ಉತ್ತಮ ಪ್ರದರ್ಶಶನವನ್ನೇ ನೀಡಿದ್ದಾರೆ. ಒಟ್ಟು 38 ಟೆಸ್ಟ್​ ಆಡಿರುವ ರೋಹಿತ್​, 46.69ರ ಸರಾಸರಿಯಂತೆ 2615 ರನ್​ ಕಲೆ ಹಾಕಿದ್ದಾರೆ. ತವರಿನಲ್ಲಿ ಪವರ್​ಫುಲ್​ ಪ್ರದರ್ಶನ ತೋರಿರುವ ಹಿಟ್​ಮ್ಯಾನ್​​​, ವಿದೇಶಿ ಪಿಚ್​ಗಳಲ್ಲಿ ಫ್ಲಾಪ್​ ಆಗಿದ್ದಾರೆ. ಯೆಸ್​..! ತವರು ಮತ್ತೆ ವಿದೇಶಿ ಪಿಚ್​ಗಳಲ್ಲಿ ತಲಾ 19 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಆದರೆ ಹೋಮ್​​ ಪಿಚ್​ಗಳಲ್ಲಿ ಮಿಂಚಿರೋ ಈ ಓಪನರ್​, ವಿದೇಶಿ ಪಿಚ್​ಗಳಲ್ಲಿ ಅದ್ಯಾಕೋ ಸೈಲೆಂಟಾಗಿದ್ದಾರೆ. ಇದು ಟೀಮ್​ ಮ್ಯಾನೇಜ್​ಮೆಂಟ್​ಗೆ ತಲೆನೋವು ತರಿಸಿದೆ.

ವಿದೇಶದಲ್ಲಿ ರೋಹಿತ್​ ಪ್ರದರ್ಶನ
ಇನ್ನಿಂಗ್ಸ್​​               37
ರನ್​​                    945
ಅರ್ಧಶತಕ           05
ಸರಾಸರಿ             25.54

ಇನ್ನು ತವರಿನಲ್ಲಿ ಭರ್ಜರಿ ಪ್ರದರ್ಶನ ನೀಡಿರೋ ರೋಹಿತ್​, ಉತ್ತಮ ರನ್ನನ್ನೇ ಕಲೆ ಹಾಕಿ, ಎದುರಾಳಿ ತಂಡಕ್ಕೆ ನಟೋರಿಯಸ್​​ ಆಗ್ಬಿಟ್ಟಿದ್ದಾರೆ.

GFX: ತವರಿನಲ್ಲಿ ರೋಹಿತ್​ ಪ್ರದರ್ಶನ
ಇನ್ನಿಂಗ್ಸ್​               27
ರನ್​​                    1,670
50/100               07/07
ಸರಾಸರಿ              61.85

ಬೌನ್ಸಿ ಟ್ರ್ಯಾಕ್​​ನಲ್ಲಿ ನಡೆಯಲ್ಲ ರೋಹಿತ್​ ಆಟ..!
ದೇಶ -​ ವಿದೇಶ ಪಿಚ್​ಗಳಲ್ಲಿ ರೋಹಿತ್​ ಬ್ಯಾಟಿಂಗ್​ ಸಾಮ್ಯತೆ ಹೇಗಿದೆ ಅನ್ನೋದನ್ನ. ಫಾರಿನ್​ ಪಿಚ್​ಗಳೇಕೆ ರೋಹಿತ್​ಗೆ ಕಬ್ಬಿಣದ ಕಡಲೆಯಂತಾಗಿದೆ ಅನ್ನೋದು ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿದೆ. ಯಾಕಂದ್ರೆ ರೋಹಿತ್​ ವೀಕ್ನೆಸ್​​ಗೆ ಸಂಬಂಧಿಸಿದ ಪಿಚ್​​ಗಳೇ,​ ಫ್ಲಾಪ್​ಗೆ ಕಾರಣ. ಯೆಸ್​​​​..!! ಇಂಗ್ಲೆಂಡ್​ ಪಿಚ್​ಗಳು ವೇಗಿಗಳಿಗೆ​ ಸಹಕಾರಿ. ಇಂತಹ ಟ್ರ್ಯಾಕ್​​ಗಳಲ್ಲಿ ರೋಹಿತ್​ ಆಡೋದು ಬಲು ಕಷ್ಟ. ಹೀಗಾಗಿಯೇ ವಿದೇಶಿ ಪಿಚ್​ಗಳಲ್ಲಿ ಆಗಿದ್ದಾರೆ ಫುಲ್ ​ಫ್ಲಾಪ್​​..!!

ಸೌತ್​ಹ್ಯಾಂಪ್ಟನ್​​ನಲ್ಲಿ ಫ್ಲಾಪ್​ ಆಗಿದ್ದ ಹಿಟ್​ಮ್ಯಾನ್​​..!
ವಿಶ್ವ ಟೆಸ್ಟ್​​​​​ ಚಾಂಪಿಯನ್​​ಶಿಪ್​ ಫೈನಲ್​​ ಪಂದ್ಯ ಜೂನ್​ 18ರಂದು ಇಂಗ್ಲೆಂಡ್​ನ ಸೌತ್​ಹ್ಯಾಂಪ್ಟನ್​ನ ರೋಸ್​ಬೌಲ್​​ನಲ್ಲಿ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ಫೇವರಿಟ್​ ಎನಿಸಿಕೊಂಡಿರುವ ಟೀಮ್​​ ಇಂಡಿಯಾಗೆ, ಇದೀಗ ರೋಹಿತ್​ ತಲೆನೋವಾಗಿದ್ದಾರೆ. ಯಾಕಂದ್ರೆ ಈ ಮೊದಲು ತಟಸ್ಥ ಸ್ಥಳದಲ್ಲಿ ಒಂದೇ ಒಂದು ಟೆಸ್ಟ್​ ಆಡಿದ್ದ ರೋಹಿತ್​, ಎರಡೂ ಇನ್ನಿಂಗ್ಸ್​ ಸೇರಿ 34 ರನ್​ಗಳಷ್ಟೇ ಗಳಿಸಿದ್ದರು. ಇದೇ ಪಿಚ್​​ನಲ್ಲಿ ಮಹತ್ವ ಪಂದ್ಯ ನಡೀತಿದ್ದು, ರೋಹಿತ್​ ಚಾನ್ಸ್​ ನೀಡ್ತಾರೋ ಇಲ್ವೋ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಜೊತೆಗೆ ಇಂಗ್ಲೆಂಡ್​ನಲ್ಲಿ ಟೆಸ್ಟ್​ಗಳನ್ನು ಆಡಿದ ಅನುಭವ ಇಲ್ಲದಿರೋದು ಕೂಡ ತಂಡಕ್ಕೆ ಸಮಸ್ಯೆಯಾಗಿದೆ.

ಸದ್ಯ ಟೀಮ್​ ಇಂಡಿಯಾದ ಟೆಸ್ಟ್​​ ತಂಡದಲ್ಲಿ ಓಪನಿಂಗ್​ ಸ್ಲಾಟ್​ಗೆ ಸಖತ್​ ಕಾಂಪಿಟೇಷನ್​ ಇದೆ. ಶುಭ್ಮನ್​ ಗಿಲ್​, ಮಯಾಂಕ್​ ಅಗರ್ವಾಲ್ ಮತ್ತು ಕೆ.ಎಲ್​.ರಾಹುಲ್​ ರೇಸ್​​ನಲ್ಲಿದ್ದಾರೆ. ಅಂತಹದರಲ್ಲಿ ಫಾರಿನ್​ ಪಿಚ್​ಗಳಲ್ಲಿ ವರ್ಸ್ಟ್​​ ಪರ್ಫಾಮೆನ್ಸ್ ನೀಡಿರುವ ರೋಹಿತ್​​, ಅದರಿಂದ ಹೊರಬರಬೇಕಿದೆ. ಹೀಗಾಗಿ ಈ ಬಿಗ್​​ ಚಾಲೆಂಜ್​​ನಲ್ಲಿ ಹಿಟ್​ಮ್ಯಾನ್​​ ಪಾಸ್​ ಆಗ್ತಾರಾ, ಇಲ್ಲ ಫೇಲ್ ಆಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

The post WTC-ಇಂಗ್ಲೆಂಡ್ ಟೆಸ್ಟ್ ಸರಣಿ ರೋಹಿತ್​ ಶರ್ಮಾಗೆ ಅಗ್ನಿಪರೀಕ್ಷೆ..! ಯಾಕೆ ಗೊತ್ತಾ…? appeared first on News First Kannada.

Source: newsfirstlive.com

Source link