WTC ಕಪ್​ ಗೆದ್ದು ದೇಶಕ್ಕೆ ಮರಳಿದ ನ್ಯೂಜಿಲೆಂಡ್ ಟೀಂಗೆ ಏರ್​ಪೋರ್ಟ್​ನಲ್ಲಿ ಕಾದಿತ್ತು ಶಾಕ್

WTC ಕಪ್​ ಗೆದ್ದು ದೇಶಕ್ಕೆ ಮರಳಿದ ನ್ಯೂಜಿಲೆಂಡ್ ಟೀಂಗೆ ಏರ್​ಪೋರ್ಟ್​ನಲ್ಲಿ ಕಾದಿತ್ತು ಶಾಕ್

ಇತ್ತೀಚೆಗೆ ನಡೆದ ನ್ಯೂಜಿಲೆಂಡ್-ಭಾರತ ನಡುವಿನ ವರ್ಲ್ಡ್​ ಟೆಸ್ಟ್ ಚಾಂಪಿಯನ್ ಶಿಪ್​​ನಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿ ಗದೆಯಾಕಾರದ ಕಪ್​ನ್ನ ತನ್ನದಾಗಿಸಿಕೊಂಡಿದೆ. ಆಟ ಮುಗಿಸಿ ಕಪ್ ಹೊತ್ತುಕೊಂಡು ತಮ್ಮ ದೇಶಕ್ಕೆ ತೆರಳಿದ ನ್ಯೂಜಿಲೆಂಡ್ ಟೀಮ್​ಗೆ ಅಚ್ಚರಿ ಕಾದಿತ್ತು. ಯಾಕಂದ್ರೆ ಏರ್​ಪೋರ್ಟ್​ನಲ್ಲಿ ಬಂದಿಳಿಯುತ್ತಿದ್ದ ಹಾಗೇ ಕೇನ್ ವಿಲಿಯಮ್​​ಸನ್ ಹುಡುಗರ ಪಾಸ್​ಪೋರ್ಟ್​ಗಳನ್ನ ಕಸ್ಟಮ್ ಅಧಿಕಾರಿಗಳು ಕಸಿದುಕೊಂಡಿದ್ದಾರೆ.

ತಮ್ಮ ದೇಶಕ್ಕೆ ಕೀರ್ತಿ ತಂದ ಕ್ರಿಕೆಟ್ ಟೀಮ್​ ಪಾಸ್​ಪೋರ್ಟ್​ಗಳನ್ನ ಕಸ್ಟಮ್ಸ್ ಅಧಿಕಾರಿಗಳು ಕಿತ್ತುಕೊಂಡು ನೀವು ಹೊತ್ತು ತಂದ ಗದೆ ಎಲ್ಲಿ ಎಂದು ಕೇಳಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ನಡೆಗೆ ಇಡೀ ಟೀಮ್ ಶಾಕ್ ಆಗಿದೆ.

ಕಸ್ಟಮ್ಸ್ ಅಧಿಕಾರಿಗಳು ತಮ್ಮ ಪಾಸ್​ಪೋರ್ಟ್ ಕಿತ್ತುಕೊಂಡು ಕಪ್ ತೋರಿಸುವಂತೆ ಹೇಳಿದ್ದು ಆಟಗಾರರನ್ನ ಬೆದರಿಸಲು ಅಲ್ಲ.. ಬದಲಿಗೆ ಕಪ್​ನ್ನು ಕಣ್ಣಾರೆ ನೋಡುವ ಕುತೂಹಲಕ್ಕೆ ಎಂದು ಆಟಗಾರರಿಗೆ ಕೆಲವು ಹೊತ್ತಿನ ನಂತರವಷ್ಟೇ ಗೊತ್ತಾಗಿದೆ. ಗದೆಯಾಕಾರದ ಕಪ್​ನ್ನು ತೋರಿಸುತ್ತಲೇ ಕಸ್ಟಮ್ಸ್ ಅಧಿಕಾರಿಗಳು ಖುಷಿಯಿಂದ ನಗೆ ಬೀರಿದ್ದಾರೆ. ಅಲ್ಲದೇ ಟೀಂ ಜೊತೆ ಸೆಲ್ಫಿ ತೆಗೆದುಕೊಂಡು ವೆಲ್​ಕಂ ಮಾಡಿದ್ದಾರೆ.

 

 

View this post on Instagram

 

A post shared by BLACKCAPS (@blackcapsnz)

The post WTC ಕಪ್​ ಗೆದ್ದು ದೇಶಕ್ಕೆ ಮರಳಿದ ನ್ಯೂಜಿಲೆಂಡ್ ಟೀಂಗೆ ಏರ್​ಪೋರ್ಟ್​ನಲ್ಲಿ ಕಾದಿತ್ತು ಶಾಕ್ appeared first on News First Kannada.

Source: newsfirstlive.com

Source link