ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್ ಕನದಕ್ಕೆ, ಇನ್ನೂ 20ದಿನಗಳು ಬಾಕಿಯಿದೆ. ಅದಾಗಲೇ ಭಾರತ-ನ್ಯೂಜಿಲೆಂಡ್​ ಮಧ್ಯೆ ರಣಕಣ ಏರ್ಪಟ್ಟಿದೆ. ವಿಶ್ವ ಕ್ರಿಕೆಟ್​​ನ ಗ್ರೇಟ್​ ಕ್ಯಾಪ್ಟನ್​​ಗಳ​​ ಕಾದಾಟದಲ್ಲಿ ಯಾರಾಗ್ತಾರೆ ಸೂಪರ್ ​ಪವರ್​​​ಸ್ಟಾರ್​ ಅನ್ನೋ ಪ್ರಶ್ನೆ, ಸದ್ಯ ಗರಿಗೆದರಿದೆ. ಹೀಗಾಗಿ ಕೇನ್​ -ಕೊಹ್ಲಿ ದಂಗಲ್ ಅಂತಾನೇ ಬಿಂಬಿತವಾಗಿರೋದ್ರಿಂದ, ಈ ಮ್ಯಾಚ್​​​ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಆದರೆ ಭಾರತವೇ ಗೆಲ್ಲುವ ಫೇವರಿಟ್​ ಅಂತಿದೆ ಈ ವೆಪನ್​..!

ಸಮಕಾಲಿನ ವಿಶ್ವ ಕ್ರಿಕೆಟ್​​ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು ಕೇನ್ ವಿಲಿಯಮ್ಸನ್ಸ್​. ಕಿವೀಸ್​​ನ ದಿ ವಾಲ್​​ ರಾಸ್​​ ಟೇಲರ್, ಅನುಭವಿ ಬ್ಯಾಟ್ಸ್​​ಮನ್​​. ಈ ​​ಇಬ್ಬರು ವಿಶ್ವದ ಯಾವುದೇ ಆಟಗಾರನಿಗೂ ಬೆಸ್ಟ್​ ಕಾಂಪಿಟೇಟರ್ಸ್. ತಮ್ಮದೇ ಆದ ನಾಯಕತ್ವ, ಆಟದ ಶೈಲಿಯಿಂದ ವಿಶ್ವ​​ ಕ್ರಿಕೆಟ್​ನಲ್ಲಿ ಗುರುತಿಸಿಕೊಂಡಿರುವ ಕೂಲ್​​ ಕ್ಯಾಪ್ಟನ್​, ಸದ್ಯ ಮಾಡ್ರನ್ ಡೇ ಕ್ರಿಕೆಟ್​ನ​ ರನ್​ ಮಷಿನ್​​​​. ಜೊತೆಗೆ ಯಶಸ್ವಿ ನಾಯಕ ಕೂಡ ಹೌದು. ಜಸ್ಟ್​ 282ರನ್​ ಸಿಡಿಸಿದ್ರೆ, ಕಿವೀಸ್​​ ಪರ ಟೆಸ್ಟ್​​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ದಾಖಲೆ ಕೂಡ ಬರೀತಾರೆ. ಇನ್ನು ದಿ ವಾಲ್​ ಖ್ಯಾತಿಯ ಟೇಲರ್​ ಕೂಡ, ರನ್​ ಪಟ್ಟಿಯಲ್ಲಿ ಅಗ್ರಸ್ಥಾನಿ. ಇಂತಹ ಬೆಸ್ಟ್​ ಪರ್ಫಾಮೆನ್ಸ್​ ನೀಡಿರುವ ಟೆಸ್ಟ್ ಕ್ರಿಕೆಟ್​ನ BEST​ ಬ್ಯಾಟ್ಸ್​​ಮನ್​​ಗಳಿಗೆ, ಟೀಮ್​ ಇಂಡಿಯಾದ ಈ ಒಂದು ಅಸ್ತ್ರ ಚಿಂತೆಗೆ ದೂಡಿದೆ.

ಕೂಲ್​ ಕ್ಯಾಪ್ಟನ್​ – ದಿ ವಾಲ್​​ಗೆ ಕಂಟಕ ಈ ಆಟಗಾರ..?
ಕೂಲ್​​ ಆ್ಯಂಡ್​ ಕಾಮ್​ ಹಾಗೇ ಚಾಣಾಕ್ಷಾ ಬ್ಯಾಟ್ಸ್​ಮನ್​ಗೆ ​​ನಿದ್ದೆ ಗೆಡಿಸಿರೋದು, ಕೇರಂ ಸ್ಪೆಷಲಿಸ್ಟ್​ ರವಿಚಂದ್ರನ್​ ಅಶ್ವಿನ್. ವರ್ಲ್ಡ್​​​ ಟೆಸ್ಟ್​ ಚಾಂಪಿಯನ್​ಶಿಪ್​​​​​​​​ನಲ್ಲಿ​ ಆಡಿರೋ 9 ಪಂದ್ಯಗಳಲ್ಲಿ 817 ರನ್​​ ಬೇಟೆಯಾಡಿರುವ ಕೇನ್ ವಿಲಿಯಮ್ಸನ್​​ ಮತ್ತು 469 ರನ್​ ಸಿಡಿಸಿರುವ ರಾಸ್​ ಟೇಲರ್​, ಇದೀಗ ಫೈನಲ್​​ ಪಂದ್ಯದಲ್ಲೂ ಸಿಡಿಯುವ ವಿಶ್ವಾಸದಲ್ಲಿದ್ದಾರೆ. ಬೌಲರ್​​ಗಳು ಎಷ್ಟೇ ಕೆರಳಿಸಿದರೂ ಬ್ಯಾಟ್​ ಮೂಲಕ ಕೂಲ್​ ಆಗಿಯೇ ಉತ್ತರ ನೀಡುವ ಈ ಇಬ್ಬರು​, ಅಶ್ವಿನ್​ರನ್ನ ಕಂಡರೆ ಅದ್ಯಾಕೋ ಆತಂಕಕ್ಕೆ ಒಳಗಾಗ್ತಿದ್ದಾರೆ.

ವಿಶ್ವ ಶ್ರೇಷ್ಠ ಬೌಲರ್​​ಗಳಿಗೆ ಸಿಂಹ ಸ್ವಪ್ನವಾಗಿ ಕಾಡುವ ವಿಲಿಯಮ್ಸನ್​ ಮತ್ತು ಟೇಲರ್​ಗೆ​ ಈಗ, ಅಶ್ವಿನ್​ರನ್ನ​ ನೋಡಿದ್ರೆ ನಡಗುತ್ತಾರೆ. ಯಾಕಂದ್ರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಇಬ್ಬರು ಘಟಾನುಘಟಿ ಬ್ಯಾಟ್ಸ್​​ಮನ್​ಗಳ ಎದುರು ಅಶ್ವಿನ್,​ ಬೊಂಬಾಟ್​​ ಪ್ರದರ್ಶನ ನೀಡಿರೋದೇ ಅದಕ್ಕೆ ಕಾರಣ​.

ಕೇನ್​ ಎದುರು ಅಶ್ವಿನ್​ ಪ್ರದರ್ಶನ
ಎಸೆತ               242
ರನ್​                146
ವಿಕೆಟ್​             05
ಬೌಂಡರಿ          15

ವಿಲಿಯಮ್ಸನ್​​ರನ್ನ 2012ರಲ್ಲಿ ಒಂದು ಬಾರಿ, 2016ರಲ್ಲಿ ನಾಲ್ಕು ಬಾರಿ ಔಟ್ ಮಾಡಿರುವ ಅಶ್ವಿನ್,​ ಮತ್ತೊಮ್ಮೆ ಖೆಡ್ಡಾಕೆ ಬೀಳಿಸಲು ತಯಾರಿ ನಡೆಸ್ತಿದ್ದಾರೆ. ಅಶ್ವಿನ್​ – ಕೇನ್​ ಮುಖಾಮುಖಿಯಲ್ಲಿ 5 ಬಾರಿ ಔಟಾಗಿರುವ ಕೇನ್, ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ನ ಮಹತ್ವದ ಪಂದ್ಯದಲ್ಲಿ ಮತ್ತೊಮ್ಮೆ ಅಶ್ವಿನ್​ ಸವಾಲು ಎದುರಿಸೋಕೆ ಸಜ್ಜಾಗ್ತಿದ್ದಾರೆ.

ರಾಸ್​​​ ಟೇಲರ್​ಗೂ ಅಶ್ವಿನ್​ ಅಂದ್ರೆ ಭಯ
ಡಿಫ್ರೆಂಟ್​ ಬ್ಯಾಟಿಂಗ್ ಸ್ಟೈಲ್​​ನಿಂದಲೇ ಗಮನ ಸೆಳೆದಿರೋ ರಾಸ್​ ಟೇಲರ್​,​ ಟೆಸ್ಟ್​ ಕ್ರಿಕೆಟ್​ನ ಅದ್ಭುತ ಬ್ಯಾಟ್ಸ್​​ಮನ್​. ಕ್ರೀಸ್​​ನಲ್ಲಿ ಕಚ್ಚಿ ನಿಂತು ಎದುರಾಳಿ ಬೌಲರ್​​ಗಳನ್ನು ಸುಸ್ತುಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ಟೇಲರ್​ಗೂ, ಅಶ್ವಿನ್​ ಅಂದ್ರೆ ಕೊಂಚ ಭೀತಿಯೇ..!

ಟೇಲರ್​​​​ ಎದುರು ಅಶ್ವಿನ್​ ಪ್ರದರ್ಶನ
ಎಸೆತ          174
ರನ್​             99
ವಿಕೆಟ್​         05
04/06       10/03

2012ರಲ್ಲಿ 2 ಬಾರಿ, 2016ರಲ್ಲಿ 3 ಬಾರಿ ಔಟಾಗಿರುವ ರಾಸ್​ ಟೇಲರ್​ರನ್ನ ಅಶ್ವಿನ್​, ಮತ್ತೊಮ್ಮೆ ಪೆವಿಲಿಯನ್​​ಗಟ್ಟೋ ಪ್ಲಾನ್​​ನಲ್ಲಿದ್ದಾರೆ. ಕೇವಲ ಇದಿಷ್ಟೇ ಅಲ್ಲ, ಟಾಮ್​ ಲಾಥಮ್​ ಕೂಡ ಅಶ್ವಿನ್​ಗೆ​ 4 ಬಾರಿ ವಿಕೆಟ್​ ಒಪ್ಪಿಸಿದ್ದಾರೆ. ಹೀಗಾಗಿ ಕಿವೀಸ್​ಗೆ ಆಧಾರವಾಗಿರೋ ಈ ಗ್ರೇಟ್​​ ಬ್ಯಾಟ್ಸ್​​ಮನ್​​ಗಳಿಗೆ, ಅಶ್ವಿನ್​ ಬೌಲಿಂಗ್​ ಕಂಟಕವಾಗಿ ಪರಿಣಮಿಸಿದೆ. ಇದು ನ್ಯೂಜಿಲೆಂಡ್​ ಟೀಮ್​​ ಮ್ಯಾನೇಜ್​ಮೆಂಟ್​​ಗೂ ಟೆನ್ಶನ್​ ತಂದಿಟ್ಟಿದೆ.

ಅಶ್ವಿನ್​, ತನ್ನ ಪರಿಣಾಮಕಾರಿ ಬೌಲಿಂಗ್​​ನಿಂದಲೇ ಬ್ಯಾಟ್ಸ್​​ಮನ್​​​ಗಳಿಗೆ ಕಂಟಕವಾಗಿದ್ದಾರೆ. ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್ ಟೂರ್ನಿಯೇ ಅದಕ್ಕೆ ಬೆಸ್ಟ್​ ಎಕ್ಸಾಂಪಲ್​.​​ ವಿಕೆಟ್​ ಮೇಲೆ ವಿಕೆಟ್​ ಬೇಟೆಯಾಡ್ತಿರೋ ಅಶ್ವಿನ್​, ಒಟ್ಟು 67 ವಿಕೆಟ್​​ ಪಡೆದು ಲೀಡಿಂಗ್​ ವಿಕೆಟ್​ ಟೇಕರ್​ ಲಿಸ್ಟ್​ನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಫೈನಲ್​ ಪಂದ್ಯದಲ್ಲಿ ಅಶ್ವಿನ್​ ಸ್ಪಿನ್​ ದಾಳವನ್ನ ಸರಿಯಾಗಿ ಬಳಸಿಕೊಳ್ಳಲು, ಟೀಮ್​​ ಇಂಡಿಯಾ ಕಾರ್ಯತಂತ್ರ ರೂಪಿಸುತ್ತಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​ಗೂ ಮುನ್ನವೇ ಬೆಸ್ಟ್​​ ಸ್ಪಿನ್ನರ್​ ವರ್ಸವ್​ ಬೆಸ್ಟ್​ ಬ್ಯಾಟ್ಸ್​​​ಮನ್ಸ್​​​​ ನಡುವೆ ಸಮರ ಶುರುವಾಗಿದೆ. ಇಂಗ್ಲಿಷರ ನಾಡಲ್ಲಿ ಅಶ್ವಿನ್​ ಮತ್ತೆ ಮೇಲುಗೈ ಸಾಧಿಸಿದ್ರೆ, ಟೀಮ್​ ಇಂಡಿಯಾ ಚಾಂಪಿಯನ್​ ಆಗೋದ್ರಲ್ಲಿ ಅನುಮಾನವೇ ಇಲ್ಲ.

The post WTC- ಕೇನ್​​ ವಿಲಿಯಮ್ಸ್​ಗೆ ಟೀಮ್ ಇಂಡಿಯಾ ​ಸ್ಪಿನ್ನರ್ ಅಶ್ವಿನ್ ಸವಾಲ್ appeared first on News First Kannada.

Source: newsfirstlive.com

Source link