ಈ ಒಂದು ವೀಕ್​ನೆಸ್​, ಟೀಮ್​ ಇಂಡಿಯಾ ಓವರ್​ಕಮ್​ ಮಾಡಲೇಬೇಕು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​​ ಮಾತ್ರವಲ್ಲ..! ಮುಂಬರುವ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯ ದೃಷ್ಠಿಯಿಂದಲೂ, ಇದು ಮಹತ್ವದ್ದಾಗಿದೆ. ಕೊಹ್ಲಿ ಟೀಮ್​ ಕಾಡ್ತಾ ಇರೋ ಆ ವೀಕ್​ನೆಸ್​​ ಏನು..? ಇಲ್ಲಿದೆ ನೋಡಿ ಡಿಟೇಲ್ಸ್​​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ 6ನೇ ದಿನಕ್ಕೆ ಕಾಲಿಟ್ಟಿದೆ. ಆದ್ರೂ ಟೀಮ್​ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ನಡೆಸಿದ ಬ್ಯಾಟಿಂಗ್​ ಬಗೆಗಿನ ಚರ್ಚೆಗಳು ಮಾತ್ರ ನಿಂತಿಲ್ಲ. 250 ಪ್ಲಸ್ ಸ್ಕೋರ್​​ ರನ್​ಗಳಿಸಬಹುದಾದ ಅವಕಾಶವನ್ನ ಕೈ ಚೆಲ್ಲಿದ ಬಗ್ಗೆ, ಚರ್ಚೆಗಳು ಕಳೆದ ಮೂರು ದಿನಗಳಿಂದ ಸಾಗಿವೆ.

ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾ, ಉತ್ತಮ ಆರಂಭವನ್ನೇ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ, ಶುಭ್​ಮನ್ ​ಗಿಲ್​ ಸುಭದ್ರ ಅಡಿಪಾಯವನ್ನೇ ಹಾಕಿದ್ರು. ಮಿಡಲ್​ ಆರ್ಡರ್​ನಲ್ಲಿ ನಾಯಕ ವಿರಾಟ್​​ ಕೊಹ್ಲಿ, ಉಪ ನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾದ್ರು. ನಂತರದಲ್ಲಿ ರವಿಚಂದ್ರನ್​ ರನ್​ಗಳಿಕೆಯ ವೇಗವನ್ನ ಹೆಚ್ಚಿಸಿದ್ರು. ಆಲ್ಲಿವರೆಗೆ 2.27 ಆಗಿದ್ದ ರನ್​ರೇಟ್,​​ ಬಳಿಕ ಏರಿಕೆ ಕಂಡಿತ್ತು. ಆದ್ರೆ ಅಶ್ವಿನ್​ ವಿಕೆಟ್ ಪತನದ ಬಳಿಕ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು, ಪೆವಿಲಿಯನ್​ ಪರೇಡ್​ ನಡೆಸಿದ್ರು.

ಬಿಗ್​ಸ್ಕೋರ್​​ ಕಲೆ ಹಾಕುವ ಅವಕಾಶ ಕೈ ಚೆಲ್ಲಿದ ಟೈಲೆಂಡರ್ಸ್​..!
3 ವಿಕೆಟ್​​ ಅಂತರದಲ್ಲಿ ಬಂದಿದ್ದು ಕೇವಲ 12 ರನ್​ ಮಾತ್ರ..!

2ನೇ ದಿನದಾಟದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಶುಭ್​ಮನ್​ ಗಿಲ್,​ 250 ಪ್ಲಸ್ ರನ್​ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ರು. 250 ಪ್ಲಸ್ ಸ್ಕೋರ್​ ಗುಡ್​ಸ್ಕೋರ್​ ಆಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ರು. ಆದ್ರೆ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. 7ನೇ ಆಟಗಾರನಾಗಿ ಅಶ್ವಿನ್​ ಔಟಾದಾಗ ಭಾರತದ ಸ್ಕೋರ್​ 205 ರನ್. ತಂಡ ಆಲೌಟ್ ಆಗಿದ್ದು 217 ರನ್​ಗಳಿಗೆ. ​ಅಂದ್ರೆ ಕೊನೆಯ 3 ವಿಕೆಟ್​​ಗಳ ಅಂತರದಲ್ಲಿ ಬಂದಿದ್ದು, ಕೇವಲ 12 ರನ್​ ಮಾತ್ರ. ಈ ದಿಢೀರ್​​ ಪತನವೇ ಟೇಲೆಂಡರ್​ಗಳ ಬ್ಯಾಟಿಂಗ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.

28 ನಿಮಿಷಗಳ ಅವಧಿಯಲ್ಲಿ 16 ಬಾಲ್​ಗಳನ್ನ ಎದುರಿಸಿದ ಇಶಾಂತ್​ ಶರ್ಮಾ, 4 ರನ್​ಗಳಿಸಿ ಔಟಾದ್ರು. ಬಳಿಕ ಕಣಕ್ಕಿಳಿದ ಬೂಮ್ರಾ, ಮೊದಲ ಎಸೆತಕ್ಕೆ ಪೆವಿಲಿಯನ್​ ಸೇರಿದ್ರೆ, ಆಲ್​ರೌಂಡರ್​​ ಜಡೇಜಾ ಆಟ ಕೇವಲ 15 ರನ್​ಗಳಿಸಿ ಔಟಾದ್ರು. ಕೊನೆಯ ಹಂತದಲ್ಲಿ ರನ್​ಗಳಿಸದೇ ಇದ್ದದ್ದು, ಟೀಮ್​ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿತು.

ಫೈನಲ್​ನಲ್ಲಿ ಮಾತ್ರವಲ್ಲ..! ಟೂರ್ನಿಯಲ್ಲೇ ಟೇಲೆಂಡರ್ಸ್​​ ಫೇಲ್

ಸದ್ಯ ಹ್ಯಾಂಪ್​​ಶೈರ್​​ ಬೌಲ್​ ಮೈದಾನದಲ್ಲಿ ನಡೆಯುತ್ತಿರುವ ಫೈನಲ್​ ಪಂದ್ಯ ಮಾತ್ರವಲ್ಲ..!! ಈ ಟೂರ್ನಿಯ ಆರಂಭದಿಂದಲೂ ಟೀಮ್​ ಇಂಡಿಯಾ ಕೆಳ ಕ್ರಮಾಂಕ, ರನ್​ಗಳಿಸಲು ಪರದಾಡಿದೆ. ಇಂಗ್ಲೆಂಡ್​​ ವಿರುದ್ಧದ ಚೆನ್ನೈ ಟೆಸ್ಟ್​​ನಲ್ಲಿ ಅಶ್ವಿನ್​ ಸಿಡಿಸಿದ ಶತಕ, ಹಾಗೂ ಅಹಮದಾಬಾದ್​ನಲ್ಲಿ ವಾಷಿಂಗ್​ಟನ್​ ಸುಂದರ್​​ರ 96 ರನ್​ಗಳ ಅಜೇಯ ಆಟ, ತವರಿನಲ್ಲಿ ದಾಖಲಾದ ಶತಕ, ಅರ್ಧಶತಕಗಳಾಗಿವೆ. ಇನ್ನು ವಿದೇಶಿ ಪಿಚ್​ನಲ್ಲಿ ಇಶಾಂತ್​ ಶರ್ಮಾ, ಶಾರ್ದೂಲ್​ ಠಾಕೂರ್​, ರವೀಂದ್ರ ಜಡೇಜಾ ತಲಾ ಒಂದು ಅರ್ಧಶತಕ ಸಿಡಿಸಿದ್ದಾರಷ್ಟೇ.

WTC ಟೂರ್ನಿಯಲ್ಲಿ ಭಾರತೀಯ ಟೈಲೆಂಡರ್ಸ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯ 18 ಪಂದ್ಯಗಳಲ್ಲಿ, 8-11 ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸಿದ ಟೇಲೆಂಡರ್ಸ್​​ 14.65ರ ಸರಾಸರಿಯಲ್ಲಿ ರನ್​ ಕಲೆ ಹಾಕಿದ್ದಾರೆ.

ಸೇನಾ ರಾಷ್ಟಗಳಲ್ಲಿ ಟೇಲೆಂಡರ್ಸ್​ ಸತತ ವಿಫಲ
ಶಮಿ ಸರಾಸರಿ 11.20, ಇಶಾಂತ್​ ಸರಾಸರಿ 12.30

ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಟೂರ್ನಿಯ ಸೇನಾ ರಾಷ್ಟಗಳಲ್ಲಿ ನಡೆದ ಪಂದ್ಯಗಳಲ್ಲಿ ಇಶಾಂತ್ ಶರ್ಮಾ 12.30ರ ಸರಾಸರಿಯಲ್ಲಿ ರನ್​ ಕಲೆಹಾಕಿದ್ದಾರೆ. ಇನ್ನೋರ್ವ ಟೇಲೆಂಡರ್​ ಮೊಹಮ್ಮದ್​ ಶಮಿ ಸರಾಸರಿ 11.50 ಆಗಿದೆ. ಇನ್ನು 8ನೇ ಕ್ರಮಾಂಕದಲ್ಲಿ 11.08ರ ಸರಾಸರಿಯಲ್ಲಿ ರನ್​ ಬಂದಿದೆ. ಇದೇ ಸೇನಾ ರಾಷ್ಟಗಳಲ್ಲಿ ಟೀಮ್​ ಇಂಡಿಯಾಗೆ ಹಿನ್ನಡೆಯಾಗಿದೆ.

ಸದ್ಯ ನಡೆಯುತ್ತಿರೋ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಮತ್ತೆ ಟೈಲೆಂಡರ್ಸ್​​ಗಳಿಗೆ ಬ್ಯಾಟಿಂಗ್​ ಅವಕಾಶ ಬಹುತೇಕ ಕಡಿಮೆಯೇ. ಆದ್ರೆ, ಮುಂಬರುವ ಮಹತ್ವದ ಇಂಗ್ಲೆಂಡ್​​ ವಿರುದ್ಧದ ಸರಣಿಗೂ ಮುನ್ನ ಕೊಹ್ಲಿ ಪಡೆ ಈ ಸಮಸ್ಯೆಗೆ ಸೊಲ್ಯೂಷನ್​ ಕಂಡುಕೊಳ್ಳಲೇಬೇಕಿದೆ.

The post WTC ಟೂರ್ನಿಯಲ್ಲೇ ಟೈಲೆಂಡರ್ಸ್​​ ಫೇಲ್​ – ಟೀಂ ಇಂಡಿಯಾ ವೀಕ್​ನೆಸ್​​ಗೆ ಬೇಕಿದೆ ಪರಿಹಾರ appeared first on News First Kannada.

Source: newsfirstlive.com

Source link