WTC ಟೂರ್ನಿಯಲ್ಲೇ ಸ್ಲೋ.. ಸ್ಲೋ -ಪೂಜಾರ ಬ್ಯಾಟಿಂಗ್​ ಶೈಲಿ ಬಗ್ಗೆ ಟೀಕೆ-ಟಿಪ್ಪಣಿ

WTC ಟೂರ್ನಿಯಲ್ಲೇ ಸ್ಲೋ.. ಸ್ಲೋ -ಪೂಜಾರ ಬ್ಯಾಟಿಂಗ್​ ಶೈಲಿ ಬಗ್ಗೆ ಟೀಕೆ-ಟಿಪ್ಪಣಿ

ಟೀಮ್​ ಇಂಡಿಯಾಗೆ ಪೂಜಾರಾ ಹೊರೆಯಾಗ್ತಿದ್ದಾರಾ..? ಟೆಸ್ಟ್​​ ಸ್ಪೆಷಲಿಸ್ಟ್​​ ತಂಡಕ್ಕೆ ಹೊರೆ ಅಂದ್ರೆ ಏನು ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಆದ್ರೆ ಸೌರಾಷ್ಟ್ರದ ಬ್ಯಾಟ್ಸ್​​ಮ್ಯಾನ್​ ತಂಡಕ್ಕೆ ಹಾಗೂ ಮ್ಯಾನೇಜ್​ಮೆಂಟ್​​ಗೆ ನಿಜಕ್ಕೂ ತಲೆ ನೋವಾಗಿದ್ದಾರೆ.

ಚೇತೇಶ್ವರ್​​ ಪೂಜಾರ.. ಟೀಮ್​ಇಂಡಿಯಾ ಟೆಸ್ಟ್​​ ತಂಡದ ಅವಿಭಾಜ್ಯ ಅಂಗ ಅನ್ನೋದು ಎಲ್ಲರ ಭಾವನೆ. ಅದು ನಿಜ ಕೂಡ ಹೌದು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಟೀಮ್​ ಇಂಡಿಯಾ ಎಂಟ್ರಿ ಕೊಟ್ಟಾಗಲೇ, ಪ್ಲೇಯಿಂಗ್​ ಇಲೆವೆನ್​ನಲ್ಲಿ ಚೇತೇಶ್ವರ್​​ ಪೂಜಾರ ಕಾಣಿಸಿಕೊಳ್ತಾರೆ ಅನ್ನೋದು ಕನ್​ಫರ್ಮ್​ ಆಗಿತ್ತು. ಟೆಸ್ಟ್​​ ಸ್ಪೆಷಲಿಸ್ಟ್​​ ಮೇಲೆ ಅಭಿಮಾನಿಗಳಿಗಿದ್ದ ಭರವಸೆ ಅದು.

ಆದ್ರೆ ಅಭಿಮಾನಿಗಳಿಟ್ಟಿದ್ದ ಭರವಸೆ ಹುಸಿಯಾಗಿದೆ. ಸೌತ್​ಹ್ಯಾಂಪ್ಟನ್​ ಅಂಗಳದಲ್ಲಿ ನಿನ್ನೆ ಕಣಕ್ಕಿಳಿದ ಪೂಜಾರ, ತಂಡಕ್ಕೆ ಆಸರೆಯಾಗಲಿಲ್ಲ. ಕೇವಲ 8 ರನ್​ಗಳಿಗೆ ಟೆಸ್ಟ್​ ಸ್ಪೆಷಲಿಸ್ಟ್​ ಇನ್ನಿಂಗ್ಸ್​ ಅಂತ್ಯವಾಯ್ತು.

ತಂಡಕ್ಕೆ ಹೊರೆಯಾಗ್ತಿದ್ದಾರೆ ‘ಟೆಸ್ಟ್​ ಸ್ಪೆಷಲಿಸ್ಟ್’​​
ಸ್ಟ್ರೈಕ್​ ರೊಟೇಟ್ ಮಾಡ್ತಿಲ್ಲ ‘ನ್ಯೂ ವಾಲ್​’
ಸೌರಾಷ್ಟ್ರ ಬ್ಯಾಟ್ಸ್​ಮ್ಯಾನ್​ ಅಲ್ಪ ಮೊತ್ತಕ್ಕೆ ಔಟಾದ ಮಾತ್ರಕ್ಕೆ ಟೀಮ್​ ಇಂಡಿಯಾಗೆ ಹೊರೆ ಎಂದು ಹೇಳ್ತಿಲ್ಲ. ಬದಲಾಗಿ ಪೂಜಾರ ಆಡ್ತಾ ಇರೋ ಸ್ಲೋ ಇನ್ನಿಂಗ್ಸ್​ ತಂಡಕ್ಕೆ ಹೊರೆಯಾಗ್ತಿದೆ. ಟೆಸ್ಟ್​​ ಸ್ಪೆಷಲಿಸ್ಟ್​ ಸ್ಟ್ರೈಕ್​ ರೊಟೇಶನ್​ ಮಾಡದೇ ಇರೋದು, ಸ್ಲೋ ರನ್​ರೇಟ್​ಗೆ ಕಾರಣವಾಗಿದೆ. ಇನ್​ಫ್ಯಾಕ್ಟ್​ ನಿನ್ನೆಯ ಇನ್ನಿಂಗ್ಸ್​​ನಲ್ಲೂ ಪೂಜಾರ ಖಾತೆ ಓಪನ್​ ಆಗಿದ್ದು 36ನೇ ಎಸೆತಕ್ಕೆ.

ಚೇತೇಶ್ವರ್​​ ಪೂಜಾರ ಇನ್ನಿಂಗ್ಸ್​​
ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ 54 ಎಸೆತಗಳನ್ನೆದುರಿಸಿದ ಪೂಜಾರ, 14.81ರ ಸ್ಟ್ರೈಕ್​ರೇಟ್​​ನಲ್ಲಿ ಕಲೆ ಹಾಕಿದ್ದು ಕೇವಲ 8 ರನ್​. ಆ ರನ್​ಗಳು ಬಂದಿದ್ದು ಕೂಡ 2 ಬೌಂಡರಿಗಳಲ್ಲಿ.

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಔಟ್​ ಆಗ್ತಿದ್ದಂತೆ, ಪೂಜಾರ ಬ್ಯಾಟಿಂಗ್​ ಶೈಲಿಯ ಬಗೆಗಿನ ಚರ್ಚೆ ಹುಟ್ಟಿಕೊಂಡಿದೆ. ಟೆಸ್ಟ್​ನಲ್ಲಿ ತಾಳ್ಮೆಯ ಆಟ ಮುಖ್ಯ ನಿಜ. ಹಾಗೆಂದ ಮಾತ್ರಕ್ಕೆ ಪೂಜಾರ ಮಾಡುವ ನಿಧಾನಗತಿಯ ಬ್ಯಾಟಿಂಗ್,​​ ತಂಡದ ರನ್​ರೇಟ್​ ಮೇಲೆ ಪ್ರಭಾವ ಬೀರುವುದಿಲ್ಲವೇ? ಎಂಬ ಡಿಬೇಟ್​ ಆರಂಭವಾಗಿದೆ. ಹಲವಾರು ವಿಮರ್ಶಕರೂ ಕೂಡ ಪೂಜಾರ ಸ್ಟ್ರೈಕ್​ ರೊಟೇಶನ್​ ಪಾಲಿಸಿಯನ್ನ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸಿಸ್​ ಸರಣಿಯಲ್ಲೂ ತಂಡಕ್ಕೆ ಮುಳುವಾಗಿತ್ತು ಸ್ಲೋ ಇನ್ನಿಂಗ್ಸ್​
ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​​ನಲ್ಲಿ ಟೀಮ್​ ಇಂಡಿಯಾ ವಿರೋಚಿತ ಡ್ರಾ ಸಾಧಿಸಿತು. ಆದ್ರೆ ಅಂದು ಪೂಜಾರ ನಿಧಾನಗತಿಯ ಇನ್ನಿಂಗ್ಸ್​​ ಮೋರೆ ಹೋಗದೇ ಸ್ಟ್ರೈಕ್​ ರೊಟೇಟ್​​ ಮಾಡಿದ್ರೆ, ಭಾರತಕ್ಕೆ ಗೆಲುವಿನ ಅವಕಾಶ ಇತ್ತು. ಇದನ್ನ ನಾವು ಹೇಳಿದ್ದಲ್ಲ ಹಲವು ವಿಶ್ಲೇಷಕರು ಪಟ್ಟ ಅಭಿಪ್ರಾಯ ಇದು. ಕೇವಲ ಸಿಡ್ನಿ ಪ್ರವಾಸ ಮಾತ್ರವಲ್ಲ. ಇಡೀ ಸರಣಿಯೂದ್ದಕ್ಕೂ ಪೂಜಾರ ನೀಡಿದ್ದು, ನಿಧಾನಗತಿಯ ಪ್ರದರ್ಶನವನ್ನೇ.

ಆಸಿಸ್​ ಪ್ರವಾಸದಲ್ಲಿ ​​ಪೂಜಾರ
2020-21ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​​-ಗವಾಸ್ಕರ್​ ಸರಣಿಯಲ್ಲಿ 8 ಇನ್ನಿಂಗ್ಸ್​​​ಗಳಲ್ಲಿ 928 ಎಸೆತಗಳನ್ನ ಎದುರಿಸಿದ ಪೂಜಾರ ಕಲೆ ಹಾಕಿದ್ದು ಕೇವಲ 271 ರನ್​. 29.20ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​​ ಬೀಸಿದ್ದ ಸೌರಾಷ್ಟ್ರ ಬ್ಯಾಟ್ಸ್​ಮ್ಯಾನ್,​ 3 ಅರ್ಧಶತಕ ಸಿಡಿಸಿದ್ದರು. ಪೂಜಾರ ಸ್ಲೋ ಇನ್ನಿಂಗ್ಸ್​​ಗೆ ಫೈನಲ್​ ಪಂದ್ಯ ಹಾಗೂ ಆಸ್ಟ್ರೇಲಿಯಾ ಪ್ರವಾಸ ಮಾತ್ರವಲ್ಲ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯೇ ಸಾಕ್ಷಿಯಾಗಿದೆ. ಇಡೀ ಟೂರ್ನಿಯಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಆಡಿರೋದು, ಕೇವಲ 36.29ರ ಸ್ಟ್ರೈಕ್​ರೇಟ್​ನಲ್ಲಿ.

WTC ಟೂರ್ನಿಯಲ್ಲಿ ಪೂಜಾರ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಒಟ್ಟು 29 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ಪೂಜಾರ, 2,276 ಎಸೆತಗಳನ್ನ ಎದುರಿಸಿದ್ದಾರೆ. ಕೇವಲ 826 ರನ್​ಗಳನ್ನ ಕಲೆ ಹಾಕಿರುವ ಚೆತೇಶ್ವರ್, 36.29ರ ಸ್ಟ್ರೇಕ್​ರೇಟ್​ನಲ್ಲಿ ಬ್ಯಾಟ್​​ ಬೀಸಿದ್ದಾರೆ.

ಟೀಮ್ ಇಂಡಿಯಾ ಟೆಸ್ಟ್​ ತಂಡದ ಅವಿಭಾಜ್ಯ ಅಂಗ ಎಂದೆನಿಸಿಕೊಂಡಿದ್ದ ಪೂಜಾರ, ಅಂಕಿ-ಅಂಶಗಳನ್ನ ನೀವೇ ನೋಡಿದ್ರಲ್ಲ. ಇಡೀ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪೂಜಾರ ಆಡಿದ ಈ ಸ್ಲೋ ಇನ್ನಿಂಗ್ಸ್​​ಗಳೇ ತಂಡಕ್ಕೆ ಹೊರೆಯಾಗಿರೋದು. ಟೆಸ್ಟ್​ ಚಾಂಪಿಯನ್​ಶಿಪ್​​​ನ 2ನೇ ಇನ್ನಿಂಗ್ಸ್​ ಹಾಗೇ ಮುಂಬರುವ ಇಂಗ್ಲೆಂಡ್ ಸರಣಿಯಲ್ಲಾದ್ರೂ ಪೂಜಾರ​​​ ಬ್ಯಾಟಿಂಗ್​ ಶೈಲಿ ಬದಲಾಗುತ್ತಾ..? ಕಾದು ನೋಡಬೇಕಿದೆ.

The post WTC ಟೂರ್ನಿಯಲ್ಲೇ ಸ್ಲೋ.. ಸ್ಲೋ -ಪೂಜಾರ ಬ್ಯಾಟಿಂಗ್​ ಶೈಲಿ ಬಗ್ಗೆ ಟೀಕೆ-ಟಿಪ್ಪಣಿ appeared first on News First Kannada.

Source: newsfirstlive.com

Source link