ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ 4ನೇ ದಿನದಾಟದ ಮೊದಲ ಸೆಷನ್ ಮಳೆಗೆ ಆಹುತಿಯಾಗಿದೆ. ಬೆಳಗ್ಗೆಯಿಂದ ಸೌತ್​​ಹ್ಯಾಂಪ್ಟನ್​​ನಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, 4ನೇ ದಿನದಾಟದ ಬಹುಪಾಲು ಸಮಯ ಮಳೆಗೆ ತುತ್ತಾಗ ಅನುಮಾನ ವ್ಯಕ್ತವಾಗಿದೆ.

ಆರಂಭಿಕ ದಿನದಿಂದಲೂ ಐತಿಹಾಸಿಕ ಪಂದ್ಯಕ್ಕೆ ಮಳೆ ಭಾರೀ ಹಿನ್ನಡೆಯುಂಟು ಮಾಡುತ್ತಿದ್ದು, ಮೊದಲ ದಿನ ಸಂಪೂರ್ಣ ವ್ಯರ್ಥವಾದರೆ, 2ನೇ ದಿನ ಮಂದಬೆಳಕಿನ ಕಾರಣ ಬೇಗ ಮುಕ್ತಾಯವಾಯ್ತು. 3ನೇ ದಿನದಾಟವೂ ಮಳೆಯ ಕಾರಣ ಅರ್ಧಗಂಟೆ ತಡವಾಗಿ ಆರಂಭವಾಗಿತ್ತು.

ಆದರೆ ಅಂತಿಮ ಹಂತದಲ್ಲಿ ಮಂದಬೆಳಕಿನ ಕಾರಣ 80 ಓವರ್‌ಗಳಷ್ಟು ಪಂದ್ಯ ನಡೆಯಲು ಮಾತ್ರವೇ ಸಾಧ್ಯವಾಗಿತ್ತು. ಇನ್ನೂ ಇಂದಿನ ಸೌತ್​ ಹ್ಯಾಂಪ್ಟನ್ ಹವಾಮಾನದಂತೆ ಮಧ್ಯಾಹ್ನ 12 ಗಂಟೆವರೆಗೆ ಭಾರೀ ಮಳೆಯ ಸಾಧ್ಯತೆ ಹೊಂದಿದೆ. ಸಂಜೆ 4 ಗಂಟೆಗೆ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯ ಬ್ಯಾಟಿಂಗ್​ ಮಾಡಿರುವ ನ್ಯೂಜಿಲೆಂಡ್​, 2 ವಿಕೆಟ್​ ಕಳೆದುಕೊಂಡು 101 ರನ್​ಗಳಿಸಿದೆ.

The post WTC ಫೈನಲ್​ಗೆ ಮತ್ತೆ ಮಳೆರಾಯನ ಕಾಟ.. 4ನೇ ದಿನದ ಮೊದಲ ಸೆಷನ್ ಮಳೆಗೆ ಆಹುತಿ appeared first on News First Kannada.

Source: newsfirstlive.com

Source link