ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ಮಹೂರ್ತ ನಿಗದಿಯಾದ ದಿನದಿಂದಲೇ, ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗರಿಗೆದರಿದ್ವು. ಆದ್ರೆ ಪಂದ್ಯಕ್ಕೆ ಮೊದಲ ದಿನದಿಂದಲೂ ಅಡ್ಡಿ ಪಡಿಸುತ್ತಲೇ ಇರುವ ಮಳೆ ಹಾಗೂ ಟೀಮ್​ ಇಂಡಿಯಾದ ನೀಡ್ತಿರೋ ನೀರಸ ಪ್ರದರ್ಶನ, ಅಭಿಮಾನಿಗಳ ನಿರೀಕ್ಷೆಗಳನ್ನ ಬುಡಮೇಲು ಮಾಡಿದೆ. ಇದೀಷ್ಟೇ ಅಲ್ಲ, ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ ಕಾಂಬಿನೇಷನ್ ಕೂಡ, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ನಲ್ಲಿ ಭಾರತ-ನ್ಯೂಜಿಲೆಂಡ್​​ ಮುಖಾಮುಖಿಯಾಗೋದು ಕನ್​ಫರ್ಮ್​ ಆದಾಗಲೇ, ಪಂದ್ಯದಲ್ಲಿ ಗೆಲ್ಲೋದ್ಯಾರು..? ಸೋಲೋದ್ಯಾರು..? ಅನ್ನೋದು ಚರ್ಚೆಗೆ ಗ್ರಾಸವಾಗಿತ್ತು. ಇದರ ಜೊತೆಗೆ ಮಹತ್ವದ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಕಾಂಬಿನೇಷನ್​ ಏನಿರಲಿದೆ ಅನ್ನೋ ಕುತೂಹಲ ಮೂಡಿಸಿತ್ತು. ಈ ವಿಚಾರವಾಗಿ ಹಲವರು ಹಲವು ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ರು. ಅಂತಿಮವಾಗಿ ಟೀಮ್​ ಇಂಡಿಯಾ ಕಣಕ್ಕಿಳಿದಿದ್ದು 5 ಬ್ಯಾಟ್ಸ್​​ಮನ್​, ಒರ್ವ ಸ್ಪೆಷಲಿಸ್ಟ್ ವಿಕೆಟ್ ಕೀಪರ್, ಇಬ್ಬರು ಆಲ್​​ರೌಂಡರ್​ ಹಾಗೂ ಮೂವರು ವೇಗಿಗಳ ಕಾಂಬಿನೇಷನ್​ನಲ್ಲಿ. ಇದೀಗ ಇದೇ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ಲೇಯಿಂಗ್​-XI ಆಯ್ಕೆಯಲ್ಲಿ ಎಡವಿತಾ ಮ್ಯಾನೇಜ್​ಮೆಂಟ್​​..?
ಟೀಮ್​ ಇಂಡಿಯಾಗೆ ಬೇಕಿತ್ತಾ ಇನ್ನೊಬ್ಬ ವೇಗಿಯ ಬಲ..?

ಸೌತ್​ಹ್ಯಾಂಪ್ಟನ್​ ಅಂಗಳದಲ್ಲಿ ಟೀಮ್​ ಇಂಡಿಯಾ ನಡೆಸ್ತಾ ಇರೋ ಪರದಾಟ ನೋಡಿದ ಬಳಿಕ ಈ ಚರ್ಚೆ ಆರಂಭವಾಗಿದೆ. ಭಾರತದ ಬ್ಯಾಟಿಂಗ್​ ವೇಳೆ ಕಿವೀಸ್​ ವೇಗಿಗಳು ಸಾಲಿಡ್​ ಫರ್ಪಾಮೆನ್ಸ್​​ ನೀಡಿದ್ರು. ಆದ್ರೆ, ಟೀಮ್​ ಇಂಡಿಯಾ ಬೌಲರ್ಸ್​​​ ವಿಕೆಟ್​ಗಾಗಿ ಪರದಾಟ ನಡೆಸಿದ್ರು. ಇಶಾಂತ್​ ಶರ್ಮಾ, ಮೊಹಮದ್​ ಶಮಿ ಎಸೆತಗಳು ಕೆಲಮಟ್ಟಿಗೆ ಸ್ವಿಂಗ್​ ಹಾಗೂ ಸೀಮ್​ ಆದ್ರೆ, ಬೂಮ್ರಾ ಬೌಲಿಂಗ್​ ಸಖತ್​​ ಡಲ್​ ಆಗಿತ್ತು. ಟೀಮ್​ ಇಂಡಿಯಾ ಏಫೆಕ್ಟಿವ್​ ಬೌಲಿಂಗ್​ ಮಾಡುವಲ್ಲಿ ಎಡವಿದ ಬಳಿಕ ಭಾರತಕ್ಕೆ ನಾಲ್ಕು ವೇಗಿಗಳ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯಬೇಕಿತ್ತಾ ಎಂಬ ಚರ್ಚೆ ಆರಂಭವಾಗಿದೆ.

ಕೆಳ ಕ್ರಮಾಂಕಕ್ಕೆ ಬೇಕಿತ್ತು ಹನುಮನ ಬಲ..!
2ನೇ ದಿನದಾಟದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಟೀಮ್​ ಇಂಡಿಯಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. ಆದ್ರೆ, 3ನೇ ದಿನದಾಟದಲ್ಲಾದ ಬ್ಯಾಟಿಂಗ್​ ಕೊಲ್ಯಾಪ್ಸ್​​​, ಕಿವೀಸ್​​ ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡಿದೆ. ಅದರಲ್ಲೂ ಲೋಯರ್​​ ಆರ್ಡರ್​​ ಬ್ಯಾಟ್ಸ್​ಮನ್​ಗಳ ವೈಫಲ್ಯತೆ, ತಂಡಕ್ಕೆ ಇನ್ನೋರ್ವ ಬ್ಯಾಟ್ಸ್​ಮನ್​ಗಳ ಅಗತ್ಯತೆ ಇತ್ತಾ ಅನ್ನೋ ಪ್ರಶ್ನೆಯನ್ನ ಹುಟ್ಟಿಸಿದೆ. ಅದರಲ್ಲೂ ಬೆಂಚ್​ ಕಾಯ್ತಾ ಇರೋ ಟೆಸ್ಟ್​​ ಸ್ಪೆಷಲಿಸ್ಟ್​​ ಹನುಮ ವಿಹಾರಿಯನ್ನ ಆಡಿಸಬೇಕಿತ್ತು ಅನ್ನೋದು ಹಲವರ ವಾದವಾಗಿದೆ.

ತಂಡಕ್ಕೆ ಬೇಕಿತ್ತು ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​, ಬೌಲಿಂಗ್​..!
ಫೈನಲ್​ ಪಂದ್ಯದಲ್ಲಿ ಭಾರತ 2 ಸ್ಪಿನ್​ ಆಲ್​ರೌಂಡರ್​​ಗಳೊಂದಿಗೆ ಕಣಕ್ಕಿಳಿದಿದ್ರೆ, ಇಬ್ಬರು ಪೇಸ್​ ಆಲ್​​​ರೌಂಡರ್​​ಗಳೊಂದಿಗೆ ಎದುರಾಳಿ ನ್ಯೂಜಿಲೆಂಡ್​ ಕಣಕ್ಕಿಳಿದಿದೆ. ಆದ್ರೆ, ಮೈದಾನಕ್ಕಿಳಿದ ಆಲ್​ರೌಂಡರ್​​ಗಳಾದ ಕೈಲ್​ ಜೆಮಿಸನ್​, ಗ್ರ್ಯಾಂಡ್​ಹೊಮ್​ ಯಶಸ್ಸನ್ನ ಕಂಡಿದ್ದಾರೆ. ಹೀಗಾಗಿ ಭಾರತಕ್ಕೆ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಸೇವೆ ಬೇಕಿತ್ತಾ ಎಂಬ ಪ್ರಶ್ನೆ ಹುಟ್ಟಿದೆ. ಪೇಸ್​​ ಬೌಲಿಂಗ್​ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್​ ಮೂಲಕ ಬಲ ತುಂಬಬಲ್ಲ ಸಾಮರ್ಥ್ಯ ಪಾಂಡ್ಯಗಿತ್ತು. ಒಬ್ಬ ಸಮರ್ಥ ಪೇಸ್​​​ ಆಲ್​​ರೌಂಡರ್​​ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗ್ತಿದೆ.

ಇದೆಲ್ಲದರ ಜೊತೆಗೆ ಒಬ್ಬ ಬ್ಯಾಟ್ಸ್​ಮನ್​ ಕೂಡ 50ರ ಗಡಿ ದಾಟದೇ ಇರೋದು ಕೂಡ ಪಂದ್ಯದಲ್ಲಿ ಭಾರತದ ಹಿನ್ನೆಡೆಗೆ ಕಾರಣವಾಗಿದೆ ಅನ್ನೋದನ್ನೂ ಅಲ್ಲಗಳೆಯುವಂತಿಲ್ಲ. ಅಂತಿಮವಾಗಿ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೋರಾಟ ಇದೇ ಅನ್ನೋದಷ್ಟೇ ಸಮಾಧಾನಕರ ಸಂಗತಿ.

The post WTC ಫೈನಲ್​​ಗೆ ಮಳೆ ಕಾಟ.. ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದ ಟೀಂ ಇಂಡಿಯಾ! appeared first on News First Kannada.

Source: newsfirstlive.com

Source link