‘ಫ್ಲೈಯಿಂಗ್ ಸಿಖ್​’ ಮಿಲ್ಖಾ ಸಿಂಗ್​​ರನ್ನ ಕಳೆದುಕೊಂಡ ನೋವಿನಲ್ಲಿ ಭಾರತ ಕ್ರೀಡಾ ಜಗತ್ತು ಕಣ್ಣೀರು ಹಾಕಿದೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಮಿಲ್ಖಾ ಸಿಂಗ್ ಚಿಕಿತ್ಸೆ ಫಲಿಸದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಯ ಶೋಕದಲ್ಲಿರುವ ಟೀಂ ಇಂಡಿಯಾ, ಇಂದು ನ್ಯೂಜಿಲೆಂಡ್​ ವಿರುದ್ಧ ವರ್ಲ್ಡ್​​ ಟೆಸ್ಟ್​ ಚಾಂಪಿಯನ್ ಫೈನಲ್ಸ್​​ನಲ್ಲಿ ಸೆಣಸಾಟಕ್ಕೆ ಇಳಿದಿದೆ. ಅದರಂತೆ ಟೀಂ ಇಂಡಿಯಾ ಆಟಗಾರರು ಮಿಲ್ಖಾ ಸಿಂಗ್ ಅವರ ನೆನಪಿಗಾಗಿ ಕಪ್ಪು ಪಟ್ಟಿಯನ್ನ ಕಟ್ಟಿ ಮೈದಾನಕ್ಕೆ ಇಳಿದಿದೆ.

ಮೊದಲನೇ ದಿನ ಮಳೆಯಿಂದಾಗಿ ಪಂದ್ಯ ವಾಷ್​ಔಟ್ ಆಗಿತ್ತು. ಹೀಗಾಗಿ ಇಂದು ಟಾಸ್​ ಗೆದ್ದ ನ್ಯೂಜಿಲೆಂಡ್​ ಬೌಲಿಂಗ್ ಆಯ್ದುಕೊಂಡು, ಟೀಂ ಇಂಡಿಯಾವನ್ನ ಬ್ಯಾಟಿಂಗ್​ಗೆ ಆಹ್ವಾನ ನೀಡಿದೆ. ಅದರಂತೆ ಬ್ಯಾಟಿಂಗ್​​ಗೆ ಇಳಿದಿರುವ ಆರಂಭಿಕ ಜೋಡಿ ರೋಹಿತ್ ಶರ್ಮಾ, ಶುಬ್​ಮನ್​ ಗಿಲ್​​, ಅವರು ತಮ್ಮ ಕೈ ಮೇಲೆ ಬ್ಲಾಕ್​ ಪಟ್ಟಿಕಟ್ಟಿಕೊಂಡು ಆಟವಾಡುತ್ತಿದ್ದಾರೆ.

The post WTC ಫೈನಲ್​​ನಲ್ಲಿ ಮಿಲ್ಖಾ ಸಿಂಗ್ ಸ್ಮರಿಸಿದ ಟೀಂ ಇಂಡಿಯಾ appeared first on News First Kannada.

Source: newsfirstlive.com

Source link