ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​ ಪಂದ್ಯಕ್ಕೆ, ಕೇವಲ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್​ ಫೀವರ್​ ಅರ್ಧಕ್ಕೆ​ ಮುಗೀತಿದ್ದಂತೆ, ಎಲ್ಲರ ಚಿತ್ತ, ಫೈನಲ್​​​​​ ಫೈಟ್​ನತ್ತ ನೆಟ್ಟಿದೆ. ಕ್ಷಣಕ್ಷಣಕ್ಕೂ ಕ್ಯೂರಿಯಾಸಿಟಿ ಡಬಲ್​ ಮಾಡಿರೋ ಭಾರತ -ನ್ಯೂಜಿಲೆಂಡ್​​ ಪಂದ್ಯ​ ನೋಡಲು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಿಗ್​​​​ ಫೈಟ್​​​ನಲ್ಲಿ ಎರಡೂ ತಂಡಗಳ ಬೌಲರ್​​​​ಗಳೇ, ಎಕ್ಸ್​ಫ್ಯಾಕ್ಟರ್​​ ಅನ್ನೋದನ್ನ ಯಾರೂ ಮರೆಯುವಂತಿಲ್ಲ.

ಕ್ರಿಕೆಟ್​ ಲೋಕದಲ್ಲಿ ಎಕ್ಸೈಟ್​​​ಮೆಂಟ್​ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ, ವರ್ಲ್ಡ್​​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯವೇ ಬೆಸ್ಟ್​ ಎಕ್ಸಾಂಪಲ್​. ಈ ಟೂರ್ನಿ, ಎರಡು ವರ್ಷಗಳ ಕಾಲ ನಡೆದಿರೋದೇ, ಅದರ ರೋಚಕತೆ ಹೆಚ್ಚಾಗೋಕೆ ಕಾರಣ. ಇನ್ನು ಹೇಳೋದಾದ್ರೆ ಬೇರೆ ಐಸಿಸಿ ಈವೆಂಟ್​​ಗಳ ಕುತೂಹಲಕ್ಕಿಂತಲೂ, ಈ ಫೈನಲ್​​ ಫೈಟ್​ನ ಕುತೂಹಲ ಒಂದು ಹೆಜ್ಜೆ ಮುಂದೆ ಹೋಗಿದೆ. ಹಾಗಾಗಿ ದಿ ವರ್ಲ್ಡ್ಸ್​ ಬೆಸ್ಟ್​​​ ಟೀಮ್​​ಗಳ ಕಾದಾಟವನ್ನ ಕಣ್ತುಂಬಿಕೊಳ್ಳೋಕೆ, ವಿಶ್ವದ ಕೋಟ್ಯಂತರ ಕಣ್ಣುಗಳು ಎದುರು ನೋಡ್ತಿವೆ.

ಬ್ಯಾಟ್ಸ್​​ಮನ್​​ಗಳಿಗೆ ಭೀತಿ ಹುಟ್ಟಿಸೋಕೆ ಬೌಲರ್ಸ್​ ರೆಡಿ!
ಈಗಾಗಲೇ ಅಂತಿಮ ಹಂತದ ಕಸರತ್ತು ನಡೆಸಿರೋ ಟೀಮ್​ ಇಂಡಿಯಾ – ನ್ಯೂಜಿಲೆಂಡ್, ರನ್​​ಭೂಮಿಯಲ್ಲಿ ರಣಕಹಳೆ ಮೊಳಗಿಸೋಕೆ ರಣತಂತ್ರ ರೂಪಿಸಿವೆ. ಇದರ ಜೊತೆಗೆ ಜಂಟಲ್​ಮೆನ್​ ಗೇಮ್​ ಕ್ರಿಕೆಟ್​​ನಲ್ಲಿ ಇವತ್ತು ವರ್ಲ್ಡ್​ ಕ್ಲಾಸ್​​ ಬ್ಯಾಟರ್ಸ್​ ಜೊತೆಗೆ, ವರ್ಲ್ಡ್ಸ್​​​ ಬೆಸ್ಟ್​ ಬೌಲರ್​​​ಗಳು ಕೂಡ ರಿಯಲ್​​​​ ಬ್ಯಾಟಲ್​​ಗೆ ರೆಡಿಯಾಗಿದ್ದಾರೆ. ಬೆಸ್ಟ್​ ಪೇಸ್​​ ಅಟ್ಯಾಕರ್ಸ್​ ಹೊಂದಿರುವ ಉಭಯ ತಂಡಗಳು, ಬೆಸ್ಟ್​​ ಬ್ಯಾಟ್ಸ್​​ಮನ್​​​ಗಳಿಗೆ ಘಾತುಕ ಎಸೆತಗಳ ಭೀತಿ ಹುಟ್ಟಿಸೋಕೆ ಸಜ್ಜಾಗಿವೆ. ಆದರೆ ಸ್ಟಾರ್​​ ವೇಗಿಗಳ ಡೆಡ್ಲಿ ಬೌನ್ಸರ್​, ಅಟ್ಯಾಕಿಂಗ್​​ ಬೌಲಿಂಗ್​ ಅನ್ನ ಹೇಗಪ್ಪಾ ಫೇಸ್​ ಮಾಡೋದು ಅಂತ ಬ್ಯಾಟ್ಸ್​​ಮನ್​ಗಳು, ಟೆನ್ಶನ್​ಗೆ ಒಳಗಾಗಿದ್ದಾರೆ.

ಟೀಮ್​ ಇಂಡಿಯಾದ ಗೇಮ್​ ಚೇಂಜರ್ಸ್ ಬುಮ್ರಾ – ಶಮಿ​​!
ಜಸ್​ಪ್ರಿತ್​ ಬೂಮ್ರಾ-ಮೊಹಮ್ಮದ್​ ಶಮಿಯನ್ನ, ಟೀಮ್​ ಇಂಡಿಯಾದ ಗೇಮ್​ ಚೇಂಜರ್ಸ್​ ಅಂತಾನೆ ಕರೆಯಲಾಗ್ತಿದೆ. ಶಮಿ – ಬೂಮ್ರಾ ಟೂರ್ನಿಯುದ್ದಕ್ಕೂ ತಮ್ಮ ಸಾಲಿಡ್​ ಲೈನ್​ ಆ್ಯಂಡ್​​​ ಲೆಂಥ್ ಮತ್ತು ಯಾರ್ಕರ್​​​ಗಳಿಂದ ಎದುರಾಳಿಗಳನ್ನ ಕಾಡಿದ್ರು. ಆದರೀಗ ಈ ಜೋಡಿಗೆ ಟೆಸ್ಟಿಂಗ್​ ಟೈಮ್​..! ಅಗ್ನಿಪರೀಕ್ಷೆಯಲ್ಲಿ ಇಬ್ಬರಲ್ಲಿ ಯಾರು ದೀ ಬೆಸ್ಟ್​ ಪರ್ಫಾಮೆನ್ಸ್ ನೀಡ್ತಾರೋ ಅನ್ನೋದು ಕೂಡ, ಎಕ್ಸ್​ಪೆಕ್ಟೇಷನ್​ ಡಬಲ್​ ಮಾಡಿದೆ. ಹಾಗಾಗಿ ಇಬ್ಬರೂ ಕೂಡ ಪರೀಕ್ಷೆಗೆ ಸಿದ್ಧವಾಗಬೇಕಿದೆ. ಇನ್ನು ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ ಹಾದಿಯಲ್ಲಿ ಈ ಸ್ಟಾರ್​​​ ವೇಗಿಗಳ ಪ್ರದರ್ಶನ, ಅದ್ಭುತವಾಗಿರೋದು ವಿರಾಟ್​ ಪಡೆಗೆ ಪ್ಲಸ್​ ಪಾಯಿಂಟ್​​.

 ಶಮಿ                               ಬುಮ್ರಾ
10            ಪಂದ್ಯ             09
36            ವಿಕೆಟ್            34
19.77       ಸರಾಸರಿ          22.41
7/58         ಬೆಸ್ಟ್​              7/58

ವರ್ಲ್ಡ್​ ಟೆಸ್ಟ್​​ ಚಾಂಪಿಯನ್​​ಶಿಪ್​ನಲ್ಲಿ 10 ಪಂದ್ಯಗಳನ್ನಾಡಿರುವ ಶಮಿ, 19.77ರ ಬೌಲಿಂಗ್​ ಸರಾಸರಿಯಲ್ಲಿ 36 ವಿಕೆಟ್​ ಕಬಳಿಸಿದ್ದಾರೆ. ಹಾಗೆಯೇ ಬುಮ್ರಾ 9 ಪಂದ್ಯಗಳಲ್ಲಿ 22.41ರ ಸರಾಸರಿಯಲ್ಲಿ 34 ಬಲಿ ಪಡೆದಿದ್ದಾರೆ. ಇನ್ನು ಇಬ್ಬರು ಕೂಡ 58 ರನ್​ ನೀಡಿ 7 ವಿಕೆಟ್​ ಪಡೆದಿರೋದು ಪಂದ್ಯವೊಂದರ ಬೆಸ್ಟ್​ ಆಗಿದೆ.

ಚಾಂಪಿಯನ್​​ಶಿಪ್​​ನಲ್ಲಿ ಇಶಾಂತ್​-ಸಿರಾಜ್​ ಸೂಪರ್ ಸ್ಪೆಲ್​​!
ಇಶಾಂತ್​ ಶರ್ಮಾ ಮತ್ತು ಮೊಹಮ್ಮದ್​ ಸಿರಾಜ್​​ರಲ್ಲಿ ಇಶಾಂತ್​ ಕಣಕ್ಕಿಳಿಯುತ್ತಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​​ನಲ್ಲಿ ಇಶಾಂತ್​ ಘರ್ಜನೆ ಜೋರಾಗಿಯೇ ಇದೆ. ಜೊತೆಗೆ ಸಿರಾಜ್​ ಕೂಡ, ಸಿಕ್ಕ ಅಲ್ಫ ಅವಧಿಯಲ್ಲೇ ತಾನು ಕೂಡ ಬೆಸ್ಟ್​ ಬೌಲರ್​ ಅನ್ನೋದನ್ನ ಪ್ರೂವ್​ ಮಾಡಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಪಿಚ್​​​ಗಳಲ್ಲಿ. ಆದ್ರೆ ಇಂಗ್ಲೆಂಡ್​​​ನ ಪಿಚ್​ ಇಬ್ಬರಿಗೂ ಸವಾಲಿನದ್ದಾಗಿದೆ.

 ಇಶಾಂತ್                         ಸಿರಾಜ್
11                ಪಂದ್ಯ        05
36                ವಿಕೆಟ್​       16
17.36           ಸರಾಸರಿ     28.25
9/78            ಬೆಸ್ಟ್​          ​6/150
ವರ್ಲ್ಡ್​ ಟೆಸ್ಟ್​​ ಚಾಂಪಿಯನ್​​ಶಿಪ್​ನಲ್ಲಿ ಆಡಿರುವ 11 ಟೆಸ್ಟ್​​​ಗಳಲ್ಲಿ ಇಶಾಂತ್​, 17.36ರ ಬೌಲಿಂಗ್​ ಸರಾಸರಿಯಲ್ಲಿ 36 ವಿಕೆಟ್​ ಕಬಳಿಸಿದ್ದಾರೆ. 78 ರನ್​ ನೀಡಿ 9 ವಿಕೆಟ್​ ಪಡೆದಿರೋದು, ಇಶಾಂತ್​ ಬೆಸ್ಟ್​ ಬೌಲಿಂಗ್​​..ಇನ್ನು ಬುಮ್ರಾ ಕೇವಲ 05 ಪಂದ್ಯಗಳಲ್ಲಿ 28.25ರ ಸರಾಸರಿಯಲ್ಲಿ 16 ಬಲಿ ಪಡೆದಿದ್ದಾರೆ. 150 ರನ್​​ ನೀಡಿ 6 ವಿಕೆಟ್​​ ಪಡೆದಿರೋದು ಸಿರಾಜ್​ ಬೆಸ್ಟ್​.

ಮೆಗಾ ಟೂರ್ನಿಯಲ್ಲಿ ಸೌಥಿ – ಬೋಲ್ಟ್​ ಅಬ್ಬರ..!
ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ನಲ್ಲಿ ಟೀಮ್​ ಇಂಡಿಯಾ ಬೌಲರ್​ಗಳಷ್ಟೇ ಅಲ್ಲ, ಕಿವೀಸ್​ ವೇಗಿಗಳು ಅಬ್ಬರಿಸಿದ್ದಾರೆ. ಜೊತೆಗೆ ಈ ಜೋಡಿಯ ಲೈನ್​​ ಆ್ಯಂಡ್​ ಲೆಂಥ್​ ಬೌಲಿಂಗ್,​​ ವಿರಾಟ್​ ಪಡೆಗೆ ಕಂಟಕವಾಗುತ್ತೆ ಕೂಡ. ಕೇವಲ ಇದಷ್ಟೇ ಇಲ್ಲ. ಟ್ರ್ಯಾಕ್​ ರೆಕಾರ್ಡ್​​ ಗಮನಿಸಿದ್ರೆ ಉಭಯ ವೇಗಿಗಳು ಸಾಲಿಡ್​​ ಪ್ರದರ್ಶನವನ್ನೇ ನೀಡಿದ್ದಾರೆ. ಇಂಪ್ಯಾಕ್ಟ್​ಪುಲ್​ ಬೌಲಿಂಗ್​​​​ನಿಂದಲೇ ಗಮನ ಸೆಳೆದಿರೋ ಇಬ್ಬರದ್ದು, ಚಾಂಪಿಯನ್​ಶಿಪ್​ ಹಾದಿಯಲ್ಲಿ ಪರ್ಫಾಮೆನ್ಸ್​ ಹೇಗಿದೆ ಗೊತ್ತಾ..?

 ಸೌಥಿ                                ಬೋಲ್ಟ್
10                  ಪಂದ್ಯ          09
51                  ವಿಕೆಟ್​         34
20.66             ಸರಾಸರಿ       29.29
9/110             ಬೆಸ್ಟ್​​​            6/117
ಚಾಂಪಿಯನ್​​ಶಿಪ್​ನಲ್ಲಿ ಸೌಥಿ ಬೌಲಿಂಗ್​ ಮಾಡಿರುವ 10 ಟೆಸ್ಟ್​​​ಗಳಲ್ಲಿ 20.66ರ ಬೌಲಿಂಗ್​ ಸರಾಸರಿಯಲ್ಲಿ 51 ವಿಕೆಟ್​ ಕಿತ್ತಿದ್ದಾರೆ. 110 ರನ್​ ನೀಡಿ 9 ವಿಕೆಟ್​ ಪಡೆದಿರೋದು ಸೌಥಿ​ ಬೆಸ್ಟ್​ ಬೌಲಿಂಗ್​​..ಇನ್ನು ಬೋಲ್ಟ್​​ 9 ಪಂದ್ಯಗಳಲ್ಲಿ 29.29ರ ಸರಾಸರಿಯಲ್ಲಿ 34 ಬ್ಯಾಟ್ಸ್​​​ಮನ್​ಗಳನ್ನ ಔಟ್​ ಮಾಡಿದ್ದಾರೆ. 117 ರನ್​​ ನೀಡಿ 6 ವಿಕೆಟ್​​ ಪಡೆದಿರೋದು ಬೋಲ್ಟ್​​​ ಬೆಸ್ಟ್ ಸ್ಪೆಲ್​…

ಕಿವೀಸ್​​ ಪಡೆಯ ಎಕ್ಸಲೆಂಟ್ ಬೌಲರ್ಸ್​ ಜೆಮಿಸನ್​ – ವ್ಯಾಗ್ನರ್​​..!
ಕಿವೀಸ್​​ ಸ್ಪೀಡ್​ಸ್ಟರ್ಸ್​​ ಕೈಲ್​ ಜೆಮಿಸನ್​​-ನೇಲ್​ ವ್ಯಾಗ್ನರ್..! ತಂಡದ ಪ್ರಮುಖ ಅಸ್ತ್ರಗಳಾದ ಇವರು, ಡೆಡ್ಲಿ ಬೌನ್ಸರ್​, ಅಟ್ಯಾಕಿಂಗ್​​ ಬೌಲಿಂಗ್​​ಗೆ ಫೇಮಸ್​​. ಹಾಗಾಗಿಯೇ ಈ ಜೋಡಿಯ ಎಕ್ಸಲೆಂಟ್ ಬೌಲಿಂಗ್ ಸ್ಪೆಲ್​​​ಗೆ ಬ್ಯಾಟ್ಸ್​​​ಮನ್​​​ಗಳು ತತ್ತರಿಸೋದು ನೂರಕ್ಕೆ ನೂರು ಸತ್ಯ. ಇದೀಗ ಟೀಮ್​ ಇಂಡಿಯಾ ಆಟಗಾರರಿಗೂ ಕಂಟಕ ಶುರುವಾಗಿದೆ.

ಜೆಮಿಸನ್                            ವ್ಯಾಗ್ನರ್
06                   ಪಂದ್ಯ           07
36                   ವಿಕೆಟ್​          32
13.27              ಸರಾಸರಿ       22.50
11/117            ಬೆಸ್ಟ್​​​            7/133

ಇನ್ನು ಜೆಮಿಸನ್​ ಬೌಲಿಂಗ್​ ಮಾಡಿರುವ 6 ಪಂದ್ಯಗಳಲ್ಲಿ 13.27ರ ಬೌಲಿಂಗ್​ ಸರಾಸರಿಯಲ್ಲಿ 36 ವಿಕೆಟ್​ ಕಬಳಿಸಿದ್ದಾರೆ. 117 ರನ್​ ನೀಡಿ 11 ವಿಕೆಟ್​ ಪಡೆದಿರೋದು ಪಂದ್ಯವೊಂದರ ಬೆಸ್ಟ್. ಇನ್ನು ವ್ಯಾಗ್ನರ್​​ 7ಪಂದ್ಯಗಳಲ್ಲಿ 22.50ರ ಸರಾಸರಿಯಲ್ಲಿ 32 ಬ್ಯಾಟ್ಸ್​​​ಮನ್​ಗಳನ್ನ ಪೆವಿಲಿಯನ್​​ ತೋರಿಸಿದ್ದಾರೆ. 133 ರನ್​​ ನೀಡಿ 7 ವಿಕೆಟ್​​ ಪಡೆದಿರೋದು ವ್ಯಾಗ್ನರ್​​​​​ ಬೆಸ್ಟ್ ಬೌಲಿಂಗ್​..!

ಸದ್ಯದ ಟ್ರ್ಯಾಕ್​ ರೆಕಾರ್ಡ್​​ ಗಮನಿಸಿದ್ರೆ, ಈ ಎಲ್ಲಾ ಸ್ಟಾರ್​ ವೇಗಿಗಳು ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಟೂರ್ನಿಯಲ್ಲಿ ಬೊಂಬಾಟ್​​ ಪ್ರದರ್ಶನವನ್ನೇ ನೀಡಿದ್ದಾರೆ. ಆದರೆ ಕ್ರಿಕೆಟ್​​ ಏಕ್ಸ್​ಪರ್ಟ್​​ಗಳು ಇಂಗ್ಲೆಂಡ್​​​ ವಾತಾವರಣ ಕಿವೀಸ್​​ ಬೌಲರ್​​​ಗಳಿಗೇ ಹೆಚ್ಚು ಸಹಾಯಕವಾಗುತ್ತೆ ಅಂತಿದ್ದಾರೆ. ಹಾಗಾದ್ರೆ ಇಂಗ್ಲೀಷ್​​ ಕಂಡಿಶನ್​ನಲ್ಲಿ ಟೀಮ್​ ಇಂಡಿಯಾ ಬೌಲರ್ಸ್​​ ಯಶಸ್ಸು ಕಾಣ್ತಾರಾ, ಕಾದು ನೋಡಬೇಕಿದೆ.

The post WTC ಫೈನಲ್​​​​ನಲ್ಲಿ ಬೆಸ್ಟ್​ ಬೌಲರ್​​ಗಳ ಫೈಟ್- ಕುತೂಹಲ ಹೆಚ್ಚಿಸಿದ ಟ್ರ್ಯಾಕ್​ ರೆಕಾರ್ಡ್ appeared first on News First Kannada.

Source: newsfirstlive.com

Source link