ಇನ್ನೇನು ಕೆಲವೇ ಗಂಟೆಗಳಲ್ಲಿ ಐತಿಹಾಸಿಕ ಪಂದ್ಯಕ್ಕೆ ಸೌತ್​ಹ್ಯಾಂಪ್ಟನ್ ಮೈದಾನ ಸಾಕ್ಷಿಯಾಗಲಿದೆ. ಟೆಸ್ಟ್​​ ಕ್ರಿಕೆಟ್ ಆರಂಭವಾಗಿ 144 ವರ್ಷಗಳಾದ ಬಳಿಕ, ಟೆಸ್ಟ್​ ಚಾಂಪಿಯನ್​ ಯಾರು ಅನ್ನೋದು ನಿರ್ಧಾರವಾಗೋ ಪಂದ್ಯಕ್ಕೆ ಕೌಂಟ್​​ಡೌನ್​ ಆರಂಭವಾಗಲಿದೆ. ಇಂದಿನಿಂದ ಆರಂಭವಾಗಲಿರೋ ಮಹತ್ವದ ಫೈಟ್​ನ ಗೆಲುವು – ಸೋಲನ್ನ ನಿರ್ಧರಿಸೋ ಅಂಶಗಳ ಡಿಟೇಲ್ಸ್​ ಇಲ್ಲಿದೆ.

ಬಹುದಿನಗಳಿಂದ ಕ್ರಿಕೆಟ್​​ ಅಭಿಮಾನಿಗಳು ಕಾಯ್ತಾ ಇದ್ದ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯಕ್ಕೆ ಕೆಲವೇ ಘಂಟೆಗಳು ಮಾತ್ರ ಬಾಕಿ. ಟೆಸ್ಟ್​ ಕ್ರಿಕೆಟ್​ನಲ್ಲಿ ರಾಜನ ಪಟ್ಟ ಯಾರಿಗೆ ಅನ್ನೋದನ್ನ ಇಂದಿನಿಂದ ಆರಂಭವಾಗಲಿರುವ ಪಂದ್ಯ ನಿರ್ಧರಿಸಲಿದೆ. ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಭಾರತ-ನ್ಯೂಜಿಲೆಂಡ್​​ ತಂಡಗಳು ಗೆಲುವಿಗೆ ಭರ್ಜರಿ ಕಸರತ್ತು ನಡೆಸಿವೆ.

ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯಕ್ಕೆ ವೇದಿಕೆ ಸಜ್ಜಾದ ದಿನದಿಂದಲೂ ಪ್ರಿಡಿಕ್ಷನ್​ಗಳ ಸುರಿ ಮಳೆಯೇ ಹರಿದಿದೆ. ಕೆಲವೊಂದಿಷ್ಟು ಮಂದಿ ಭಾರತ ಗೆಲ್ಲುತ್ತೇ ಅಂದ್ರೆ, ನ್ಯೂಜಿಲೆಂಡ್​ ಚಾಂಪಿಯನ್​ ಆಗುತ್ತೆ ಅಂದವರು ಇನ್ನೊಂದಿಷ್ಟು ಮಂದಿ. ಮಾಜಿ ಕ್ರಿಕೆಟರ್ಸ್​, ಏಕ್ಸ್​ಪರ್ಟ್​​ಗಳ ಹೊರತಾಗಿ ಗೆಲವನ್ನ ನಿರ್ಧರಿಸೋದು ಆಟಗಾರರ ಪ್ರದರ್ಶನ. ಅದರಲ್ಲೂ ಮುಖ್ಯವಾಗಿ ಈ 4 ಕೀ ಏರಿಯಾಗಳ ಪ್ರದರ್ಶನದ ಮೇಲೆ ಫಲಿತಾಂಶ ನಿರ್ಧರಿತವಾಗಲಿದೆ.

ನಾಯಕರನ್ನೇ ನೆಚ್ಚಿಕೊಂಡಿವೆ ಉಭಯ ತಂಡಗಳು..!
ನ್ಯೂಜಿಲೆಂಡ್​ – ಭಾರತ ತಂಡಗಳು ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಎಂದು ತಿಳಿದ ಬಳಿಕ ಹೆಚ್ಚು ಚರ್ಚೆಯಾಗಿದ್ದು ವಿರಾಟ್​​ ಕೊಹ್ಲಿ VS ಕೇನ್​ ವಿಲಿಯಮ್​ಸನ್​ ಅನ್ನೋ ಟಾಪಿಕ್​. ಇಬ್ಬರಲ್ಲಿ ಯಾರು ಬೆಸ್ಟ್​​..? ನಾಯಕರಾಗಿ ಉಭಯ ತಂಡಗಳ ಆಟಗಾರ ಸಾಧನೆ ಏನು..? ಹೀಗೆ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಸಾಧಕ-ಬಾಧಕಗಳ ಚರ್ಚೆಗಳು ನಡೆದಿವೆ. ಯಾಕಂದ್ರೆ ಉಭಯ ತಂಡಗಳು ಗೆಲುವಿಗೆ ನೆಚ್ಚಿಕೊಂಡಿರೋದು ಈ ಇಬ್ಬರನ್ನೇ.

ಕೊಹ್ಲಿ-ಕೇನ್​ ವಿಶ್ವ ಕ್ರಿಕೆಟ್​​ನಲ್ಲಿ ಶ್ರೇಷ್ಠ ಬ್ಯಾಟ್ಸ್​ಮನ್​ ಮಾತ್ರವಲ್ಲ. ಯಶಸ್ಸಿ ಕ್ಯಾಪ್ಟನ್​ಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಬ್ಯಾಟಿಂಗ್​ ವೇಳೆ ಇವರು ಕಟ್ಟುವ ಇನ್ನಿಂಗ್ಸ್​ ಹಾಗೂ ನಾಯಕರಾಗಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಇಡೀ ಪಂದ್ಯದ ಗತಿಯನ್ನೇ ಬದಲಿಸುವ ಶಕ್ತಿಯಿದೆ. ಇದರಿಂದ ಇಂದಿನಿಂದ ಆರಂಭವಾಗಲಿರೋ ಮಹತ್ವದ ಪಂದ್ಯವೂ ಹೊರತಾಗಿಲ್ಲ.

ಸೌತ್​​ಹ್ಯಾಂಪ್ಟನ್​ನಲ್ಲಿ ವೇಗಿಗಳ ಪ್ರದರ್ಶನವೂ ನಿರ್ಣಾಯಕ..!
ಇಂಗ್ಲೆಂಡ್​ನ ಸ್ಪೀಡ್​ ಪಿಚ್​​ನಲ್ಲಿ ಆಡೋಕೆ ಉಭಯ ತಂಡಗಳು ಬಲಿಷ್ಠ ವೇಗದ ವಿಭಾಗವನ್ನೇ ಹೊಂದಿವೆ. ಟ್ರೆಂಟ್​​ ಬೋಲ್ಟ್​​, ಟಿಮ್​ ಸೌಥಿ, ನೇಲ್​ ವ್ಯಾಗ್ನರ್​​ ಕಿವೀಸ್​​ ಬಳಗದ ಶಕ್ತಿಯಾಗಿದ್ರೆ, ಮೊಹಮದ್​ ಶಮಿ, ಇಶಾಂತ್​ ಶರ್ಮಾ, ಜಸ್​​ಪ್ರೀತ್​ ಬೂಮ್ರಾ ಹಾಗೂ ಮೊಹಮದ್​​ ಸಿರಾಜ್​ ಭಾರತದ ಬಲವಾಗಿದ್ದಾರೆ. ಫೈನಲ್​ ಪಂದ್ಯಕ್ಕೆ ಪಿಚ್​ ಸಿದ್ಧಪಡಿಸಿರುವ ಕ್ಯುರೇಟರ್​ ಈಗಾಗಲೇ ಪೇಸ್​ ಹಾಗೂ ಬೌನ್ಸ್​​ ಹೆಚ್ಚಾಗಿರುತ್ತೇ ಎಂದು ಹೇಳಿದ್ದಾರೆ. ಹೀಗಾಗಿ ವೇಗದ ವಿಭಾಗ ನೀಡೋ ಪ್ರದರ್ಶನವೂ ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರೋದ್ರಲ್ಲಿ ಅನುಮಾನವೇ ಇಲ್ಲ​.

ಗೇಮ್ ​ಚೇಂಜರ್ಸ್​ ಆಗ್ತಾರೆ ಆಲ್​ರೌಂಡರ್ಸ್​​..!
ಯೆಸ್​​​​..! ಉಭಯ ತಂಡಗಳ ಮೇಜರ್​ ಸ್ಟ್ರೆಂಥ್​ ಇರೋದೆ ಆಲ್​ರೌಂಡರ್​ ವಿಭಾಗದಲ್ಲಿ. ಆದ್ರೆ, ಕಿವೀಸ್​​ ಪಡೆಗೆ ಸ್ಪೀಡ್​ ಆಲ್​ರೌಂಡರ್​​ಗಳಾದ ಕೈಲ್​ ಜೆಮಿಸನ್​, ಗ್ರಾಂಡ್​ ಹೋಮ್​ ಕಿವೀಸ್​​ ಪಡೆಯ ಬಲವಿದ್ರೆ, ಬಾರತಕ್ಕೆ ಸ್ಪಿನ್​ ಆಲ್​ರೌಂಡರ್​​​ಗಾಳಾದ ಅಶ್ವಿನ್​, ಜಡೇಜಾ ಶಕ್ತಿಯಿದೆ. ಪಿಚ್​ ವೇಗಿಗಳಿಗೆ ಸಹಕಾರಿ ಅನ್ನೋದ್ರೊಂದಿಗೆ, ದಿನ ಕಳೆದಂತೆ ಸ್ಪಿನ್ನರ್​​ಗಳಿಗೂ ನೆರವಾಗಲಿದೆ ಎನ್ನಲಾಗ್ತಿದೆ. ಹೀಗಾಗಿ ಆಲ್​ರೌಂಡರ್​​ಗಳು ಗೇಮ್​ ಚೈಂಜರ್ಸ್​​ಗಳಾಗೋ ಸಾಧ್ಯತೆ ದಟ್ಟವಾಗಿದೆ. ಆದ್ರೆ, ಈ ಸ್ಪಿನ್​ – ಸ್ಪೀಡ್​​ ಫೈಟ್​​ನಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋದಷ್ಟೇ ಕುತೂಹಲ.

ಯಂಗ್​ ವಿಕೆಟ್​ ಕೀಪರ್ಸ್​​ ಮೇಲಿದೆ ಅಪಾರ ನಿರೀಕ್ಷೆ..!
ಕಳೆದ ಆಸ್ಟ್ರೇಲಿಯಾ ಪ್ರವಾಸ ಹಾಗೂ ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಸಾಲಿಡ್​​ ಪರ್ಫಾಮೆನ್ಸ್​ ನೀಡಿದ ರಿಷಭ್​ ಪಂತ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಕೆಳ ಕ್ರಮಾಂಕದಲ್ಲಿ ಸ್ಪೋಟಕ ಇನ್ನಿಂಗ್ಸ್​ ಕಟ್ಟಬಲ್ಲ ಪಂತ್​ ಇಡೀ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಇತ್ತ ಕಿವೀಸ್​ ಕೀಪರ್​​ ಬಿಜೆ ವಾಟ್ಲಿಂಗ್​ ಕೂಡ ಉತ್ತಮ ಟೆಸ್ಟ್​ ಬ್ಯಾಟ್ಸ್​​ಮನ್​, ಕೀಪರ್​ ಆಗಿಯೂ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಮಿಂಚಿದ್ದಾರೆ. ಈ ಇಬ್ಬರ ಬ್ಯಾಟಿಂಗ್​ ಹಾಗೂ ಕೀಪಿಂಗ್​ ಕೌಶಲ್ಯಕ್ಕೂ ಪಂದ್ಯ ಗೆಲುವನ್ನ ನಿರ್ಧರಿಸೋ ಶಕ್ತಿಯಿದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ.

ಇವರೆಲ್ಲರ ಹೊರತಾಗಿಯೂ ಪಂದ್ಯದ ಗತಿಯನ್ನ ಬದಲಿಸಬಲ್ಲ ಬ್ಯಾಟ್ಸ್​​ಮನ್​ಗಳ ಬೆಂಬಲ ಉಭಯ ತಂಡಗಳಿಗೂ ಇದೆ ಅನ್ನೋದನ್ನ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ನಲ್ಲಿ ಯಾರು ಗೇಮ್ ​ಚೇಂಜರ್ಸ್​​ಗಳಾಗ್ತಾರೆ ಅನ್ನೋ ಕುತೂಹಲ ವಿಶ್ವ ಕ್ರಿಕೆಟ್​ ಲೋಕದಲ್ಲಂತೂ ಇದೆ. ಆ ಕುತೂಹಲಕ್ಕೆ ಉತ್ತರ 5 ದಿನಗಳ ಪಂದ್ಯದಲ್ಲಿ ಸಿಗಲಿದೆ.

The post WTC ಫೈನಲ್​​​​ ಫೈಟ್​​; ಅಗ್ರೆಸ್ಸಿವ್​ ಕೊಹ್ಲಿ- ಕೂಲ್​ ಕೇನ್​, ಇಬ್ಬರ ಮೇಲಿದೆ ಎಲ್ಲರ ಕಣ್ಣು appeared first on News First Kannada.

Source: newsfirstlive.com

Source link