ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಹೈವೋಲ್ಟೆಜ್​ ಕದನಕ್ಕಾಗಿ ಬಹು ದಿನಗಳಿಂದ ಕಾದಿದ್ದ ಅಭಿಮಾನಿಗಳ ಪಾಲಿಗೆ ನಿನ್ನೆ ನಿರಾಸೆಯ ದಿನ. ಮಳೆಯಿಂದಾಗಿ ಆದ ಬೇಸರವನ್ನ​​ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ಮೇಲೆ ಅಭಿಮಾನಿಗಳಿಗೆ ಆಕ್ರೋಶ ಹುಟ್ಟುವಂತೆ ಮಾಡಿದೆ. ಮಳೆ ಬಂದು ಮಹತ್ವದ ಪಂದ್ಯದ ಮೊದಲ ದಿನ ವಾಷ್​ಔಟ್​ ಆಗಿದ್ದು ಮಾತ್ರವಲ್ಲ. ಐಸಿಸಿ ಮೇಲಿನ ಫ್ಯಾನ್ಸ್​ ಆಕ್ರೋಶಕ್ಕೆ ಇನ್ನೂ ಹಲವು ಕಾರಣಗಳಿವೆ.

ಆರಂಭವಾದ 144 ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​​ನ ಸುಲ್ತಾನ್​ ಯಾರು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಯತ್ನಕ್ಕೆ ಮೊದಲ ಹಿನ್ನಡೆಯಾಗಿದೆ. ಸುದೀರ್ಫ 2 ವರ್ಷಗಳ ಕಾಲ 9 ತಂಡಗಳ ನಡುವೆ ಫೈಟ್​​ ನಡೆದು ಫೈನಲ್​ ಹಂತಕ್ಕೆ ತಲುಪಿದ್ದ ಟೂರ್ನಿ ವರುಣನ ಅವಕೃಪೆಗೆ ಒಳಗಾಗಿದೆ. ಅಭಿಮಾನಿಗಳು ಬಹು ನಿರೀಕ್ಷೆಯನ್ನಿಟ್ಟುಕೊಂಡು ಕಾದಿದ್ದ ಪಂದ್ಯದ ಮೊದಲ ದಿನ ಸಂಪೂರ್ಣ ಮಳೆಗಾಹುತಿಯಾಗಿದೆ.

ಟೆಸ್ಟ್​ ಚಾಂಪಿಯನ್​ಶಿಪ್​ ಮೊದಲ ದಿನ ಮಳೆಗಾಹುತಿ..!
ಐಸಿಸಿ ಮೇಲೆ ಅಭಿಮಾನಿಗಳ ಆಕ್ರೋಶ..!

ಬಹಳ ನಿರೀಕ್ಷೆಯನ್ನಿಟ್ಟುಕೊಂಡ ವಿಶ್ವ ಕ್ರಿಕೆಟ್​​ ಲೋಕವೇ ಕಾದಿದ್ದ ಮಹತ್ವದ ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದ್ದು, ಫ್ಯಾನ್ಸ್​​ ವಲಯದಲ್ಲಿ ನಿರಾಸೆಯನ್ನುಂಟು ಮಾಡಿದೆ. ಆ ಡಿಸಪಾಯಿಂಟ್ ​​ ಅಂತಾರಾಷ್ಟ್ರೀಯ ಕ್ರಿಕೆಟ್​​ ಕೌನ್ಸಿಲ್​ ಮೇಲಿನ ಆಕ್ರೋಶವಾಗಿಯೂ ಬದಲಾಗಿದೆ. ನಿನ್ನೆಯ ದಿನದಾಟಕ್ಕೆ ವರುಣನ ಅಡ್ಡಿಪಡಿಸುತ್ತಿದ್ದಂತೆ ಅಭಿಮಾನಿಗಳು ಐಸಿಸಿ ನಿಯಮಗಳನ್ನ ಟೀಕಿಸಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಂತೂ ಸಿಕ್ಕಾಪಟ್ಟೆ ಟ್ರೋಲ್​ ಮಾಡ್ತಿದ್ದಾರೆ.

ನಿನ್ನೆಯ ಪಂದ್ಯ ಮಳೆಗಾಹುತಿ ಆಗುತ್ತಿದ್ದಂತೆ ಅಭಿಮಾನಿಗಳು ಹೀಗೆ ಟ್ರೋಲ್​ ಮೂಲಕ ಆಕ್ರೋಶವನ್ನ ವ್ಯಕ್ತಪಡಿಸ್ತಿದ್ದಾರೆ. ಮಹತ್ವದ ಟೂರ್ನಿಗಳನ್ನ ಆಯೋಜಿಸುವ ಐಸಿಸಿಗೆ ಸರಿಯಾದ ರೂಪುರೇಷಗಳನ್ನ ಸಿದ್ಧಪಡಿಸಲು ಬರಲ್ಲ ಅನ್ನೋದು ಅಭಿಮಾನಿಗಳ ವಾದವಾಗಿದೆ. ಇಂಗ್ಲೆಂಡ್​ನಲ್ಲಿ ಈಗ ಮಳೆಗಾಲ. ಇಂತಹ ವಾತಾವರಣದಲ್ಲಿ ಮಹತ್ವದ ಟೂರ್ನಿಯ ಫೈನಲ್​ ಪಂದ್ಯವನ್ನ ಆಯೋಜಿಸಿದ್ದು ಎಷ್ಟು ಸರಿ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ.

ಮೊದಲ ದಿನ ಮಾತ್ರವಲ್ಲ.. ಉಳಿದ ಐದೂ ದಿನವೂ ಮಳೆ ಕಾಟ..!
ಮೊದಲ ದಿನದ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿರೋದ್ರಿಂದ ರಿಸರ್ವ್​​ ಡೇ ಅನ್ನೂ ಬಳಸಿಕೊಂಡು 5 ದಿನಗಳ ಆಟವನ್ನಾಡಲು ಅವಕಾಶವಿದೆ. ಆದ್ರೆ, ವರುಣ ಅದಕ್ಕೆ ಅವಕಾಶ ನೀಡೋದು ಬಹುತೇಕ ಅನುಮಾನ. ಮುಂದಿನ 5 ದಿನಗಳ ಕಾಲವೂ ಸೌತ್​​ಹ್ಯಾಂಪ್ಟನ್​ನಲ್ಲಿ ಮಳೆ ಬರಲಿದೆ ಅನ್ನೋದನ್ನ ವೆದರ್​ ರಿಪೋರ್ಟ್​​ ಹೇಳ್ತಾಯಿದೆ.

ಸೌತ್​​ಹ್ಯಾಂಪ್ಟನ್​ ಹವಾಮಾನ
ಗರಿಷ್ಠ             ಕನಿಷ್ಠ
ಶನಿವಾರ               15                 14
ಭಾನುವಾರ           18                 13
ಸೋಮವಾರ        17                  11
ಮಂಗಳವಾರ        16                  09
ಬುಧವಾರ             19                  11

ಇಂದಿನ ಹವಾಮಾನದ ವರದಿ ಪ್ರಕಾರ ಸೌತ್​​ಹ್ಯಾಂಪ್ಟನ್​ನ ತಾಪಮಾನ ಗರಿಷ್ಠ 15 ಹಾಗೂ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್​ ಆಗಿದ್ರೆ, ನಾಳೆ ಗರಿಷ್ಠ 18 ಹಾಗೂ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್​ ಇರಲಿದೆ. ಇನ್ನು ಸೋಮವಾರದ ತಾಪಮಾನ ಕನಿಷ್ಠ 18 ಹಾಗೂ ಗರಿಷ್ಠ 13 ಡಿಗ್ರಿ ಸೆಲ್ಸಿಯಸ್​​ ಆಗಿದ್ರೆ, ಮಂಗಳವಾರ ಗರಿಷ್ಠ 16 ಹಾಗೂ ಕನಿಷ್ಠ 9, ಬುಧವಾರ ಗರಿಷ್ಠ 19, ಕನಿಷ್ಠ 11 ಡಿಗ್ರಿ ಸೆಲ್ಸಿಯಸ್​ನಷ್ಟಿದೆ. ಈ ಐದೂ ದಿನವೂ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ.

2019ರ ವಿಶ್ವಕಪ್ ಟೂರ್ನಿಯಲ್ಲೂ ಕಾಡಿದ್ದ ಮಳೆ..!
4 ಪಂದ್ಯ ವಾಷ್​ಔಟ್​​, 3 ಪಂದ್ಯದ ಗೆಲುವು ನಿರ್ಧರಿಸಿದ್ದ DLS..!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ದಿನಕ್ಕೆ ಮಳೆ ಕಾಡಿದ ಒಂದೇ ಕಾರಣಕ್ಕೆ ಅಭಿಮಾನಿಗಳು ಟೀಕಾ ಪ್ರಹಾರ ನಡೆಸಿಲ್ಲ. ಕಳೆದ ಏಕದಿನ ವಿಶ್ವಕಪ್​ ಆಯೋಜನೆಯಲ್ಲೂ ಐಸಿಸಿ ಎಡವಿತ್ತು. 2019ರ ಏಕದಿನ ವಿಶ್ವಕಪ್​ ಟೂರ್ನಿಯನ್ನೂ ಮಳೆಗಾಲದ ಸಂದರ್ಭದಲ್ಲೇ ಇಂಗ್ಲೆಂಡ್​​ನಲ್ಲಿ ಐಸಿಸಿ ಆಯೋಜಿಸಿತ್ತು. ಆ ಸಮಯದಲ್ಲೂ 4 ಪಂದ್ಯಗಳು ಮಳೆಯಿಂದಾಗಿ ವಾಷ್​ಔಟ್​ ಆಗಿದ್ರೆ, 3 ಪಂದ್ಯಗಳ ಗೆಲುವನ್ನ ಡಕ್​ ವರ್ತ್​​​​ ಲೂಯಿಸ್​​​ ನಿಯಮದಡಿ ನಿರ್ಧರಿಸಲಾಗಿತ್ತು.

ಮಳೆಯ ಕಾರಣ ಒಂದೆಡೆಯಾದ್ರೆ, ಟೂರ್ನಿಯ ಆಯೋಜನೆಯ ರೂಪುರೇಶೆಗಳನ್ನ ಐಸಿಸಿ ಸರಿಯಾಗಿ ನಿರ್ಧರಿಸಲ್ಲ ಅನ್ನೋದು ಕೂಡ ಟೀಕೆಗೆ ಕಾರಣವಾಗಿದೆ. ಸುದೀರ್ಘ 2 ವರ್ಷಗಳ ಕಾಲ, 9 ತಂಡಗಳ ನಡುವೆ ಲೀಗ್​ ಹಂತದಲ್ಲಿ 61 ಪಂದ್ಯಗಳು ನಡೆದಿವೆ. ಇದರಲ್ಲಿ ಅಂಕಪಟ್ಟಿಯ ಪರ್ಸಂಟೇಜ್​ ಆಧಾರದಲ್ಲಿ 2 ತಂಡಗಳು ಫೈನಲ್​ಗೆ ಬಂದಿವೆ. ಇಷ್ಟು ಸುದೀರ್ಘ ಅವಧಿ ಸಾಗಿಬಂದ ಟೂರ್ನಿಯ ವಿಜೇತರನ್ನ ಒಂದೇ ಪಂದ್ಯದಿಂದ ನಿರ್ಧರಿಸೋದು ಸರಿಯಲ್ಲ ಅನ್ನೋದು ವಾದವನ್ನ ಮಂಡಿಸಲಾಗಿದೆ.

ಒಂದು ವೇಳೆ 3 ಪಂದ್ಯಗಳ ಸರಣಿಯನ್ನಾಡಿಸಿದ್ರೆ, ಒಂದು ಪಂದ್ಯ ರದ್ದು ಅಥವಾ ಟೈ ಆದ್ರೂ ಇನ್ನುಳಿದ ಪಂದ್ಯಗಳಲ್ಲಾದ್ರೂ ಚಾಂಪಿಯನ್​ ತಂಡವನ್ನ ನಿರ್ಧರಿಸಬೇಕಿತ್ತು ಅನ್ನೋದು ಲಾಜಿಕ್​. ಸಚಿನ್​ ತೆಂಡೂಲ್ಕರ್​, ಯುವರಾಜ್​ ಸಿಂಗ್​, ರವಿಶಾಸ್ತ್ರಿ, ವಿರಾಟ್​​ ಕೊಹ್ಲಿ ಸೇರಿದಂತೆ ಹಲ ದಿಗ್ಗಜರು ಕೂಡ ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಎಲ್ಲಾ ಅಂಶಗಳನ್ನ ಗಮನಿಸಿದ್ರೆ, ಸರಿಯಾದ ರೂಪುರೇಶೆ ಸಿದ್ಧಪಡಿಸಿ ಮಹತ್ವದ ಟೂರ್ನಿಯನ್ನ ಆಯೋಜನೆ ಮಾಡುವಲ್ಲಿ ಐಸಿಸಿ ಎಡವಿರೋದು ಸ್ಪಷ್ಟವಾಗಿ ತಿಳಿದು ಬರ್ತಿದೆ. ಮುಂದೆಯಾದ್ರೂ ತಪ್ಪುಗಳನ್ನ ಐಸಿಸಿ ಸರಿಪಡಿಸಿಕೊಳ್ಳುತ್ತಾ..? ಕಾದು ನೋಡಬೇಕಿದೆ.

The post WTC ಫೈನಲ್​​​​ ಫೈಟ್​​ ಮೊದಲ ದಿನ ಮಳೆಗಾಹುತಿ -ಐಸಿಸಿ ಮೇಲೆ ಅಭಿಮಾನಿಗಳ ಆಕ್ರೋಶ appeared first on News First Kannada.

Source: newsfirstlive.com

Source link