ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟಾಸ್​​ ಗೆದ್ದಿರುವ ನ್ಯೂಜಿಲೆಂಡ್​ ತಂಡ ಫೀಲ್ಡಿಂಗ್​ ಆಯ್ದುಕೊಂಡಿದೆ. ನಿನ್ನೆಯಿಂದಲೇ ಆರಂಭವಾಗಬೇಕಿದ್ದ ಮಹತ್ವದ ಪಂದ್ಯ ಮಳೆಯಿಂದಾಗಿ ಶುರುವಾಗಿರಲಿಲ್ಲ. ಸೌತಾಂಪ್ಟನ್‌ನಲ್ಲಿ ತೀವ್ರ ಮಳೆ ಇದ್ದಿದ್ದರಿಂದ ನಿನ್ನೆ ಟಾಸ್ ಕೂಡ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅಧಿಕೃತವಾಗಿ ಪಂದ್ಯ ಇಂದಿನಿಂದ ಆರಂಭವಾಗುತ್ತಿದ್ದು, ಟಾಸ್​ ಗೆದ್ದ ನ್ಯೂಜಿಲೆಂಡ್​ ತಂಡ ಬೌಲಿಂಗ್​ ಮಾಡಲು ನಿರ್ಧರಿಸಿದೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ಕೇನ್​, ಹವಾಮಾನ ಹಾಗೂ ಪಿಚ್​ ಸ್ಥಿತಿ ಆಶಾದಾಯಕವಾಗಿದ್ದು, ಪಂದ್ಯದ ಮೊದಲ ಒಂದು ಗಂಟೆಯ ಅವಧಿಯನ್ನು ನಾವು ಉತ್ತಮವಾಗಿ ಬಳಸಿಕೊಳ್ಳಬಹುದು. ಸ್ವಲ್ಪ ಸೀಮ್ ಕೂಡ ಪಡೆಯಬಹುದು ಎಂದು ಹೇಳಿದ್ದಾರೆ.  ಫೈನಲ್​ ಕದನಕ್ಕಾಗಿ ಬಹು ದಿನಗಳಿಂದ ಕಾದಿದ್ದ ಅಭಿಮಾನಿಗಳ ಪಾಲಿಗೆ ನಿನ್ನೆ ನಿರಾಸೆಯ ಉಂಟಾಗಿತ್ತು. ಮೊದಲ ದಿನದ ಪಂದ್ಯಕ್ಕೆ ವರುಣ ಅಡ್ಡಿ ಪಡಿಸಿರೋದ್ರಿಂದ ರಿಸರ್ವ್​​ ಡೇ ಅನ್ನೂ ಬಳಸಿಕೊಂಡು 5 ದಿನಗಳ ಆಟವನ್ನಾಡಲು ಅವಕಾಶವಿದೆ. ಆದ್ರೆ, ವರುಣ ಅದಕ್ಕೆ ಅವಕಾಶ ನೀಡೋದು ಬಹುತೇಕ ಅನುಮಾನ. ಮುಂದಿನ 5 ದಿನಗಳ ಕಾಲವೂ ಸೌತ್​​ಹ್ಯಾಂಪ್ಟನ್​ನಲ್ಲಿ ಮಳೆ ಬರಲಿದೆ ಅನ್ನೋದನ್ನ ವೆದರ್​ ರಿಪೋರ್ಟ್​​ ಹೇಳ್ತಾಯಿದೆ.

ಫೈನಲ್​ ಪಂದ್ಯದಲ್ಲಿ 6 ಬ್ಯಾಟ್ಸ್​ಮನ್​ಗಳು, ಇಬ್ಬರು ಸ್ಪಿನ್​ ಆಲ್​ರೌಂಡರ್​​ಗಳು, 3 ವೇಗಿಗಳ ಸಂಯೋಜನೆಯಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ.

ಎದುರಾಳಿ ನ್ಯೂಜಿಲೆಂಡ್​ ತಂಡ 6 ಬ್ಯಾಟ್ಸ್​ಮನ್​ಗಳು, ಇಬ್ಬರು ಸ್ಪೀಡ್​​ ಆಲ್​ರೌಂಡರ್​ಗಳು ಹಾಗೂ ಮೂವರು ವೇಗಿಗಳ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯಲಿದೆ.

The post WTC ಫೈನಲ್​​​​ ಫೈಟ್; ಟಾಸ್​​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್​ appeared first on News First Kannada.

Source: newsfirstlive.com

Source link