IPL ಅರ್ಧಕ್ಕೆ ರದ್ದಾದ ಬೆನ್ನಲ್ಲೆ ಟೀಮ್​ ಇಂಡಿಯಾ ಹೊಸ ಸವಾಲಿಗೆ ಸಿದ್ಧಗೊಂಡಿದೆ. ಆಸಿಸ್​​ ಮತ್ತು ಇಂಗ್ಲೆಂಡ್​ ಸರಣಿಯ ಸವಾಲನ್ನ ಸಮರ್ಥವಾಗಿ ಮೆಟ್ಟಿನಿಂತಿದ್ದ ಟೀಮ್ ಇಂಡಿಯಾ, ಈಗ ವರ್ಲ್ಡ್​ ಟೆಸ್ಟ್​ ಚಾಂಪಿಯನ್​​ಶಿಪ್​​ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ರಣತಂತ್ರ ರೂಪಿಸಿದೆ. ಜೊತೆಗೆ ಇಂಗ್ಲೆಂಡ್​ ಎದುರಿನ ಟೆಸ್ಟ್​​​ ಸರಣಿಗೂ ಗೇಮ್​ ಪ್ಲಾನ್​ ಹಾಕಿಕೊಂಡಿದೆ. ಹೀಗಾಗಿ ಪ್ರಕಟಿಸಿರುವ ತಂಡದಲ್ಲಿ ಐವರು ವೇಗಿಗಳಿಗೆ ಮಣೆ ಹಾಕಿರೋದು ಹೊಸ ಮನ್ವಂತರ ಸೃಷ್ಟಿಗೂ ಕಾರಣವಾಗಿದೆ.

ಹೌದು..! ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಗೊಂಡಿರುವ ತಂಡದಲ್ಲಿ ಬಿಸಿಸಿಐ ಬಿಗ್​​ಬಾಸ್​ಗಳು, ಮೊಹಮ್ಮದ್​ ಶಮಿ, ಜಸ್​ಪ್ರಿತ್​ ಬೂಮ್ರಾ, ಉಮೇಶ್​ ಯಾದವ್​, ಇಶಾಂತ್​ ಶರ್ಮಾ ಮತ್ತು ಮೊಹಮ್ಮದ್​ ಸಿರಾಜ್​ಗೆ ಮಣೆಹಾಕಿದ್ದಾರೆ. ಈ ವೇಗಿಗಳ ಆಯ್ಕೆ ಉತ್ತಮ ನಿರ್ಧಾರ ಅಂತಾನೇ ಕ್ರಿಕೆಟ್​ ಪಂಡಿತರು ಬಣ್ಣಿಸುತ್ತಿದ್ದಾರೆ. ಇಂಗ್ಲೆಂಡ್​ನ ಇನ್​ಸ್ವಿಂಗ್​​ ಪಿಚ್​​ಗಳಲ್ಲಿ ತಂತ್ರಗಳನ್ನು ರೂಪಿಸಲು ಈ ಪಂಚಾಸ್ತ್ರಗಳು ಸಹಾಯಕವಾಗಲಿದೆ. ಹಾಗಾಗಿ ಆಯ್ಕೆ ಸಮಿತಿಯು ಉತ್ತಮ ನಿಲುವನ್ನೇ ತಳೆದಿದೆ ಎನ್ನಲಾಗ್ತಿದೆ. ಆದ್ರಲ್ಲೂ ಭಾರತೀಯ ಕ್ರಿಕೆಟ್​​ ಮಂಡಳಿಯ ಈ ನಡೆ, 5 ದಶಕಗಳ ಹಿಂದಿನ ಗೇಮ್​ಪ್ಲಾನ್ ಅಂತಾನೇ ಕ್ರಿಕೆಟ್ ಅಂಗಳದಲ್ಲಿ ವಿಶ್ಲೇಷಿಸುತ್ತಿದ್ದಾರೆ

1970 ಸ್ಟ್ರಾಟಜಿ ಮೊರೆ ಹೋದ ಟೀಮ್​ ಇಂಡಿಯಾ..!
ಹೌದು..! ನಾಲ್ಕು ತಿಂಗಳ ಪ್ರವಾಸಕ್ಕೆ ಆಯ್ಕೆಯಾಗಿರುವ ಪಂಚಾಸ್ತ್ರಗಳ ಕಾಂಬಿನೇಷನ್, 1970-75ರ ಅವಧಿಯ ಕಾಂಬಿನೇಷನ್ ಆಗಿದೆ. 1970-75ರ ಅವಧಿಯಲ್ಲಿ ಐವರು ವೇಗಿ​​ಗಳನ್ನು ಆಯ್ಕೆ​ ಮಾಡಿ, ರೂಪಿಸಿದ ಸ್ಟ್ರಾಟಜಿ ಟೆಸ್ಟ್​​ನಲ್ಲಿ ಪಾಸಾಗಿತ್ತು. ಈಗ ಕೂಡ ಅದೇ ಸ್ಟ್ರಾಟಜಿ ಜೊತೆಗೆ ತಂಡವನ್ನು ಕಣಕ್ಕಿಳಿಸಲು ಟೀಮ್​ ಇಂಡಿಯಾ ಪ್ಲಾನ್​ ರೂಪಿಸಿದೆ. ಆಗಾಗಿಯೇ ಇನ್​ಸ್ವಿಂಗ್​ಗೆ​​ ನೆರವಾಗುವ ಇಂಗ್ಲೀಷ್​​​ ಪಿಚ್​​ಗಳಲ್ಲಿ ಸ್ವಿಂಗ್​ಸ್ಟಾರ್​ ಮಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್​ಪ್ರೀತ್​ ಬೂಮ್ರಾ ಜೊತೆಗೆ ಲೈನ್​ ಆ್ಯಂಡ್ ಲೆನ್ತ್​ನಲ್ಲಿ ದಾಳಿ ಸಂಘಟಿಸುವ ಉಮೇಶ್​, ಸಿರಾಜ್​​ಗೆ ಮಣೆಹಾಕಲಾಗಿದೆ.

ಪ್ರಸ್ತುತ ಆಯ್ಕೆಯಾದ ಬೌಲರ್​​ಗಳ ಕೊಡುಗೆ ಅಸಾಧಾರಣ. ಈ ವೇಗಿಗಳಿಂದ ಒಟ್ಟಾರೆ 700 ವಿಕೆಟ್​ಗಳ ಸಾಧನೆಯಾಗಿದೆ. 1970-75ರಲ್ಲೂ ಇದೇ ರೀತಿ, 700 ವಿಕೆಟ್​ಗಳ ಬಲವನ್ನು ಟೀಮ್​ ಇಂಡಿಯಾ ಹೊಂದಿತ್ತು. ಆ ಮೂಲಕ ಬಿಷನ್​ ಸಿಂಗ್​ ಬೇಡಿ, ಭಾಗ್ವತ್​ ಚಂದ್ರಶೇಖರ್, ಕಪಿಲ್​​ ದೇವ್​, ಎರ್ರಪಳ್ಳಿ ಪ್ರಸನ್ನ, ವೆಂಕಟ ರಾಘವನ್​ ಈ ಹೊಸ ಕ್ರಾಂತಿಗೆ ಕಾರಣೀಭೂತರಾಗಿದ್ದರು. ಆದರೆ ಸ್ಟ್ರಾಟಜಿ ವರ್ಕೌಟ್​ ಆಗುತ್ತಾ ಮುಂದೆ ಗೊತ್ತಾಗಲಿದೆ.

2018ರಲ್ಲಿ ಆಸಿಸ್​ ವಿರುದ್ಧ ಕಣಕ್ಕಿಳಿದಿದ್ದ ವೇಗಿಗಳೇ ತಂಡದ ಬಲ..!
2018ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ಕಣಕ್ಕಿಳಿದಿದ್ದ ವೇಗಿಗಳನ್ನೇ ಈ ಸರಣಿಗೂ ಆಯ್ಕೆ ಮಾಡಿರೋದು ಮತ್ತೊಂದು ವಿಶೇಷ. ಇಶಾಂತ್​, ಶಮಿ, ಬೂಮ್ರಾ ಮತ್ತು ಉಮೇಶ್​ ಸರಣಿಗೆ ಗೆಲುವಿಗೆ ಮಹತ್ವದ ಪಾತ್ರವಹಿಸಿದ್ದರು. ಆದರೆ ಈ ಗುಂಪಿಗೆ​ ಸಿರಾಜ್​ ಹೊಸಬರು. ಹಾಗಂತ ಎಲ್ಲಾ ವೇಗಿಗಳು ಆಡುವ 11ರ ಬಳಗದಲ್ಲಿ ಆಡುವುದು ಅಸಾಧ್ಯ.

ಬೌಲರ್​ಗಳಿಗೆ ಕಾಡ್ತಿದೆ ಇಂಜುರಿ ಚಿಂತೆ..!
ವಿದೇಶಿ ಪಿಚ್​​ಗಳಲ್ಲಿ ನಾಲ್ವರು ಗುಣಮಟ್ಟದ ವೇಗಿಗಳನ್ನು ಕಣಕ್ಕಿಳಿಸಲು ಈಗಲೂ ಟೀಮ್​ ಇಂಡಿಯಾ, ಹೆಣಗಾಡ್ತಿದೆ. 2020ರ ಆಸಿಸ್​ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಇಶಾಂತ್​ ಮತ್ತು​ ಪ್ರಾರಂಭದ ನಂತರ ಇಂಜುರಿಯಾಗಿ ಶಮಿ, ಉಮೇಶ್​ ಸರಣಿಯಿಂದ ಹೊರಗುಳಿದಿದ್ದರು. ಬೂಮ್ರಾ ಕೂಡ ನಾಲ್ಕು ಟೆಸ್ಟ್​​ಗಳಲ್ಲಿ ಆಡಿರಲಿಲ್ಲ. ಆಗ ಸಿರಾಜ್​ ಒಬ್ಬರೇ, ಹೋರಾಡಿದ್ದರು. ಅವರಿಗಿಂತ ಸಿರಾಜ್​ಗೆ ಕಡಿಮೆ ಅನುಭವ ಹೊಂದಿರಬಹುದು. ಆದರೆ ಆಸ್ಟ್ರೇಲಿಯಾ ಪಿಚ್​​ನಲ್ಲಿ ನಡೆಸಿದ ಬೌಲಿಂಗ್ ದಾಳಿ​ ಅವೆಲ್ಲವನ್ನೂ ಮೆಟ್ಟಿ ನಿಲ್ಲುವಂತಿತ್ತು.

ಇಂಗ್ಲೆಂಡ್​ ಪ್ರಯಾಣ ಬೆಳೆಸಲು, ಇನ್ನೂ 22 ದಿನಗಳು ಬಾಕಿ ಇದೆ. ಆಗಲೇ ನಾಯಕ ವಿರಾಟ್​ ಕೊಹ್ಲಿಗೆ ಚಿಂತೆಯಾಗಿದೆ. ಕೋವಿಡ್​ ಸಮಯ ಮತ್ತು ಬಯೋಬಬಲ್​​ನಿಂದ​ ಎದುರಾಗುವ ಸಮಸ್ಯೆಗಳಿಂದ ಒಬ್ಬ ಬೌಲರ್​​ ಆದ್ರು ತಂಡದಿಂದ ಹೊರಗುಳಿಯುವ ಭೀತಿ ಕೊಹ್ಲಿಗೆ ಶುರುವಾಗಿದೆ. ಎಲ್ಲಾ ವೇಗಿಗಳು ಫಿಟ್​​ ಆಗಿದ್ದರೆ ಮಾತ್ರ ಪ್ರಯಾಣ. ಏಕೆಂದರೆ ಇದಕ್ಕೂ ಹಿಂದಿನ ಸರಣಿಗಳಲ್ಲಿ ಇಂಜುರಿಯಿಂದ ವೇಗಿಗಳು ಹೊರಗುಳಿದಿದ್ದೇ ಇದಕ್ಕೆ ಕಾರಣ.

ಒಟ್ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಪ್ರಶಸ್ತಿ ಗೆಲುವಿಗೆ ವಿಭಿನ್ನ ಪ್ಲಾನ್​​ಗಳೊಂದಿಗೆ ಕಣಕ್ಕಿಳಿಯಲು ಟೀಮ್​ ಇಂಡಿಯಾ ಸಿದ್ಧವಾಗಿದೆ. ಒಂದು ವೇಳೆ ಗೇಮ್​ ಪ್ಲಾನ್​ ಸಕ್ಸಸ್​​ ಆದ್ರೆ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳೋದ್ರಲ್ಲಿ ಅನುಮಾನ ಇಲ್ಲ.

The post WTC ಫೈನಲ್​​ ಗೆಲ್ಲೋಕೆ ಟೀಮ್ ಇಂಡಿಯಾ ಹೊಸ ಪ್ಲಾನ್ ಏನು..? appeared first on News First Kannada.

Source: newsfirstlive.com

Source link