ಮಳೆಯ ಕಾಟ, ಬೆಳಕಿನ ಸಮಸ್ಯೆ..ಇದೆಲ್ಲದರ ನಡುವೆಯೂ ನಡೆದ ಐಸಿಸಿ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ 2ನೇ ದಿನದಾಟ ಮುಕ್ತಾಯವಾಗಿದೆ. ಸೌತ್​​ ಹ್ಯಾಪ್ಟಂನ್ ಮೈದಾನದಲ್ಲಿ ನಡೆದ ಐತಿಹಾಸಿಕ ಪಂದ್ಯದ 2ನೇ ದಿನದಾಟದ ಹೈಲೆಟ್ಸ್​ ಇಲ್ಲಿದೆ.

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಕದನಕ್ಕೆ ಮಳೆರಾಯ ಕೊನೆಗೂ ಅನುವು ಮಾಡಿಕೊಟ್ಟ. ವರುಣನ ಅವಕೃಪೆಯಿಂದ ಮೊದಲ ದಿನವಿಡೀ ವಾಷ್ ​ಔಟ್​ ಆಗಿತ್ತು. ಹೀಗಾಗಿ 2ನೇ ದಿನದಿಂದ ಆರಂಭವಾದ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದ್ವು.

ಸಾಲಿಡ್​​ ಓಪನಿಂಗ್​ ನೀಡಿದ ರೋಹಿತ್​-ಗಿಲ್​ ಜೋಡಿ
ಪಂದ್ಯದಲ್ಲಿ ಟಾಸ್​​ ಗೆದ್ದ ನ್ಯೂಜಿಲೆಂಡ್​ ತಂಡ ಫೀಲ್ಡಿಂಗ್​ ಆಯ್ದುಕೊಂಡ ಪರಿಣಾಮ ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್​ಗಿಳಿಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ- ಶುಭ್​ಮನ್​ ಗಿಲ್​ ಜೋಡಿ ಟೀಮ್​ ಇಂಡಿಯಾಗೆ ಸಾಲಿಡ್​ ಓಪನಿಂಗ್​ ನೀಡಿದ್ರು. ಕಿವೀಸ್​ ಬೌಲಿಂಗ್​ ಪಡೆಯ ಮೇಲೆ ದಾಳಿ ನಡೆಸಿದ ಈ ಜೋಡಿ ಮೊದಲ ವಿಕೆಟ್​​ಗೆ 62 ರನ್​ಗಳ ಕಾಣಿಕೆ ನೀಡಿದ್ರು.

ಕಮ್​ಬ್ಯಾಕ್​ ಸ್ಪೆಲ್​ ಮಾಡಿದ ಕಿವೀಸ್​​ ಬೌಲರ್ಸ್​​
ಆರಂಭದಲ್ಲಿ ಟೀಮ್​ ಇಂಡಿಯಾ ಬ್ಯಾಟ್ಸ್​​ಮ್ಯಾನ್​ಗಳು ಮೇಲುಗೈ ಸಾಧಿಸಿದ್ರೆ, ಮೊದಲ ಸೆಷನ್​ ಅಂತ್ಯದಲ್ಲಿ ಕಿವೀಸ್​ ಬೌಲರ್​ಗಳು ಕಮ್​ಬ್ಯಾಕ್​ ಮಾಡಿದ್ರು. ಕೈಲ್​ ಜೆಮಿಸನ್​, ನೇಲ್​ ವ್ಯಾಗ್ನರ್​ ಬ್ರೇಕ್​ ಥ್ರೂ ನೀಡುವಲ್ಲಿ ಯಶಸ್ಸಿಯಾದ್ರು. ಹಿಟ್​​ಮ್ಯಾನ್​ 34 ರನ್​ಗಳಿಸಿ ನಿರ್ಗಮಿಸಿದ್ರೆ, ಗಿಲ್​ ಅಟ 28 ರನ್​ಗಳಿಗೆ ಅಂತ್ಯವಾಯ್ತು.

ನಿರಾಸೆ ಮೂಡಿಸಿದ ಟೆಸ್ಟ್​ ಸ್ಪೆಷಲಿಸ್ಟ್​​ ಪೂಜಾರ
ಟೆಸ್ಟ್​ ಮಾದರಿಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಆಧಾರ ಎಂದೇ ಬಿಂಬಿತವಾಗಿರುವ ಚೇತೇಶ್ವರ್​​ ಪೂಜಾರ ನಿರಾಸೆ ಮೂಡಿಸಿದ್ರು. ಎದುರಿಸಿದ 36ನೇ ಎಸೆತದಲ್ಲಿ ಬೌಂಡರಿ ಮೂಲಕ ಖಾತೆ ತೆರೆದ ಪೂಜಾರ ಆಟ 8 ರನ್​ಗಳಿಗೆ ಅಂತ್ಯವಾಯ್ತು.

ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ನಾಯಕ-ಉಪನಾಯಕ
88 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ವಿರಾಟ್​​ ಕೊಹ್ಲಿ – ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದ್ರು. ಜವಾಬ್ಧಾರಿಯನ್ನರಿತು ಬ್ಯಾಟಿಂಗ್ ನಡೆಸಿದ ಈ ಜೋಡಿ ಪೈಟ್​​ಬ್ಯಾಕ್​ ಇನ್ನಿಂಗ್ಸ್​ ಕಟ್ಟಿದ್ರು. 44 ರನ್​​ಗಳೊಂದಿಗೆ ವಿರಾಟ್​​ ಕೊಹ್ಲಿ, 29 ರನ್​ಗಳೊಂದಿಗೆ ಅಜಿಂಕ್ಯಾ ರಹಾನೆ ಇಂದಿಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದು, ಈ ಜೋಡಿ ಅಜೇಯ 58 ರನ್​ಗಳ ಕಾಣಿಕೆ ನೀಡಿದೆ.

ಒಂದೆಡೆ ನಾಯಕ, ಉಪನಾಯಕ ಟೀಮ್​ ಇಂಡಿಯಾ ಸ್ಕೋರ್​​ ಹೆಚ್ಚಿಸ್ತಾ ಇದ್ರೆ, ಕಿವೀಸ್​​ ವೇಗಿಗಳು ವಿಕೆಟ್​ ಕಬಳಿಕೆಯ ಪ್ರಯತ್ನದಲ್ಲಿದ್ರು. ಆದ್ರೆ, ಟೀ ಬ್ರೇಕ್​ನ ಬಳಿಕ ಹವಾಮಾನ ಪಂದ್ಯವನ್ನಾಡಲು ಅವಕಾಶವನ್ನ ನೀಡಲಿಲ್ಲ. ಮಂದ ಬೆಳಕಿನ ಕಾರಣದಿಂದ ಮೊದಲ ದಿನದಾಟದ 33.2 ಓವರ್​​ಗಳು ಬಾಕಿ ಇರುವಂತೇ ಮುಗಿಸಲಾಯ್ತು.

ಒಟ್ಟಿನಲ್ಲಿ ಮೊದಲ ದಿನದಾಟದಲ್ಲಿ ಉಭಯ ತಂಡಗಳು ಸಮಬಲವನ್ನ ಸಾಧಿಸಿವೆ. ಆದ್ರೆ, ಭಾರತ-ನ್ಯೂಜಿಲೆಂಡ್​​ಗಿಂತ ವಾತಾವರಣವೇ ಇಡೀ ಪಂದ್ಯದ ಮೇಲಿನ ಹಿಡಿತವನ್ನ ಸಾಧಿಸಿರೋದು ಸ್ಪಷ್ಟ. ಹೀಗಾಗಿ ಇಂದಾದರೂ ಫುಲ್​ ಡೇ ಮ್ಯಾಚ್​​ಗೆ ವೆದರ್​​ ಸಪೋರ್ಟ್​​ ಮಾಡುತ್ತಾ ಕಾದುನೋಡಬೇಕು.

The post WTC ಫೈನಲ್​ ಪಂದ್ಯ -ಟೀಂ ಇಂಡಿಯಾಗೆ ಆಸರೆಯಾದ ನಾಯಕ-ಉಪನಾಯಕ appeared first on News First Kannada.

Source: newsfirstlive.com

Source link