ಇಂಡೋ-ಕಿವೀಸ್​​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​ಗೆ ವೇದಿಕೆ ಸಿದ್ಧವಾದ ದಿನದಿಂದ ಹೈವೋಲ್ಟೆಜ್​ ಫೈಟ್​​ ಫೈಟ್​​ನ ಕೀ ಪ್ಲೇಯರ್​ ಯಾರಾಗಲಿದ್ದಾರೆ ಅನ್ನೋದು ಚರ್ಚೆಯಲ್ಲಿರೋ ವಿಚಾರ. ಪ್ರತಿಯೊಬ್ಬ ತಜ್ಙರು ತಮ್ಮ ತಮ್ಮ ಅಭಿಪ್ರಾಯಗಳನ್ನ ಹೊರ ಹಾಕಿದ್ದಾರೆ. ನಾಯಕ ವಿರಾಟ್​, ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ, ಹಿಟ್​ಮ್ಯಾನ್​ ರೋಹಿತ್​, ಡೈನಾಮಿಕ್​ ಪಂತ್​ ಹೀಗೆ ಪ್ರತಿಯೊಬ್ಬ ಏಕ್ಸ್​ಪರ್ಟ್​​ಗಳ ನಿರೀಕ್ಷೆಯೂ ಒಬ್ಬೊಬ್ಬರ ಮೇಲೆ ನೆಟ್ಟಿದೆ. ಆದ್ರೆ, ಎದುರಾಳಿ ನ್ಯೂಜಿಲೆಂಡ್​​ ಚಿತ್ತ ನೆಟ್ಟಿರೋದು ಈ ಇಬ್ಬರು ಸ್ಪಿನ್​ ಆಲ್​ರೌಂಡರ್​​ಗಳ ಮೇಲೆ…!

ಕಿವೀಸ್​ ಕ್ಯಾಂಪ್​ನಲ್ಲಿ ತಂತ್ರ – ಪ್ರತಿತಂತ್ರಗಳ ಚರ್ಚೆ
ಜಡ್ಡು-ಅಶ್ವಿನ್​ ಎದುರಿಸೋದೇ ಬ್ಲ್ಯಾಕ್​​ಕ್ಯಾಪ್ಸ್​ ಮುಂದಿರೋ ಸವಾಲು

ಈಗಾಗಲೇ ಆಂಗ್ಲರ ನಾಡಲ್ಲಿ ಬೀಡು ಬಿಟ್ಟು ಇಂಗ್ಲೆಂಡ್​ ವಿರುದ್ಧದ ಸರಣಿಗೆ ತಯಾರಿ ನಡೆಸಿರುವ ಕಿವೀಸ್​ ಕ್ಯಾಂಪ್​, ಟೆಸ್ಟ್​​ ಚಾಂಪಿಯನ್​ ಶಿಪ್​ ಕಿರೀಟದ ಮೇಲೆ ಹೆಚ್ಚು ಕಣ್ಣಿಟ್ಟಿದೆ. ಬೆಸ್ಟ್​​ ಆಫ್​ ಬೆಸ್ಟ್​ ಎಂಬ ಸಿದ್ಧಾಂತದಲ್ಲಿ ಆಂಗ್ಲರ ವಿರುದ್ಧದ ಸರಣಿಯಲ್ಲೇ ತಂಡವನ್ನ ಆಯ್ಕೆ ಮಾಡಲು ಕಿವೀಸ್​​ ಪ್ಲಾನ್​ ನಡೆಸಿದೆ. ಜೊತೆಗೆ ಭಾರತೀಯ ಆಟಗಾರರ ವಿರುದ್ಧ ರಣಾಂಗಣದಲ್ಲಿ ಹಾಕಬೇಕಾದ ಪಟ್ಟುಗಳ ಬಗ್ಗೆಯೂ ಸೆಷನ್​ಗಳನ್ನ ನಡೆಸಿದೆ. ಅಲ್ಲಿ ಹೆಚ್ಚು ಚರ್ಚೆಯಾಗ್ತಿರೋದು ರವೀಂದ್ರ ಜಡೇಜಾ – ಆರ್​ಅಶ್ವಿನ್ ಬಗ್ಗೆ..!

ನಾವು ಪಂದ್ಯವನ್ನಾಡುತ್ತಿರುವುದು ತಟಸ್ಥ ಸ್ಥಳದಲ್ಲಿ. ಹೀಗಾಗಿ ನಾವು ಅಲ್ಲಿನ ಪಿಚ್​​ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಿದೆ. ಜೊತೆಗೆ ಅಶ್ವಿನ್​ ಹಾಗೂ ಜಡೇಜಾರನ್ನ ಎದುರಿಸಲು ಸಿದ್ಧರಾಗಬೇಕಿದೆ. ಅವರು ವಿಶ್ವದ ಎಲ್ಲಾ ಭಾಗಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಜೊತೆಗೂ ಸಮರ್ಥ ದಾಳಿ ಸಂಘಟಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ’.
-ಹೆನ್ರಿ ನಿಕೋಲಸ್​​, ನ್ಯೂಜಿಲೆಂಡ್​ ಬ್ಯಾಟ್ಸ್​​ಮನ್​

ಯೆಸ್​​..! ಇವು ನ್ಯೂಜಿಲೆಂಡ್​​ ತಂಡದ ಪ್ರಮುಖ ಬ್ಯಾಟ್ಸ್​ಮನ್​ ಹೆನ್ರಿ ನಿಕೋಲಸ್​​​ ಹೇಳಿದ ಮಾತುಗಳು. ಕೇವಲ ಈ ಇಬ್ಬರ ಸದ್ಯದ ಫಾರ್ಮ್​ ಆಧರಿಸಿ ಕಿವೀಸ್​ ಪಡೆ ಜಡೇಜಾ-ಅಶ್ವಿನ್​ ಜೋಡಿಯ ಬಗ್ಗೆ ಇಷ್ಟು ತಲೆಕೆಡಿಸಿಕೊಂಡಿಲ್ಲ. ನಿಕೊಲಸ್​ ಹೇಳಿದಂತೆ ಇವರು ವಿಶ್ವದ ಎಲ್ಲಾ ಭಾಗಗಳಲ್ಲೂ ನೀಡಿದ ಸ್ಥಿರ ಪ್ರದರ್ಶನ ಹಾಗಿದೆ. 2018ರ ಬಳಿಕ ಸೇನಾ ರಾಷ್ಟ್ರಗಳಲ್ಲಿ ಈ ಜೋಡಿ ನೀಡಿರೋ ಫರ್ಪಾಮೆನ್ಸ್​​ ಬ್ಯಾಕ್​​ಕ್ಯಾಪ್ಸ್​ ಪಾಳಯವನ್ನ ಚಿಂತೆಗೆ ದೂಡಿದೆ.

2018ರ ಬಳಿಕ ಸೇನಾ ರಾಷ್ಟ್ರಗಳಲ್ಲಿ ಅಶ್ವಿನ್​-ಜಡೇಜಾ
ಅಶ್ವಿನ್​                              ಜಡೇಜಾ
11                ಪಂದ್ಯ               06
39               ವಿಕೆಟ್ ​             23
29.97          ಸರಾಸರಿ           26.47

ಕೇವಲ ಬೌಲಿಂಗ್​ ಮಾತ್ರವಲ್ಲ..! ವಿದೇಶಿ ಪಿಚ್​ಗಳಲ್ಲಿ ಬ್ಯಾಟಿಂಗ್​ನಲ್ಲಿ ನೆರವಾಗಬಲ್ಲ ಸಾಮರ್ಥ್ಯ ಈ ಇಬ್ಬರಿಗಿದೆ. ಕಳೆದ ಆಸ್ಟ್ರೇಲಿಯಾ ಪ್ರವಾಸದ ನಂತರದ ದಿನಗಳಲ್ಲಿ ಎದುರಾಳಿ ತಂಡಗಳಿಗೆ ಟೀಮ್​ ಇಂಡಿಯಾದ ಲೋಯರ್​​ ಆರ್ಡರ್​​​ ಬ್ಯಾಟಿಂಗ್​ ವಿಭಾಗ ತಲೆನೋವಾಗಿದೆ. ಅದರಲ್ಲೂ ಜಡೇಜಾ ಹಾಗೂ ಅಶ್ವಿನ್​ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಸಮರ್ಥವಾಗಿ ಬ್ಯಾಟಿಂಗ್​ ನಡೆಸೋ ಸಾಮರ್ಥ್ಯವನ್ನ ಹೊಂದಿರೋದು ಕಿವೀಸ್​ ಪಾಳಯದ ತಲೆನೋವನ್ನ ಇನ್ನಷ್ಟು ಹೆಚ್ಚಿಸಿದೆ.

 

ವಿದೇಶದಲ್ಲಿ ಜಡೇಜಾ-ಅಶ್ವಿನ್​ ಬ್ಯಾಟಿಂಗ್​
ಅಶ್ವಿನ್​                         ಜಡೇಜಾ
31            ಪಂದ್ಯ            18
1191          ರನ್​ ​            748
2/4          100/50           0/6

ಸೇನಾ ರಾಷ್ಟ್ರಗಳು, ವಿದೇಶಿ ನೆಲದಲ್ಲಿ ಆಲ್​ರೌಂಡರ್​​ ಪರ್ಫಾಮೆನ್ಸ್​ ನೀಡಿರುವ ಈ ಜೋಡಿ ಆಂಗ್ಲರ ನಾಡಲ್ಲೂ ಸಾಮರ್ಥ್ಯ ಮೆರೆದಿದೆ. ಇಂಗ್ಲೆಂಡ್​​ ನೆಲದಲ್ಲಿ 5 ಟೆಸ್ಟ್​ ಪಂದ್ಯಗಳನ್ನಾಡಿರುವ ಜಡೇಜಾ, 276 ರನ್ ದಾಖಲಿಸಿ 16 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು 6 ಪಂದ್ಯಗಳನ್ನಾಡಿರೋ ಅಶ್ವಿನ್, 232 ರನ್ ಕಲೆಹಾಕಿ 14 ವಿಕೆಟ್ ಉರುಳಿಸಿದ್ದಾರೆ.

ಇದರ ಜೊತೆಗೆ ಎದುರಾಳಿ ನ್ಯೂಜಿಲೆಂಡ್​ ಪಡೆಯನ್ನ ಈ ಜೋಡಿ ಟೆಸ್ಟ್​​ ಕ್ರಿಕೆಟ್​​ನಲ್ಲಿ ಈವರೆಗೆ ಬಹುವಾಗಿ ಕಾಡಿದೆ. ನ್ಯೂಜಿಲೆಂಡ್​ ವಿರುದ್ಧ 6 ಟೆಸ್ಟ್​ ಪಂದ್ಯಗಳನ್ನಾಡಿರುವ ಅಶ್ವಿನ್, 144 ರನ್ ಗಳಿಸಿ 48 ವಿಕೆಟ್ ಬೇಟೆಯಾಡಿದ್ದಾರೆ. ಇಷ್ಟೇ ಪಂದ್ಯಗಳನ್ನಾಡಿ 234 ರನ್ ಗಳಿಸಿರುವ ಜಡೇಜಾ 19 ವಿಕೆಟ್ ಉರುಳಿಸಿದ್ದಾರೆ.

ಅಶ್ವಿನ್​ – ಜಡೇಜಾರ ಈ ಅಂಕಿ-ಅಂಶಗಳ ಲೆಕ್ಕಾಚಾರವೇ ನ್ಯೂಜಿಲೆಂಡ್​ ಪಾಳಯಕ್ಕೆ ಸಿರೀಯಸ್​ ಥ್ರೆಟ್​ ಆಗಿದೆ. ಇದರ ಜೊತೆಗೆ ಈ ಇಬ್ಬರ ರೆಡ್​ ಹಾಟ್​ ಫಾರ್ಮ್​ ಕೂಡ ಬ್ಲ್ಯಾಕ್​​​ಕ್ಯಾಪ್ಸ್​​ ಪಾಳಯಕ್ಕೆ ತಲೆನೋವಾಗಿದೆ. ಹಾಗೆಂದ ಮಾತ್ರಕ್ಕೆ ವಿಲಿಯಮ್​​ಸನ್​ ಪಡೆ ತಂತ್ರಕ್ಕೆ ಪ್ರತಿತಂತ್ರ ರೂಪಿಸದೇ ಇರಲಾರದು. ಆ ಪ್ರತಿತಂತ್ರಗಳನ್ನ ಈ ಸಕ್ಸಸ್​ಫುಲ್​ ಜೋಡಿ ಹೇಗೆ ಮೆಟ್ಟಿ ನಿಲ್ಲುತ್ತೆ ಅನ್ನೋದೇ ಸಧ್ಯದ ಕುತೂಹಲ.

The post WTC ಫೈನಲ್- ನ್ಯೂಜಿಲೆಂಡ್​ಗೆ ಶುರುವಾಯ್ತು ಅಶ್ವಿನ್-ಜಡೇಜಾ ಟೆನ್ಶನ್..? appeared first on News First Kannada.

Source: newsfirstlive.com

Source link