ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಸುಸ್ಥಿತಿಯಲ್ಲಿದೆ. ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ ಇಂಡಿಯಾಗೆ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಶುಭ್​ಮನ್​ ಗಿಲ್​, ರೋಹಿತ್​ ಶರ್ಮಾ ಅರ್ಧಶತಕದ ಜೊತೆಯಾಟವಾಡಿದ್ರು. ರೋಹಿತ್​ ಶರ್ಮಾ 34 ರನ್​ಗಳಿಸಿ ಔಟಾದ್ರೆ, ಶುಭ್​ಮನ್​ಗಿಲ್​ ಆಟ 28 ರನ್​ಗಳಿಗೆ ಅಂತ್ಯವಾಯ್ತು. ಆ ಬಳಿಕ ಕ್ರೀಸ್​​ನಲ್ಲಿ ಜೊತೆಯಾಗಿರುವ ವಿರಾಟ್​ ಕೊಹ್ಲಿ, ಚೇತೇಶ್ವರ್​ ಪೂಜಾರ ಟೀಮ್​ ಇಂಡಿಯಾಗೆ ಆಧಾರವಾಗಿದ್ದಾರೆ. ಮೊದಲ ಸೆಷನ್​ನ ಅಂತ್ಯಕ್ಕೆ ಟೀಮ್​ ಇಂಡಿಯಾ 2 ವಿಕೆಟ್​​​ ನಷ್ಟಕ್ಕೆ 69 ರನ್​ ಕಲೆ ಹಾಕಿದೆ. 6 ರನ್​ಗಳೊಂದಿಗೆ ವಿರಾಟ್​​ ಕೊಹ್ಲಿ ಹಾಗೂ ಚೇತೇಶ್ವರ್​ ಪೂಜಾರ ಕ್ರಿಸ್​​​ ಕಾಯ್ದುಕೊಂಡಿದ್ದಾರೆ.

The post WTC ಫೈನಲ್ DAY 2​- ಮೊದಲ ಸೆಷನ್​ ಅಂತ್ಯಕ್ಕೆ ಟೀಮ್ ಇಂಡಿಯಾ 69/2 appeared first on News First Kannada.

Source: newsfirstlive.com

Source link