Xi Jinping: ಗೃಹಬಂಧನದಲ್ಲಿದ್ದಾರಾ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್? | Xi Jinping is China President Xi Jinping under House Arrest Rumours Swirling in Social Media


ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಬಗ್ಗೆ ವದಂತಿಗಳು ಹರಿದಾಡುತ್ತಿವೆಯೇ ಹೊರತು ಅದಕ್ಕೆ ಯಾವುದೇ ಸಾಕ್ಷಿಗಳಾಗಲಿ, ಆ ಬಗ್ಗೆ ಅಧಿಕೃತ ಮಾಹಿತಿಯಾಗಲಿ ಇನ್ನೂ ಹೊರಬಿದ್ದಿಲ್ಲ.

Xi Jinping: ಗೃಹಬಂಧನದಲ್ಲಿದ್ದಾರಾ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್?

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌

ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ (xi Jinping) ಅವರನ್ನು ಗೃಹಬಂಧನದಲ್ಲಿ (House Arrest) ಇರಿಸಲಾಗಿದೆಯೇ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಟ್ವಿಟ್ಟರ್​ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ. ಕಳೆದ 2 ವರ್ಷಗಳಿಂದ ಚೀನಾ ಅಧ್ಯಕ್ಷ (China President) ಕ್ಸಿ ಜಿನ್‌ಪಿಂಗ್‌ ಬೀಜಿಂಗ್‌ನಲ್ಲಿರುವ ತಮ್ಮ ಮನೆಯಿಂದ ಹೊರಬಂದಿಲ್ಲ ಮತ್ತು ಯಾವುದೇ ಜಾಗತಿಕ ನಾಯಕರನ್ನು ಭೇಟಿಯಾಗಲಿಲ್ಲ. ಹಾಗೇ, ಯಾವುದೇ ಪ್ರಮುಖ ಸಿಸಿಪಿ ನಾಯಕರನ್ನು ಕೂಡ ಭೇಟಿಯಾಗಿಲ್ಲ ಎನ್ನಲಾಗುತ್ತಿದೆ.

ಆದರೆ, ಕಳೆದ ಸೆಪ್ಟೆಂಬರ್ 14ರಂದು ನಿರಂಕುಶ ನಾಯಕ ಕ್ಸಿ ಜಿನ್​ಪಿಂಗ್ ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆಯುವ ಎಸ್​ಸಿಓ (SCO) ಸಭೆಯಲ್ಲಿ ಪಾಲ್ಗೊಳ್ಳಲು ತನ್ನ ಮನೆಯಿಂದ ಹೊರಬಂದಿದ್ದರು. 2 ವರ್ಷಗಳ ವಿರಾಮದ ನಂತರ ಕ್ಸಿ ಜಿನ್​ಪಿಂಗ್ ವಿಶೇಷ ವಿಮಾನದ ಮೂಲಕ ಮಧ್ಯ ಏಷ್ಯಾಕ್ಕೆ ತೆರಳಿದ್ದರು. ಅಲ್ಲಿ ಶಾಂಘೈ ಸಹಕಾರ ಸಂಸ್ಥೆಯ (SCO) ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್‌ನ 22ನೇ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

SCOದ ಸ್ಥಾಪಕ ಸದಸ್ಯನಾಗಿದ್ದರೂ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಆ ಶೃಂಗಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಯಾವುದೇ ಸ್ಮರಣೀಯ ಭಾಷಣವನ್ನು ನೀಡಲಿಲ್ಲ. ತಮ್ಮ ಜೊತೆಗಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅಥವಾ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಯಾವುದೇ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಲಿಲ್ಲ. ಕ್ಸಿ ಜಿನ್​ಪಿಂಗ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ಬಗ್ಗೆ ವದಂತಿಗಳು ಹರಿದಾಡುತ್ತಿವೆಯೇ ಹೊರತು ಅದಕ್ಕೆ ಯಾವುದೇ ಸಾಕ್ಷಿಗಳಾಗಲಿ, ಆ ಬಗ್ಗೆ ಅಧಿಕೃತ ಮಾಹಿತಿಯಾಗಲಿ ಇನ್ನೂ ಹೊರಬಿದ್ದಿಲ್ಲ.

TV9 Kannada


Leave a Reply

Your email address will not be published.