Xiaomi Civi 3: ಒಂದಲ್ಲ ಎರಡು ಸೆಲ್ಫಿ ಕ್ಯಾಮೆರಾ: ಮಾರುಕಟ್ಟೆಯನ್ನು ನಡುಗಿಸಿದ ಶವೋಮಿ Civi 3 ಸ್ಮಾರ್ಟ್​ಫೋನ್ | Kannada News | Xiaomi Civi 3 was launched in China with dual front camera system check specs and price


ನೂತನ ಪ್ರಯೋಗದೊಂದಿಗೆ ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡುವ ಶವೋಮಿಯ ಹೊಸ Civi 3 ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ ನೀಡಲಾಗಿದೆ.

ಇಂದು ಸ್ಮಾರ್ಟ್‌ಫೋನ್‌ (Smartphone) ಮಾರುಕಟ್ಟೆ ಸಾಕಷ್ಟು ವಿಸ್ತಾರಗೊಂಡಿದೆ. ಹಲವು ಕಂಪನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀಗಾಗಿ ಸಾಧಾರಣ ಫೀಚರ್​ಗಳಿರುವ ಹಾಗೂ ಇದಕ್ಕೆ ದುಬಾರಿ ಬೆಲೆ ಇರುವ ಮೊಬೈಲ್​ಗಳಿಗೆ ಬೇಡಿಕೆ ಕಮ್ಮಿ. ಏನಾದರು ಹೊಸ ತನದೊಂದಿಗೆ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆದರೆ ಮಾತ್ರ ಅದು ಸದ್ದು ಮಾಡುತ್ತದೆ. ಈ ಟ್ರಿಕ್ ಉಪಯೋಗಿಸುವಲ್ಲಿ ಶವೋಮಿ (Xiaomi) ಸಂಸ್ಥೆ ಎತ್ತಿದ ಕೈ. ಶವೋಮಿ ಯಾವುದೇ ಫೋನ್ ರಿಲೀಸ್ ಮಾಡಿದರೂ ಅದರಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಇದೀಗ ಶವೋಮಿ ಸಂಸ್ಥೆ ಮಾರುಕಟ್ಟೆಗೆ ವಿಶೇಷವಾದ ಶವೋಮಿ Civi 3 (Xiaomi Civi 3) ಎಂಬ ಸ್ಮಾರ್ಟ್‌ಫೋನ್​ನೊಂದಿಗೆ ಬಂದಿದೆ. ಹಾಗಾದರೆ ಇದರಲ್ಲಿ ಏನು ವಿಶೇಷತೆ ಇದೆ?, ಬೆಲೆ ಎಷ್ಟು? ಎಂಬುದನ್ನು ನೋಡೋಣ.

ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ:

ನೂತನ ಪ್ರಯೋಗದೊಂದಿಗೆ ಹೊಸ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡುವ ಶವೋಮಿಯ ಹೊಸ Civi 3 ಸ್ಮಾರ್ಟ್‌ಫೋನ್​ನಲ್ಲಿ ಡ್ಯುಯಲ್‌ ಫ್ರಂಟ್‌ ಕ್ಯಾಮೆರಾ ಸಿಸ್ಟಂ ನೀಡಲಾಗಿದೆ. ಇದು ಇಡೀ ಮೊಬೈಲ್‌ ಮಾರುಕಟ್ಟೆಯನ್ನೇ ದಂಗಾಗುವಂತೆ ಮಾಡಿದೆ. ಇದಿಷ್ಟೆ ಅಲ್ಲದೆ ಈ ಫೋನಿನ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ ಟ್ರೆಂಡ್‌ ಸೃಷ್ಟಿಸಿದೆ. ಉಳಿದಂತೆ ಇದರ ವಿಶೇಷತೆ ಏನಿದೆ ಎಂಬುದನ್ನು ಮುಂದೆ ಓದಿ.

Ashwini Vaishnaw: 6ಜಿ ತಂತ್ರಜ್ಞಾನದಲ್ಲಿ ಜಗತ್ತಿನ ಮುಂದಾಳತ್ವ ವಹಿಸಬಹುದು ಭಾರತ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

TV9 Kannada


Leave a Reply

Your email address will not be published. Required fields are marked *