ಸದ್ಯ ಯಶ್ ಇಟಲಿಯಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಲು ಒಂದು ಕಾರಣ ಇದೆ.

ಯಶ್-ರಾಧಿಕಾ ಪಂಡಿತ್
ನಟ ಯಶ್ (Yash) ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಕೆಜಿಎಫ್ 2’ ಸರಣಿಯಲ್ಲಿ ನಟಿಸಿದ ನಂತರ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಕೆಲ ತಿಂಗಳ ಹಿಂದೆ ತೆರೆಗೆ ಬಂದ ‘ಕೆಜಿಎಫ್ 2’ ಚಿತ್ರದಿಂದ ಯಶ್ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ. ಸದ್ಯ ಯಶ್ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರ ಜತೆ ಯಶ್ ಯುರೋಪ್ ಸುತ್ತಾಡುತ್ತಿದ್ದಾರೆ. ಅಲ್ಲಿಯೂ ಯಶ್ಗೆ ಫ್ಯಾನ್ಸ್ ಎದುರಾಗಿದ್ದಾರೆ. ಈ ಖುಷಿಯನ್ನು ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಕೆಜಿಎಫ್’ ಸರಣಿಯ ಸಿನಿಮಾಗಳಲ್ಲಿ ಯಶ್ ಅವರ ಮ್ಯಾನರಿಸಂ ಸಖತ್ ಇಷ್ಟವಾಗಿತ್ತು. ರಾಕಿ ಆಗಿ ಅವರು ಮಿಂಚಿದ್ದರು. ಈ ಕಾರಣಕ್ಕೆ ಅವರ ಜನಪ್ರಿಯತೆ ಹೆಚ್ಚಿದೆ. ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಇನ್ನೇನು ‘ಯಶ್ 19’ ಚಿತ್ರ ಘೋಷಣೆ ಆಗಬೇಕು ಎನ್ನುವಾಗ ಅವರು ವಿದೇಶಕ್ಕೆ ಹಾರಿದರು. ಸದ್ಯ ಯಶ್ ಇಟಲಿಯಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟ್ ಮಾಡಲು ಒಂದು ಕಾರಣ ಇದೆ.
ಯಶ್ ಬಂದಿರುವ ವಿಚಾರ ಅಲ್ಲಿನ ಹೋಟೆಲ್ ಮಂದಿಗೆ ಗೊತ್ತಾಗಿದೆ. ಯಶ್ ಆ ಸಂದರ್ಭದಲ್ಲಿ ಹೊರಗೆ ತೆರಳಿದ್ದರು. ಕೆಲಸದ ಅವಧಿ ಮುಗಿದರೂ ಯಶ್ ಬರುವವರೆಗೆ ಅವರು ಕಾದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಪ್ರೀತಿಯನ್ನು ನೋಡಿ ಯಶ್ ಸಂತಸ ಹೊರಹಾಕಿದ್ದಾರೆ. ಅವರು ತೋರಿದ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.