Year Ender 2022: ಈ ವರ್ಷದ ಸಿಕ್ಸರ್ ಕಿಂಗ್ ಯಾರು ಗೊತ್ತಾ? – Year Ender 2022: Most sixes in All Format Of Cricket in 2022 Kannada News zp

TV9kannada Web Team

TV9kannada Web Team | Edited By: Zahir PY

Updated on: Dec 29, 2022 | 9:23 PM

Most Sixes in Cricket 2022: ಕೆಲ ಬ್ಯಾಟ್ಸ್​ಮನ್​ಗಳು ಬೌಲರ್​ ಮೇಲೆ ಪರಾಕ್ರಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಕ್ರಿಕೆಟ್​ ಅಂಗಳದಲ್ಲಿ ಈ ವರ್ಷ ಸಿಕ್ಸರ್​ಗಳ ಸುರಿಮಳೆಗೈದ ಬ್ಯಾಟರ್​ಗಳ ಪಟ್ಟಿ ಹೀಗಿದೆ…

Dec 29, 2022 | 9:23 PM

2022ರ ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಎಂದಿನಂತೆ ಈ ವರ್ಷ ಕೂಡ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರೆ, ಮತ್ತೆ ಕೆಲವರು ಕಳಪೆ ಪ್ರದರ್ಶನದಿಂದ ಟೀಕೆಗೊಳಗಾಗಿದ್ದಾರೆ. ಇದಾಗ್ಯೂ ಕೆಲ ಬ್ಯಾಟ್ಸ್​ಮನ್​ಗಳು ಬೌಲರ್​ ಮೇಲೆ ಪರಾಕ್ರಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಕ್ರಿಕೆಟ್​ ಅಂಗಳದಲ್ಲಿ ಈ ವರ್ಷ ಸಿಕ್ಸರ್​ಗಳ ಸುರಿಮಳೆಗೈದ ಬ್ಯಾಟರ್​ಗಳ ಪಟ್ಟಿ ಹೀಗಿದೆ...

2022ರ ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಎಂದಿನಂತೆ ಈ ವರ್ಷ ಕೂಡ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರೆ, ಮತ್ತೆ ಕೆಲವರು ಕಳಪೆ ಪ್ರದರ್ಶನದಿಂದ ಟೀಕೆಗೊಳಗಾಗಿದ್ದಾರೆ. ಇದಾಗ್ಯೂ ಕೆಲ ಬ್ಯಾಟ್ಸ್​ಮನ್​ಗಳು ಬೌಲರ್​ ಮೇಲೆ ಪರಾಕ್ರಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಕ್ರಿಕೆಟ್​ ಅಂಗಳದಲ್ಲಿ ಈ ವರ್ಷ ಸಿಕ್ಸರ್​ಗಳ ಸುರಿಮಳೆಗೈದ ಬ್ಯಾಟರ್​ಗಳ ಪಟ್ಟಿ ಹೀಗಿದೆ…

1- ಸೂರ್ಯಕುಮಾರ್ ಯಾದವ್: ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಸೂರ್ಯ ಈ ವರ್ಷ 44 ಪಂದ್ಯಗಳಲ್ಲಿ 74 ಸಿಕ್ಸ್ ಸಿಡಿಸುವ ಮೂಲಕ 2022ರ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

2- ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್​ನ ಎಡಗೈ ದಾಂಡಿಗ ನಿಕೋಲಸ್ ಪೂರನ್ ಈ ವರ್ಷ 44 ಇನಿಂಗ್ಸ್​ನಲ್ಲಿ ಒಟ್ಟು 59 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಸಿಕ್ಸರ್​ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

3- ಮೊಹಮ್ಮದ್ ವಾಸಿಂ: ಯುಎಇ ತಂಡದ ಆಟಗಾರ ಮೊಹಮ್ಮದ್ ವಾಸಿಂ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಾಸಿಂ ಈ ವರ್ಷ ಒಟ್ಟು 37 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 58 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

4- ಸಿಕಂದರ್ ರಾಜಾ: ಜಿಂಬಾಬ್ವೆ ತಂಡದ ಸ್ಟಾರ್ ಆಟಗಾರ ಸಿಕಂದರ್ ರಾಜಾ ಕೂಡ ಈ ವರ್ಷ ಸಿಕ್ಸರ್​ ಕಿಂಗ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2022ರಲ್ಲಿ 39 ಇನಿಂಗ್ಸ್​ ಆಡಿರುವ ಸಿಕಂದರ್ ಒಟ್ಟು 55 ಸಿಕ್ಸ್ ಬಾರಿಸಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

5- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ ಕೂಡ ಸಿಕ್ಸ್​ ವಿಷಯದಲ್ಲಿ ಬಿದ್ದಿಲ್ಲ. ಈ ವರ್ಷ ಒಟ್ಟು 39 ಇನಿಂಗ್ಸ್​ ಆಡಿರುವ ಹಿಟ್​ಮ್ಯಾನ್ 45 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *