Yediyurappa’s tears were removed by Hoxy as Chief Minister; Rajanna Tong for BJP | ಯಡಿಯೂರಪ್ಪರನ್ನ ಕಣ್ಣೀರು ಹಾಕ್ಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು; ಬಿಜೆಪಿಗೆ ರಾಜಣ್ಣ ಟಾಂಗ್


ಎಲ್ಲಾ ವೈಮನಸ್ಸನ್ನ ಮರೆತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಪ್ರತಿಷ್ಟಾಪನೆ ಮಾಡಬೇಕಾಗಿದ್ದು, ನಾವೆಲ್ಲ ಒಂದಾಗಿ ಇಡೀ ಜಿಲ್ಲೆಯಲ್ಲಿನ 11 ಕ್ಷೇತ್ರವನ್ನ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ರಾಜಣ್ಣ ಹೇಳಿದರು.

ಯಡಿಯೂರಪ್ಪರನ್ನ ಕಣ್ಣೀರು ಹಾಕ್ಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು; ಬಿಜೆಪಿಗೆ ರಾಜಣ್ಣ ಟಾಂಗ್

ಮಾಜಿ ಶಾಸಕ ಕೆ.ಎನ್ ರಾಜಣ್ಣ

ತುಮಕೂರು: ತಿಪಟೂರಿನಲ್ಲಿ ಬಹಳಷ್ಟು ವೀರಶೈವ ಲಿಂಗಾಯತ ಮತಗಳಿವೆ‌. ಷಡಕ್ಷರಿಗೆ ವೋಟ್ ಹಾಕಿದ್ರೆ ಒಬ್ಬ ಲಿಂಗಾಯತ ಎಂಎಲ್ಎ ಆಗ್ತಾನೆ. ಅದೇ ಬಿ.ಸಿ ನಾಗೇಶ್​ಗೆ ವೋಟ್ ಹಾಕಿದ್ರೆ ನಮ್ಮ ಸಮುದಾಯದವ್ರು ಮುಖ್ಯಮಂತ್ರಿ ಆಗುತ್ತಾರೆ ಅದಕ್ಕೂಸ್ಕರ ಈ ಹುಡುಗನನ್ನ ಗೆಲ್ಲಿಸಬೇಕು ಎಂದು ಹೇಳಿ ಹೋಗಿದ್ದರು. ಅದರಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆದರೂ ಆದರೆ ಅವರನ್ನ ಬಿಜೆಪಿ ಕಣ್ಣೀರು ಹಾಕ್ಸಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು, ಹೀಗಾಗಿ ಇನ್ನುಮುಂದೆ ಬಿಜೆಪಿಯವ್ರು ಆ ಸಮುದಾಯದ ಬಳಿ ಹೇಗೆ ಮತ ಕೇಳ್ತಾರೆ ಗೊತ್ತಿಲ್ಲ ಎಂದು ಮಾಜಿ ಶಾಸಕ ರಾಜಣ್ಣ ಪ್ರಜಾಧ್ವನಿ ಸಮಾವೇಶದಲ್ಲಿ ಬಿಜೆಪಿಗೆ ಟಾಂಗ್​ ನೀಡಿದರು.

5 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದ್ರು. ಮಣ್ಣಿನ ಮಕ್ಕಳ ಹೆಸರು ಹೇಳೋಕೆ ಎಲ್ಲರೂ ಹೆದರಿಕೊಳ್ತಾರೆ. ನಮ್ಮ ಜಯಚಂದ್ರ ಹೆದರೋರಲ್ಲ, ಆದ್ರೂ ಅವರು ಅವರ ಹೆಸರು ಎತ್ತಿಲ್ಲ. ಹೆಸರು ಹೇಳದೇ ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ರಾಜಣ್ಣ ಮಾತಾಡಿದರು. ಇಡೀ ರಾಜ್ಯದಲ್ಲಿ ಅನ್ನಕ್ಕೋಸ್ಕರ ಭಿಕ್ಷೆ ಬೇಡೋದಾಗ್ಲಿ, ಹಸಿವಿನ ಬಗ್ಗೆ ಯೋಚನೆ ಮಾಡೋ ಪ್ರಮೇಯವಾಗಲಿ ಇಲ್ಲದೇ ಇರೋದಕ್ಕೆ ಕಾಂಗ್ರೆಸ್ ಸರ್ಕಾರ ಕೊಟ್ಟ ಕೊಡುಗೆಯೇ ಕಾರಣ. ನಾವೆಲ್ಲ ಒಂದಾಗಿ ಇಡೀ ಜಿಲ್ಲೆಯಲ್ಲಿ 11 ಕ್ಷೇತ್ರವನ್ನ ಗೆಲ್ಲಿಸುವ ಕೆಲಸ ಮಾಡ್ಬೇಕಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *