Yoga: ತೀವ್ರ ಒತ್ತಡದಿಂದ ಮುಕ್ತಿ ಪಡೆಯಲು ಈ 5 ಆಸನಗಳನ್ನು ತಪ್ಪದೇ ಮಾಡಿ | Yogasana: Try These Yoga Poses To Boost your energy


Yoga:ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಯೋಗ ಪರಿಣಾಮಕಾರಿ. ಒತ್ತಡ(Stress), ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಯೋಗದ ಮೂಲಕ ಹೋಗಲಾಡಿಸಬಹುದು.

ಖಿನ್ನತೆಯನ್ನು ಹೋಗಲಾಡಿಸುವಲ್ಲಿ ಯೋಗ ಪರಿಣಾಮಕಾರಿ. ಒತ್ತಡ(Stress), ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳನ್ನು ಯೋಗದ ಮೂಲಕ ಹೋಗಲಾಡಿಸಬಹುದು.

ಒತ್ತಡವನ್ನು ದೂರ ಮಾಡುವ ಐದು ಆಸನಗಳ ಬಗ್ಗೆ ಮಾಹಿತಿ

ಸುಖಾಸನ: ನಾನು ಒಮ್ಮೆ ಕೂಡಾ ಯೋಗಾಸನ ಮಾಡಿಲ್ಲ ಅನ್ನುವವರು ಕೂಡ ದಿನವೂ ಒಮ್ಮೆಯಾದರೂ ಮಾಡುವಂಥ ಆಸನವೇ- ಸುಖಾಸನ.

ನಾವೆಲ್ಲರೂ ನೆಲದ ಮೇಲೆ ಊಟಕ್ಕೆ ಕೂರುತ್ತೇವಲ್ಲ, ಅದೇ ಸುಖಾಸನದ ಭಂಗಿ. ಹೀಗೆ ಕುಳಿತಾಗ ಮನಸ್ಸಿಗೆ ಒಂದು ರೀತಿಯ ಸಮಾಧಾನ ಆಗುತ್ತದೆ. ಹಾಗಾಗಿಯೇ ಈ ಆಸನಕ್ಕೆ ಸುಖಾಸನ ಎಂದು ಹೆಸರು ಬಂದಿದೆ. ಸಂಸ್ಕೃತದಲ್ಲಿ ಸುಖಮ್‌ ಎಂದರೆ ಆರಾಮ, ಸುಲಭ, ಸಂತೋಷದಾಯಕ ಇತ್ಯಾದಿ ಅರ್ಥವಿದೆ. ಸುಖಾಸನ ಮಾಡಲು ಕುಳಿತಾಗ ಮೊಣಕಾಲಿನ ಭಾಗವು,
ಎಳೆತಕ್ಕೆ ಒಳಗಾಗುತ್ತದೆ. ಎಲ್ಲಾ ವಯೋಮಾನದವರೂ ಈ ಆಸನ ಮಾಡಬಹುದು.

ಅಭ್ಯಾಸಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಬೆನ್ನು, ಕುತ್ತಿಗೆ ನೇರಮಾಡಿ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ
ಬಲಗಾಲನ್ನು ಮಡಚಬೇಕು. ಎಡಗಾಲನ್ನು ಎಡಬದಿಗೆ ಮಡಚಬೇಕು ಕೈಗಳಲ್ಲಿ ಚಿನ್ಮುದ್ರೆ ಮಾಡಿ ಬೆನ್ನು- ಕುತ್ತಿಗೆಯನ್ನು ನೇರಮಾಡಿ ಕುಳಿತುಕೊಳ್ಳಬೇಕು. ಸ್ವಲ್ಪ ಹೊತ್ತು ನಿರಾಳವಾಗಿ ಉಸಿರಾಡಿ ನಂತರ ವಿರಮಿಸಬೇಕು. ಅನಂತರ ವಿಶ್ರಾಂತಿ ಪಡೆಯಬೇಕು.

ಆನಂದ ಬಾಲಾಸನ: ಇದು ನೋಡುವುದಕ್ಕೆ ಸುಲಭವೆನಿಸಿದರೂ, ಕೆಲವರಿಗೆ ಈ ಆಸನವನ್ನು ಹಾಕಲು ಕಷ್ಟವಾಗಬಹುದು. ಪ್ರಾರಂಭಿಕ ಹಂತದಲ್ಲಿ ಆಸನವನ್ನು ಹಾಕಲು ಕಷ್ಟವೆನಿಸಿದರೆ, ಕಂಬಳಿಯನ್ನು ಕುತ್ತಿಗೆಗೆ ಆಸರೆಯಾಗಿ ಬಳಸಬಹುದು. ಅಭ್ಯಾಸ ಮಾಡುತ್ತಾ ಹೋದಂಗೆಲ್ಲಾ ಸುಲಭವಾಗುತ್ತಾ ಹೋಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.

ಆನಂದ ಬಾಲಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ:
1. ನಿಂತಿರುವ ಭಂಗಿಯಿಂದ ನಿಧಾನವಾಗಿ ನೆಲದ ಮೇಲೆ ಮಲಗುವ ಭಂಗಿಗೆ ಬರಬೇಕು. ಬೆನ್ನನ್ನು ಕೆಳಮುಖ ಮಾಡಿ ಅಡ್ಡಾಗಬೇಕು.
2. ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡೂ ಮಂಡಿಗಳು ನಿಮ್ಮ ಎದೆಯ ಭಾಗಕ್ಕೆ ಸಮೀಪವಿರುವಂತೆ ನೋಡಿಕೊಳ್ಳಬೇಕು.
3. ನಿಮ್ಮ ಕಾಲ್ಬೆರಳನ್ನು ನಿಮ್ಮ ಕೈಗಳಿಂದ ಹಿಡಿಯಬೇಕು.
4. ನಿಮ್ಮ ತೋಳುಗಳನ್ನು ಮತ್ತು ನಿಮ್ಮ ಕಾಲುಗಳನ್ನು ನಿಧಾನವಾಗಿ ಅಗಲಿಸಬೇಕು.
5. ನಿಮ್ಮ ತಲೆ, ಮೂಳೆತುದಿ ಮತ್ತು ತ್ರಿಕಾಸ್ಥಿ ನೆಲಕ್ಕೆ ತಾಕಿರಬೇಕು.
6. ಹಿಮ್ಮಡಿಯನ್ನು ಮೇಲಕ್ಕೆ ಎತ್ತಿರಬೇಕು ಮತ್ತು ನಿಮ್ಮ ಕೈಗಳಿಂದ ಎಳೆದುಕೊಳ್ಳಬೇಕು.
7. ಕುತ್ತಿಗೆ ಹಿಂಭಾಗ, ಭುಜಗಳು ಮತ್ತು ಬೆನ್ನನ್ನು ಸಂಪೂರ್ಣವಾಗಿ ನೆಲಕ್ಕೆ ಅದುಮಿರಬೇಕು.
8. ಧೀರ್ಘವಾಗಿ ಉಸಿರಾಡಿಸಿ ಮತ್ತು ಅದೇ ಭಂಗಿಯಲ್ಲಿ 20-30 ಸೆಕೆಂಡುಗಳ ಕಾಲವಿರಬೇಕು.
9. ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಇದೇ ರೀತಿ 3-4 ಬಾರಿ ಅಭ್ಯಾಸ ಮಾಡಬೇಕು.

ಅಧೋಮುಖ ಶ್ವಾನಾಸನ: ಶ್ವಾನಾಸನ ಹೆಸರೇ ಹೇಳುವಂತೆ ಶ್ವಾನ ಎಂದರೆ ನಾಯಿ. ಅಧೋಮುಖ ಶ್ವಾನಾಸನ ಎಂದರೆ ನಾಯಇ ಭಂಗಿ ಎಂದು ಕರೆಯಲಾಗುತ್ತದೆ.

ಅಧೋಮುಖ ಶ್ವಾನಾಸನ ಮಾಡುವ ವಿಧಾನ
-ನಾಯಿಯಂತೆ ಮೊಣಕಾಲು ಊರಿ ನಿಂತುಕೊಳ್ಳಬೇಡಕು

-ನಿಧಾನವಾಗಿ ಉಸಿರು ಹೊರಹಾಕಿ ಮತ್ತು ಸೊಂಟವನ್ನು ಮೇಲಕ್ಕೆತ್ತಿ, ಮೊಣಕೈ ಮತ್ತು ಮೊಣಕಾಲನ್ನು ನೇರವಾಗಿಸಿ. ದೇಹವು ವಿ ಆಕಾರದಲ್ಲಿರುವಂತೆ ನೋಡಿಕೊಳ್ಳಿ

-ಕೈಗಳು ಭುಜದ ಸಮಾನಾಂತರವಾಗಿರಬೇಕು ಮತ್ತು ಪಾದಗಳು ಸೊಂಟದ ಸಮಾನವಾಗಿರಲಿ. ಹೆಬ್ಬೆರೆಳುಗಳು ಮೇಲಿನ ಭಾಗಕ್ಕೆ ನೋಡುತ್ತಿರಲಿ.

-ಕೈಗಳನ್ನು ನೆಲಕ್ಕೆ ಊರಿಕೊಳ್ಳಿ ಹಾಗೂ ಕುತ್ತಿಗೆ ಎಳೆಯಿರಿ, ಕಿವಿಗಳು ಒಳಭಾಗದ ಕೈಗಳನ್ನು ಮುಟ್ಟಬೇಕು ಮತ್ತು ನಾಭಿ ಕಡೆಗೆ ನೋಟ ಹರಿಸಬೇಕು.

-ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಇರಿ ಮತ್ತು ಇದರ ಬಳಿಕ ಮೊಣಕಾಲುಗಳನ್ನು ಮಡಚಿ ಮೊದಲಿನ ಭಂಗಿಗೆ ಬನ್ನಿ.

ಶವಾಸನ: ಶವಾಸನವು ಒಂದು ಯೋಗ ಭಂಗಿಯಾಗಿದ್ದು, ದೇಹಕ್ಕೆ ನಿರಾಳತೆಯನ್ನು ನೀಡುತ್ತದೆ. ಸಂಪೂರ್ಣವಾಗಿ ದಣಿದ ಬಳಿಕ ಈ ಆಸನವನ್ನು ಮಾಡಿ, ತಕ್ಷಣ ಪರಿಹಾರ ಪಡೆಯಿರಿ.ಶವಾಸನ ತುಂಬಾ ಸರಳವಾಗಿ ಕಾಣುತ್ತದೆ, ಆದರೆ ಇದು ಮಲಗುವುದು ಮಾತ್ರವಲ್ಲದೆ ಮನಸ್ಸಿನ ಭಾವನೆಗಳು ಮತ್ತು ಒಟ್ಟಿಗೆ ದೇಹದ ಆಯಾಸ ಎರಡನ್ನೂ ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ.

ಶವಾಸನ ವಿಧಾನ: ಮೊದಲು ಯೋಗ ಚಾಪೆಯ ಮೇಲೆ ಬೆನ್ನಿಟ್ಟು ಮಲಗಿ ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ, ನಿಮ್ಮ ಎರಡು ಕಾಲುಗಳು ಹರಡಿಕೊಂಡಿರಬೇಕು ಮತ್ತು ಮೊಣಕಾಲುಗಳು, ಉಗುರುಗಳು, ಪಾದಗಳು, ಅಂಗೈಗಳು ಇತ್ಯಾದಿ ವಿಶ್ರಾಂತಿ ಸ್ಥಿತಿಯಲ್ಲಿರಬೇಕು.

ಬಾಲಾಸನ: ಬಾಲಾಸನ ಎಂಬುದು ಸುಲಭ ಆಸನಗಳಲ್ಲಿ ಒಂದು ಬಾಲ ಎಂದರೆ ಮಗು ಎಂದರ್ಥ ಆಸನವೆಂದರೆ ಒಂದು ಭಂಗಿ. ಗರ್ಭಿಣಿಯರು, ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಮಂಡಿ ನೋವಿರುವವರು ಈ ಆಸನಗಳನ್ನು ಮಾಡಬೇಡಿ.

-ನಿಮ್ಮ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ

-ನಿಮ್ಮ ಕಾಲುಗಳನ್ನು ಮಡಚಿ ಮಂಡಿಯೂರಿ ಕುಳಿತುಕೊಳ್ಳಿ

-ನಿಧಾನಕ್ಕೆ ಮುಂದಕ್ಕೆ ಬಾಗಿ

-ನಿಧಾನವಾಗಿ ಕೈ ಮುಂದೆ ಚಾಚಿ ತಲೆಯನ್ನು ಸ್ವಲ್ಪ ಬಾಗಿಸಿ

-ಉಸಿರನ್ನು ಭಿಗಿಯಾಗಿ ಹಿಡಿದುಕೊಳ್ಳಿ

-ಬಳಿಕ ನಿಧಾನವಾಗಿ ಉಸಿರು ಬಿಡಿ.

ಆರೋಗ್ಯದ ಕುರಿತು ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *