Yoga Asanas: ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಮಾಡಿ | These yoga asanas for lead healthy lifestyle


Yoga Asanas: ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಮಾಡಿ

ನೌಕಾಸನ- ನೀವು ಬೆನ್ನಿನ ಮೇಲೆ ಮಲಗಿ. ನಿಮ್ಮ ಮೊಣಕಾಲುಗಳು ಮತ್ತು ಮತ್ತು ಬೆನ್ನನ್ನು ನೇರವಾಗಿರಿಸಿ ಮುಂದಕ್ಕೆ ಚಾಚಿ. ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಬೆನ್ನು ನೇರವಾಗಿರಲಿ. ಈ ಯೋಗ ಭಂಗಿ ನಿಮ್ಮ ಸ್ನಾಯುಗಳನ್ನು ಬಲಗೊಳಿಸಲು ಸಹಾಯಕವಾಗಿದೆ.

ಬದಲಾಗುತ್ತಿರುವ ಜೀವನ ಶೈಲಿ, ಹರಡುತ್ತಿರುವ ರೋಗ-ರುಜುನೆ, ಕಾಯಿಲೆಗಳು ಇವೆಲ್ಲ ನಿಮ್ಮ ನೆಮ್ಮದಿಯನ್ನು ಕಿತ್ತುಕೊಂಡಿರಬಹುದು. ನಿಮ್ಮ ಆರೋಗ್ಯ ಹಾನಿಗೊಳಗಾದಾದ ಮಾನಸಿಕ ಸ್ಥಿತಿ ಹದಗೆಡುವುದು ಸಹಜ. ಹೀಗಿರುವಾಗ ನೀವು ಅರೋಗ್ಯಕರ ಜೀವನ ಶೈಲಿಯನ್ನು ಹೊಂದಬೇಕಾದರೆ ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕಾದರೆ ಈ ಕೆಲವು ಯೋಗ ಭಂಗಿಗಳು ಸಹಾಯಕವಾಗಿದೆ.

ಮಾನಸಿಕ ಆರೋಗ್ಯ ಸುಧಾರಣೆಗೆ ಯೋಗ ಆಸನಗಳು
ಯೋಗವು ಯಾವುದೇ ರೀತಿಯ ಒತ್ತಡ, ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ವ್ಯಾಯಾಮ ಅಭ್ಯಾಸ ಮಾಡುವುದರಿಂದ ಅಂದರೆ ಸೂರ್ಯ ನಮಸ್ಕಾರ, ಯೋಗ ಮುದ್ರೆಗಳು, ಪ್ರಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಇದು ಸಹಾಯಕ. ಜೊತೆಗೆ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡುವಾಗ ಹಿರಿಯ ನಾಗರಿಕರು ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಿ. ನೀವು ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರೆ ಅಥವಾ ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಕೊಳ್ಳಿ, ಜೊತೆಗೆ ನಿಮ್ಮ ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ತೋರದೆ ವೈದ್ಯರಲ್ಲಿ ಸಲಹೆ ಪಡೆಯಿರಿ.

ಯೋಗ ಆಸನಗಳು
ವೃಕ್ಷಾಸನ
ಸಮತೋಲನ ಮತ್ತು ಏಕಾಗ್ರತೆ ಒಳ್ಳೆಯದು
ಕಾಲು ಮತ್ತು ಹೊಟ್ಟೆಯ ಬಲವನ್ನು ನಿಯಂತ್ರಿಸುತ್ತದೆ
ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೆ ಒಳ್ಳೆಯದು

ನೌಕಾಸನ
ಯಾವುದೇ ಬೆನ್ನುನೋವು ಸಂಬಂಧಿತ ಆರೋಗ್ಯ ಸಮಸ್ಯೆ ನಿವಾರಣೆಗೆ ಸಹಾಯಕ
ಸ್ನಾಯುಗಳನ್ನು ಬಲಪಡಿಸುತ್ತದೆ
ಒಟ್ಟಾರೆ ಆರೋಗ್ಯ ಸುಧಾರಣೆಗೆ ಉತ್ತಮ ಯೋಗ ಭಂಗಿ

ಸಮಕೋನಾಸನ
ಸಮತೋಲನವನ್ನು ಸುಧಾರಿಸುತ್ತದೆ
ಬೆನ್ನು ನೋವು ನಿವಾರಿಸುತ್ತದೆ
ಕಾಲು ಸೆಳೆತ, ನೋವಿನ ಸಮಸ್ಯೆ ನಿವಾರಣೆಗೆ ಸಹಾಯಕ
ಸ್ನಾಯುಗಳನ್ನು ಬಲಪಡಿಸುತ್ತದೆ

TV9 Kannada


Leave a Reply

Your email address will not be published. Required fields are marked *