1/4
ಚತುರಂಗ ದಂಡಾಸನ- ನೀವು ನೇರವಾಗಿ ಮಲಗಿಕೊಳ್ಳಿ. ನಿಮ್ಮ ಕೈಗಳು ನೇರವಾಗಿರಲಿ. ನಿಮ್ಮ ಕೈಗಳ ಮೂಲಕ ಮೇಲೆದ್ದುಕೊಳ್ಳಿ. ಕಾಲುಗಳ ತುದಿ ಬೆರಳು ನೆಲಕ್ಕೆ ತಾಗಿರಲಿ. ಇದೇ ಭಂಗಿಯಲ್ಲಿ ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ಇರಿ.
2/4
ನೀವು ಪ್ರತಿನಿತ್ಯ ಯೋಗ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳುವುದರಿಂದ ಆರೋಗ್ಯ ಸುಧಾರಿಸುತ್ತದೆ. ನಿಯಮಿತವಾದ ಯೋಗಾಸನ ಅಭ್ಯಾಸ ನೀವು ಸದೃಢರಾಗಿರಲು ಸಹಾಯ ಮಾಡುತ್ತದೆ.
3/4
ಚಕ್ರಾಸನ- ನೀವು ನೇರವಾಗಿ ನಿಂತುಕೊಳ್ಳಿ. ಹಿಂದಕ್ಕೆ ಸಂಪೂರ್ಣವಾಗಿ ಬಾಗಿ ನಿಮ್ಮ ಕೈಗಳನ್ನು ನೆಲಕ್ಕೆ ತಾಗಿಸಿ. ಈ ಆಸನ ಅಭ್ಯಾಸ ಮಾಡುವ ಮೂಲಕ ನೀವು ಸದೃಢರಾಗುತ್ತೀರಿ.
4/4
ನೌಕಾಸನ- ನೀವು ಬೆನ್ನಿನ ಮೇಲೆ ಮಲಗಿ. ನಿಮ್ಮ ಮೊಣಕಾಲುಗಳು ಮತ್ತು ಮತ್ತು ಬೆನ್ನನ್ನು ನೇರವಾಗಿರಿಸಿ ಮುಂದಕ್ಕೆ ಚಾಚಿ. ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ. ನಿಮ್ಮ ಬೆನ್ನು ನೇರವಾಗಿರಲಿ. ಈ ಯೋಗ ಭಂಗಿ ನಿಮ್ಮ ಸ್ನಾಯುಗಳನ್ನು ಬಲಗೊಳಿಸಲು ಸಹಾಯಕವಾಗಿದೆ.