Yogi Adityanath: ಅಕ್ಷಯ್​ ಕುಮಾರ್ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ | Akshay Kumar starrer Samrat Prithviraj movie declared Tax Free in Uttar Pradesh by CM Yogi Adityanath


Yogi Adityanath: ಅಕ್ಷಯ್​ ಕುಮಾರ್ ನಟನೆಯ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಯೋಗಿ ಆದಿತ್ಯನಾಥ್, ಅಕ್ಷಯ್ ಕುಮಾರ್

Samrat Prithviraj | Tax Free: ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಾಮ್ರಾಟ್​ ಪೃಥ್ವಿರಾಜ್’​ ಚಿತ್ರಕ್ಕೆ ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಯೋಗಿ ಆದಿತ್ಯನಾಥ್​ ಮೆಚ್ಚಿಕೊಂಡಿದ್ದಾರೆ.

ಬಿಡುಗಡೆಗೂ ಮನ್ನವೇ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಸಿನಿಮಾ ಸಖತ್​ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಈಗೊಂದು ಬಂಪರ್​ ಕೊಡುಗೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಬಳಿಕ ಅವರು ಟ್ಯಾಕ್ಸ್​ ಫ್ರೀ ಆದೇಶ ಹೊರಡಿಸಿದ್ದಾರೆ. ಲಖನೌನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ (Akshay Kumar) ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಮಾನುಷಿ ಚಿಲ್ಲರ್​ ನಟಿಸಿದ್ದಾರೆ. ಬುಧವಾರ (ಜೂನ್​ 1) ‘ಸಾಮ್ರಾಟ್​ ಪೃಥ್ವಿರಾಜ್’​ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಕೂಡ ಈ ಸಿನಿಮಾವನ್ನು ನೋಡಿದ್ದಾರೆ.

‘ಸಾಮ್ರಾಟ್​ ಪೃಥ್ವಿರಾಜ್’​ ಚಿತ್ರಕ್ಕೆ ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಯೋಗಿ ಆದಿತ್ಯನಾಥ್​ ಮೆಚ್ಚಿಕೊಂಡಿದ್ದಾರೆ. ಇಡೀ ತಂಡದ ಪ್ರಯತ್ನವನ್ನು ಅವರು ಹೊಗಳಿದ್ದಾರೆ. ‘ಅಕ್ಷಯ್​ ಕುಮಾರ್​ ಅವರು ಭಾರತದ ಇತಿಹಾಸವನ್ನು ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಹಾಗಾಗಿ ಈ ಚಿತ್ರತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಯೋಗಿ ಆದಿತ್ಯನಾಥ್​ ಹೇಳಿದ್ದಾರೆ.

ಈ ಹಿಂದೆ ಕೂಡ ದೇಶಭಕ್ತಿ ಕಥಾಹಂದರ ಇರುವಂತಹ ಸಿನಿಮಾಗಳನ್ನು ಮಾಡಿ ಅಕ್ಷಯ್​ ಕುಮಾರ್ ಸೈ ಎನಿಸಿಕೊಂಡಿದ್ದರು. ಈ ಬಾರಿ ಅವರು ‘ಸಾಮ್ರಾಟ್​ ಪೃಥ್ವಿರಾಜ್​’ ಮೂಲಕ ಐತಿಹಾಸಿಕ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ. ಜೂನ್​ 3ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಸೋನು ಸೂದ್​, ಸಂಜಯ್​ ದತ್​ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗಿದೆ.

TV9 Kannada


Leave a Reply

Your email address will not be published. Required fields are marked *