Yuzvendra Chahal: ಚಹಲ್ ಪತ್ನಿ ಧನಶ್ರೀ ವರ್ಮಾ ವಿಡಿಯೋಗೆ ಜಾಸ್ ಬಟ್ಲರ್ ಮಾಡಿದ ಕಮೆಂಟ್ ಏನು ನೋಡಿ | IPL 2022 Jos Buttler commented on the Yuzvendra Chahal and Dhanashree Verma new Dance video


Yuzvendra Chahal: ಚಹಲ್ ಪತ್ನಿ ಧನಶ್ರೀ ವರ್ಮಾ ವಿಡಿಯೋಗೆ ಜಾಸ್ ಬಟ್ಲರ್ ಮಾಡಿದ ಕಮೆಂಟ್ ಏನು ನೋಡಿ

Chahal, Dhanashree and Jos Buttler

ಭಾರತೀಯ ಕ್ರಿಕೆಟ್​ ಆಟಗಾರರ ಪೈಕಿ ಇತ್ತೀಚೆಗೆ ಮೈದಾನದಿಂದ ಆಚೆಗೂ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವವರ ಪೈಕಿ ಯುಜ್ವೇಂದ್ರ ಚಹಲ್ (Yuzvendra Chahal) ಮುಂಚೂಣಿಯಲ್ಲಿದ್ದಾರೆ. ತಮ್ಮ ಸಂಗಾತಿ ಧನಶ್ರೀ ವರ್ಮಾ (Dhanashree Verma) ಜತೆ ಸಾಮಾಜಿಕ ಜಾಲತಾಣಗಳಲ್ಲಿ ಚಹಾಲ್ ಮಿಂಚುತ್ತಿದ್ದು, ಈ ಜೋಡಿಗೆ ಅಪಾರ ಅಭಿಮಾನಿ ವರ್ಗವೂ ಹುಟ್ಟಿಕೊಂಡಿದೆ. ನೃತ್ಯಪಟು ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಈಗಂತು ಐಪಿಎಲ್ 2022 ನಡೆಯುತ್ತಿರುವುದರಿಂದ ಆಟಗಾರರ ಪತ್ನಿಯರು ಕೂಡ ಮೈದಾನದಲ್ಲಿ ಹಾಜರಿರುತ್ತಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಯುಜ್ವೇಂದ್ರ ಚಹಲ್ ಜೊತೆ ಅವರ ಪತ್ನಿ ಕೂಡ ಮೈದಾನದಿಂದ ಮೈದಾನಕ್ಕೆ ಸುತ್ತಾಡುತ್ತಿದ್ದಾರೆ. ಆರ್ ಆರ್ ತಂಡದ ಪಿಂಕ್ ಕಲರ್ ಜೆರ್ಸಿಗೆ ಹೊಮ್ಮುವಂತಹ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಇದೀಗ ಬಿಡುವಿನ ಸಮಯದಲ್ಲಿ ಚಹಲ್ ಜೊತೆ ಧನಶ್ರೀ ವಿಡಿಯೋ ಒಂದನ್ನು ಮಾಡಿದ್ದು, ಇದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಚಹಲ್ ಹಾಗೂ ಧನಶ್ರೀ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಜೊತೆಗೆ ಮೈದಾನಕ್ಕೆ ಪ್ರವೇಶಿಸುವ ವಿಡಿಯೋ ಕೂಡ ಇದೆ. ಇದಕ್ಕೆ ರಾಜಸ್ಥಾನ್ ತಂಡದ ಸ್ಫೋಟಕ ಬ್ಯಾಟರ್ ಜಾಸ್ ಬಟ್ಲರ್ ಕಮೆಂಟ್ ಮಾಡಿದ್ದು, “ನೈಸ್ ಮೂವ್ ಯುಜ್ವೇಂದ್ರ ಚಹಲ್” ಎಂದು ಬರೆದಿದ್ದಾರೆ. ಅಷ್ಟೆ ಅಲ್ಲದೆ ಆರ್ ಆರ್ ತಂಡದ ಅಧಿಕೃತ ಟ್ವಿಟರ್ ಖಾತೆ ಸೇರಿದಂತೆ ಸಾಕಷ್ಟು ಅಭಿಮಾನಿಗಳಿಂದ ಈ ವಿಡಿಯೋಕ್ಕೆ ಕಮೆಂಟ್​​ಗಳ ಮಳೆ ಸುರಿದಿದೆ.

ಧನಶ್ರೀ ವರ್ಮಾ ಅವರು ನೃತ್ಯಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಈ ಚಾನಲ್ 25 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಧನಶ್ರೀ ಬಾಲಿವುಡ್ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಪ್ಲಾಶ್ ಮಾಡುತ್ತಾರೆ. ಇದಲ್ಲದೆ, ಅವರು ಹಿಪ್-ಹಾಪ್​ನಲ್ಲಿ ತರಬೇತಿ ನೀಡುತ್ತಾರೆ. ಧನಶ್ರೀ ಅವರು ನವಿ ಮುಂಬೈನ ಡಿವೈ ಪಾಟೀಲ್ ಡೆಂಟಲ್ ಕಾಲೇಜಿನಲ್ಲಿ 2014 ರಲ್ಲಿ ಶಿಕ್ಷಣ ಪಡೆದರು. ಯುಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ತಮ್ಮ ಸುಂದರವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿಬಿಡುತ್ತಿರುತ್ತಾರೆ. ಈ ಜೋಡಿ ಡಿಸೆಂಬರ್ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಐಪಿಎಲ್ 2022 ಮೆಗಾ ಹರಾಜಿಗೂ ಮುನ್ನ ಚಹಲ್ ಅವರನ್ನು ಆರ್​​ಸಿಬಿ ತಂಡದಿಂದ ಕೈಬಿಟ್ಟಿತ್ತು. ಬಳಿಕ ಹರಾಜಿನಲ್ಲೂ ಖರೀದಿಸುವ ಮನಸ್ಸು ಮಾಡಲಿಲ್ಲ. ಪರಿಣಾಮ ಚಹಲ್ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾದರು. ಇದೀಗ ಆರ್​ ಆರ್ ತಂಡದಲ್ಲಿ ಮಿಂಚುತ್ತಿರುವ ಇವರು ಅತಿ ಹೆಚ್ಚು ವಿಕೆಟ್ ಪಡೆದು ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಇತ್ತೀಚೆಗಷ್ಟೆ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಕೂಡ ಮಿಂಚಿದ್ದರು. ಇದು ಐಪಿಎಲ್ 2022ರ ಮೊದಲ ಹ್ಯಾಟ್ರಿಕ್ ವಿಕೆಟ್ ಆಗಿದೆ.

IPL 2022 Points Table: ಐಪಿಎಲ್ ಪಾಯಿಂಟ್ ಟೇಬಲ್ ಹೇಗಿದೆ?. ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿಯಿದೆ?

Rishabh Pant: ಕೋವಿಡ್​ಗೆ ಸೆಡ್ಡು ಹೊಡೆದ ಡೆಲ್ಲಿ: ಪಂದ್ಯ ಮುಗಿದ ಬಳಿಕ ರಿಷಭ್ ಪಂತ್ ಹೇಳಿದ್ದೇನು ನೋಡಿ

TV9 Kannada


Leave a Reply

Your email address will not be published. Required fields are marked *